ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು 2026 ರ ಹಂಗಾಮಿಗೆ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು ಅನುಮೋದಿಸಿದೆ. 2026 ರ ಖತುವಿನ ಸರಾಸರಿ ಗುಣಮಟ್ಟದ ಕೊಬ್ಬರಿಗೆ ಪ್ರತಿ ಕ್ವಿಂಟಲ್ ಗೆ ರೂ.12,027 , ಮತ್ತು ಉಂಡೆ ಕೊಬ್ಬರಿಗೆ ರೂ.1,500 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆಯು ತೆಂಗು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಒದಗಿಸುವುದಲ್ಲದೆ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಸಂಪುಟ ತಿಳಿಸಿದೆ. ಸರ್ಕಾರವು ಕೊಬ್ಬರಿ ಮತ್ತು ಬಾಲ್ ಕೊಬ್ಬರಿಯ ಬೆಂಬಲ ಬೆಲೆಯನ್ನು 2014ರ ಮಾರುಕಟ್ಟೆ ಹಂಗಾಮಿನಲ್ಲಿ ಕ್ವಿಂಟಾಲ್ ಗೆ ರೂ.5,250 ಮತ್ತು ರೂ5,500 ರಿಂದ ಕ್ವಿಂಟಾಲ್ ಗೆ ರೂ 12,027 ಮತ್ತು ರೂ 12,500 ಕ್ಕೆ ಹೆಚ್ಚಿಸಿದೆ, ಇದು ಕ್ರಮವಾಗಿ ಶೇ. 129 ಮತ್ತು ಶೇ.27ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

