ತೆಂಗಿನಕಾಯಿಗೆ ಮತ್ತೆ ಧಾರಣೆ ಏರಿಕೆ | 50 ರೂಪಾಯಿ ದಾಟಿದ ಧಾರಣೆ |

November 14, 2024
2:22 PM
ತೆಂಗಿನ ಕಾಯಿ ಧಾರಣೆ ಈಗ ಮತ್ತೆ 50 ರೂಪಾಯಿಗೆ ಏರಿಕೆಯಾಗಿದೆ.

ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಕಂಡುಬಂದಿದೆ. ಕೆಲವು ಸಮಯಗಳ ಹಿಂದೆ ಕೆಜಿಗೆ 50 ರೂಪಾಯಿ ತಲಪಿದ್ದ ಧಾರಣೆ ಇದೀಗ ಮತ್ತೆ 50 ರೂಪಾಯಿ ತಲಪಿದೆ. ಸದ್ಯ ಹಸಿ ತೆಂಗಿನಕಾಯಿಗೆ 49 ರೂಪಾಯಿ ಹಾಗೂ ಒಣ ತೆಂಗಿನಕಾಯಿಗೆ 50 ರೂಪಾಯಿಗೆ ಖರೀದಿ ನಡೆದಿದೆ.

Advertisement
Advertisement
Advertisement

ಸೆಪ್ಟಂಬರ್‌ ಹಾಗೂ ಅಕ್ಟೋಬರ್‌ ಸುಮಾರಿಗೆ ಕೆಜಿಗೆ 40-50 ರೂಪಾಯಿ ಆಸುಪಾಸಿನಲ್ಲಿದ್ದ ತೆಂಗಿನ ಕಾಯಿ ಮಾರುಕಟ್ಟೆ ಈಗ ಮತ್ತೆ 50 ರೂಪಾಯಿಗೆ ಏರಿಕೆಯಾಗಿದೆ. ಕೇರಳದಲ್ಲೂ ಧಾರಣೆ ಏರಿಕೆ ಕಂಡಿದೆ. ಗ್ರಾಹಕರಿಗೆ 60-65 ರೂಪಾಯಿಗೆ ಮಾರಾಟವಾಗುತ್ತಿದೆ. ಕರ್ನಾಟಕ,ಕೇರಳ ಹಾಗೂ ತಮಿಳುನಾಡಿನಲ್ಲಿ ತೆಂಗಿನ ಬೆಳೆ ಹೆಚ್ಚು ಇರುವ ಪ್ರದೇಶವಾಗಿದೆ. ಈ ಮೂರು ರಾಜ್ಯಗಳಲ್ಲೂ ತೆಂಗಿನ ಇಳುವರಿ ಕಡಿಮೆಯಾಗಿದೆ. ಈ ಬಾರಿಯ ಬೇಸಗೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದೆ. ಈ ಕಾರಣದಿಂದ ತೆಂಗಿನ ಕಾಯಿ ಇಳುವರಿ ಕಡಿಮೆಯಾಗಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನ ಕಾಯಿಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡಿದೆ.

Advertisement

ಈಗಾಗಲೇ ತಾಪಮಾನ ಏರಿಕೆ ಇರುವುದರಿಂದ ಎಳನೀರಿಗೂ ಬೇಡಿಕೆ ಇದೆ. ಹೀಗಾಗಿ ಎಳನೀರು ಧಾರಣೆಯೂ ಏರಿಕೆಯಾಗಿದೆ. ಎರಡು ತಿಂಗಳಿನಿಂದಲೇ ಎಳನೀರಿಗೆ ಬೇಡಿಕೆ ಇದೆ. ಈ ಕಾರಣದಿಂದ 40-45 ರೂಪಾಯಿ ಇದ್ದ ಧಾರಣೆ ಈಗ 50 ರೂಪಾಯಿ ತಲಪಿದೆ. ಇದರ ಜೊತೆಗೇ ತೆಂಗಿನಕಾಯಿಗೂ ಧಾರಣೆ ಏರಿಕೆಯಾಗಿದೆ.

ಇನ್ನು ತೆಂಗಿನಕಾಯಿಗೆ ಬೇಡಿಕೆಯ ಸಮಯ. ಶಬರಿಮಲೆ ಯಾತ್ರಿಕರು ಸೇರಿದಂತೆ ಹಲವು ಹಬ್ಬಗಳು ಮುಂದಿನ ದಿನಗಳಲ್ಲಿ ಇರಲಿದೆ. ಬೇರೆ ರಾಜ್ಯಗಳಿಂದಲೂ ತೆಂಗಿನಕಾಯಿ ತರಿಸಿಕೊಳ್ಳುವಷ್ಟು ಬೆಳೆಯೂ ಕಡಿಮೆ ಇದೆ. ಹೀಗಾಗಿ ಈ ಪೂರೈಕೆಯ ಕೊರತೆಯು ಮುಂದಿನ ಒಂದೆರಡು ತಿಂಗಳು ಇರುವ ಸಾಧ್ಯತೆ ಇದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 14-11-2024 | ಅಲ್ಲಲ್ಲಿ ಗುಡುಗು ಸಹಿತ ಮಳೆ | ನ.19 ರಿಂದ ಒಣಹವೆ |
November 14, 2024
2:33 PM
by: ಸಾಯಿಶೇಖರ್ ಕರಿಕಳ
ಹತ್ತಿ ಬೆಳೆಗೆ ಬೆಂಬಲ ಬೆಲೆ | 14 ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ  | ಸಚಿವ ಶರಣಬಸಪ್ಪ ದರ್ಶನಾಪುರ
November 14, 2024
9:00 AM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆ | ಮಂಡ್ಯ ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರ
November 14, 2024
8:00 AM
by: The Rural Mirror ಸುದ್ದಿಜಾಲ
ಸರ್ಕಾರಿ ಪಾಠಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ | ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ
November 14, 2024
6:33 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror