ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 187 ನಾಣ್ಯಗಳು….!

November 28, 2022
6:07 PM

ಅಸ್ವಸ್ಥಗೊಂಡು ಆಸ್ಪತ್ರೆಗೆ ತೆರಳಿದ ವ್ಯಕ್ತಿಯ ದೇಹದಿಂದ ವೈದ್ಯರ ತಂಡ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದೆ.ಈ ಅಚ್ಚರಿಯ ಘಟನೆಯೊಂದು ಬಾಗಲಕೋಟೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.ದ್ಯಾಮಪ್ಪ ಎಂಬ 58 ವರ್ಷದ ವ್ಯಕ್ತಿ ಅಸ್ವಸ್ಥಗೊಂಡ ಹಿನ್ನೆಲೆ ಮನೆಯವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು.

ಪ್ರಾಥಮಿಕ ಪರೀಕ್ಷೆಗಳಲ್ಲಿ ಸ್ಪಷ್ಟತೆ ಸಿಗದ ಕಾರಣ ತಜ್ಞ ವೈದ್ಯರ ತಂಡ ಎಂಡೋಸ್ಕೋಪಿ ನಡೆಸಲು ನಿರ್ಧರಿಸಿತು. ಪರೀಕ್ಷಾ ವರದಿ ಬಂದಾಗ ಖುದ್ದು ವೈದ್ಯರೇ ಅಚ್ಚರಿಗೊಂಡರು. ಈ ವ್ಯಕ್ತಿಯ ಹೊಟ್ಟೆಯಲ್ಲಿ ಬರೋಬ್ಬರಿ 187 ನಾಣ್ಯಗಳು ಕಂಡುಬಂದಿದ್ದವು. ತಕ್ಷಣ ಆಪರೇಷನ್ ನಡೆಸುವ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಯಿತು. 5 ರೂ. ಮುಖಬೆಲೆಯ 56, 2 ರೂ. ಮುಖಬೆಲೆಯ 51, 1 ರೂ. ಮುಖಬೆಲೆಯ 80 ನಾಣ್ಯಗಳು ದ್ಯಾಮಪ್ಪ ಅವರ ದೇಹದಲ್ಲಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಪರಸ್ಪರರ ಹೊಲಗಳಲ್ಲಿ ಕೆಲಸ ಮಾಡಿದ ರೈತರು -13 ರೈತ ಗುಂಪುಗಳಿಂದ ₹21 ಲಕ್ಷಕ್ಕೂ ಅಧಿಕ ಕೂಲಿ ವೆಚ್ಚ ಉಳಿತಾಯ
November 3, 2026
7:06 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಲೆ ಕುಸಿತ, ಕಾರ್ಮಿಕರ ಕೊರತೆ – ಬೆಳೆಗಾರರಿಗೆ ಸಂಕಷ್ಟ
November 3, 2026
6:50 AM
by: ದ ರೂರಲ್ ಮಿರರ್.ಕಾಂ
ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹ : ಬೆಳಗಾವಿಯಲ್ಲಿ ರೈತರಿಂದ ‘ಜೈಲ್ ಭರೋ’ ಚಳುವಳಿ ಆರಂಭ
November 3, 2026
6:38 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಪೊಲೀಸ್ ಇಲಾಖೆಯಿಂದ 19 ಅಂಶಗಳ ಮಾರ್ಗಸೂಚಿ
November 3, 2026
6:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror