ಕಾಫಿನಾಡಿಗೆ ಕಾಫಿ ಸರಬರಾಜು..! | ಶಿರಸಿಯಿಂದ ಚಿಕ್ಕಮಗಳೂರಿಗೆ ಕಾಫಿ ಸರಬರಾಜು ಮಾಡ್ತಿರೋ ಕೃಷಿಕ | ಕಾಫಿಗೆ ಕಾಫಿ ಕುಡಿಸಿದ್ದು ಯಾರು..?

November 9, 2023
1:02 PM
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಡಿಕೈ ಮೂಲದ ರಾಮಚಂದ್ರ ಹೆಗಡೆಯವರು ಕಾಫಿ ಕೃಷಿಯನ್ನು ಮಾಡಿ ಚಿಕ್ಕಮಗಳೂರಿಗೆ ರವಾನೆ ಮಾಡುವ ಮೂಲಕ ಕೃಷಿ ಸಾಧನೆಯನ್ನು ಮಾಡಿದ್ದಾರೆ.

ಸೂರ್ಯನಿಗೆ ಟಾರ್ಚ್‌ ಹಾಕ್ತಿರಾ ಅನ್ನೋ ಮಾತು ನೀವು ಕೇಳಿರಬಹುದು. ಇಲ್ಲಿ ಅದೇ ಕತೆ ಆಗಿದೆ. ಕಾಫಿನಾಡು ಚಿಕ್ಕಮಗಳೂರಿಗೆ ಕಾಫಿ ಸಪ್ಲೈ ಮಾಡ್ತಿದ್ದಾರೆ ಇಲ್ಲೊಬ್ಬ ಕೃಷಿಕ. ಅದು ಕರಾವಳಿಯ ಶಿರಸಿಯಿಂದ. ಹೌದು, ಆಶ್ಚರ್ಯ ಆದ್ರೂ ಇದು ನಿಜ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಫಿ ಘಮಲು ಜೋರಾಗಿದೆ. ಕಾಫಿ (Coffee) ಈ ಮಲೆನಾಡಿಗೆ ಹೊಸತಲ್ಲ. ಹಿಂದೊಮ್ಮೆ ಕಾವೇರಿ ಕಾಫಿ ತಳಿ ಇತ್ತು, ನಂತರ ಹೋಯಿತು. ಇದೀಗ ಟನ್‌ಗಟ್ಟಲೆ ಕಾಫಿಯನ್ನು ಬೆಳೆಯುವ ಪ್ರಯತ್ನವನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಗಡಿ ಕೈ ಮೂಲದ ರಾಮಚಂದ್ರ ಹೆಗಡೆಯವರು ಮಾಡಿದ್ದಾರೆ.

Advertisement
Advertisement

20 ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ: ಮಲೆನಾಡ ಹೆಬ್ಬಾಗಿಲಾದ ಶಿರಸಿಗೆ ಹೆಜ್ಜೆ ಇಡುವ ಮುನ್ನ ಮಲೆನಾಡಿನ ಸೆರಗಾದ ಮುಂಡಗೋಡನ್ನು ದಾಟಬೇಕು. ಈ ಮುಂಡಗೋಡಿಂದ 30 ಕಿಲೋಮೀಟರ್ ದೂರದ ತಾಲೂಕಿನ ಮಳಗಿ ಗ್ರಾಮದಲ್ಲಿ ಕಾಫಿಯನ್ನು ಉಪಬೆಳೆಯಾಗಿ ಪ್ರಯತ್ನಿಸಿದ ಇವರು, ಈಗ ಅರೇಬಿಕ್ ಹಾಗೂ ರೊಬಸ್ಟಾ ಎರಡು ತಳಿಯನ್ನು 20 ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಕೇದಾರ ತೋಟ ಎಂಬ ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಈ ಬೆಳೆಯು ಈಗ ಕಾಫಿ ಹಬ್ ಆದ ಚಿಕ್ಕಮಗಳೂರನ್ನು ತಲುಪುತಿದೆ.

ಚಿಕ್ಕಮಗಳೂರಿಗೆ ಕಾಫಿ ಸರಬರಾಜು: ಇಲ್ಲಿನ ವಾತಾವರಣಕ್ಕೆ ಕಾಫಿ ಚೆನ್ನಾಗಿ ಒಗ್ಗುತ್ತಿದ್ದು ಅಧಿಕ ಇಳುವರಿಯನ್ನು ನೀಡುತ್ತಿದೆ, ಇನ್ನೊಂದು ವಿಶೇಷವೇನೆಂದರೆ ಇಲ್ಲಿನ ಕಾಫಿಯನ್ನು ಕದಂಬ ಮಾರ್ಕೆಟಿಂಗ್ ಸೊಸೈಟಿ ಮೂಲಕ ಚಿಕ್ಕಮಗಳೂರಿನ ಮೂಲದ ಕಂಪೆನಿಗಳು ಖರೀದಿಸುತ್ತವಂತೆ. ಕಾಫಿನಾಡಿಗೇ ಕಾಫಿ ಸರಬರಾಜು ಮಾಡುವಷ್ಟು ಕಾಫಿ ಬೆಳೆಯ ಕ್ರಾಂತಿ ಉತ್ತರ ಕನ್ನಡದಲ್ಲಿ ಆಗಿದ್ದು ಇದೇ ಮೊದಲು.

ಹೆಚ್ಚಿನ ಲಾಭ : ವಾರ್ಷಿಕವಾಗಿ 25-50 ಟನ್‌ನಷ್ಟು ಕಾಫಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೊದಲು ಇದ್ದ ಮಾವಿಗಿಂತ ಹೆಚ್ಚಿನ ಲಾಭವನ್ನು ಈ ಬೆಳೆ ಕೊಡುತ್ತಿದೆ. ಹಾಗೆಯೇ ಈ ಪ್ಲಾಂಟೇಶನ್ ಆಗಿದ್ದು ಕೇವಲ 5 ವರ್ಷದ ಹಿಂದೆ ಅಂದರೆ 2018ರಲ್ಲಿ. ಅಲ್ಲಿ ತನಕ ಇಲ್ಲಿದೆ ಕಾಫಿ ಘಮಲು ಈಗ ಜೋರಾಗಿದೆ. ಸದ್ಯದರಲ್ಲಿಯೇ ಕಾಫಿ ಉತ್ತರ ಕನ್ನಡದ ಪ್ರಮುಖ ಬೆಳೆ ಆಗಲಿದೆ.

Ramachandra Hegade, who tried coffee as a sub-crop in Malagi village of taluk, 30 kilometers away from Mundagode, is now growing Arabica and Robusta in an area of ​​20 acres. This crop, which is grown in an area called Kedara Thota, has now reached Chikkamagaluru, the coffee hub.

– ಅಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror