ಅಸ್ವಸ್ಥಗೊಂಡು ಆಸ್ಪತ್ರೆಗೆ ತೆರಳಿದ ವ್ಯಕ್ತಿಯ ದೇಹದಿಂದ ವೈದ್ಯರ ತಂಡ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದೆ.ಈ ಅಚ್ಚರಿಯ ಘಟನೆಯೊಂದು ಬಾಗಲಕೋಟೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.ದ್ಯಾಮಪ್ಪ ಎಂಬ 58 ವರ್ಷದ ವ್ಯಕ್ತಿ ಅಸ್ವಸ್ಥಗೊಂಡ ಹಿನ್ನೆಲೆ ಮನೆಯವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು.
ಪ್ರಾಥಮಿಕ ಪರೀಕ್ಷೆಗಳಲ್ಲಿ ಸ್ಪಷ್ಟತೆ ಸಿಗದ ಕಾರಣ ತಜ್ಞ ವೈದ್ಯರ ತಂಡ ಎಂಡೋಸ್ಕೋಪಿ ನಡೆಸಲು ನಿರ್ಧರಿಸಿತು. ಪರೀಕ್ಷಾ ವರದಿ ಬಂದಾಗ ಖುದ್ದು ವೈದ್ಯರೇ ಅಚ್ಚರಿಗೊಂಡರು. ಈ ವ್ಯಕ್ತಿಯ ಹೊಟ್ಟೆಯಲ್ಲಿ ಬರೋಬ್ಬರಿ 187 ನಾಣ್ಯಗಳು ಕಂಡುಬಂದಿದ್ದವು. ತಕ್ಷಣ ಆಪರೇಷನ್ ನಡೆಸುವ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಯಿತು. 5 ರೂ. ಮುಖಬೆಲೆಯ 56, 2 ರೂ. ಮುಖಬೆಲೆಯ 51, 1 ರೂ. ಮುಖಬೆಲೆಯ 80 ನಾಣ್ಯಗಳು ದ್ಯಾಮಪ್ಪ ಅವರ ದೇಹದಲ್ಲಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel