ರಾಜ್ಯದಲ್ಲಿ ಎನ್‌ಇಪಿಗೆ ಕೋಕ್‌ | ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ |

August 3, 2023
12:09 PM
ಎನ್‍ಇಪಿ ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲು ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮುಂದಿನ ವರ್ಷದಿಂದಲೇ ಎನ್‍ಇಪಿ ರದ್ದು ಮಾಡಿ ಎಸ್‍ಇಪಿ ಜಾರಿಗೆ ಸರ್ಕಾರದ ಚಿಂತನೆ ನಡೆಸಿದೆ.
Advertisement

ರಾಷ್ಟ್ರೀಯ ಶಿಕ್ಷಣದ ನೀತಿ National Policy on Education ಎಂಬುದು ಭಾರತದ ಜನರಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಒಂದು ನೀತಿ. ಈ ನೀತಿಯು ಗ್ರಾಮೀಣ ಮತ್ತು ನಗರ ಭಾರತದ ಕಾಲೇಜು ಮತ್ತು ಪ್ರಾಥಮಿಕ ಶಿಕ್ಷಣವನ್ನು ಒಳಗೊಂಡಿದೆ. 1968 ರಲ್ಲಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಂದ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣದ ನೀತಿ  ಘೋಷಿಸಲ್ಪಟ್ಟಿತು. 1986 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಎರಡನೇ ಬಾರಿಗೆ ಘೋಷಿಸಲ್ಪಟ್ಟಿತು. 2017 ರಲ್ಲಿ ಭಾರತ ಸರ್ಕಾರವು ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣಕ್ಕಾಗಿ ಕರಡು ಸಿದ್ಧತೆಗಾಗಿ ಹೊಸ ಸಮಿತಿಯನ್ನು ನೇಮಿಸಿದೆ.

Advertisement

ಆದರೆ ಕಾಂಗ್ರೆಸ್‍ನ  ಐದು ಗ್ಯಾರಂಟಿ ಬಳಿಕ ಪ್ರಣಾಳಿಕೆಯಲ್ಲಿರುವ ಮತ್ತೊಂದು ಕಾರ್ಯಕ್ರಮ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ ಶುರು ಮಾಡಿದೆ. ಎನ್‍ಇಪಿ ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲು ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಪಡಿಸಲು ಸರ್ಕಾರ ತಯಾರಿ ನಡೆಸಿದೆ. ಎಸ್‍ಇಪಿ ಜಾರಿ ಬಗ್ಗೆ ಈಗಾಗಲೇ ಹಲವು ಹಂತದ ಸಭೆಗಳನ್ನು ಉನ್ನತ ಶಿಕ್ಷಣ ಸಚಿವರೊಂದಿಗೆ ನಡೆಸಲಾಗಿದೆ. ಅದಕ್ಕಾಗಿ ಹಂತ ಹಂತವಾಗಿ ಎನ್‍ಇಪಿ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದಿಂದಲೇ ಎನ್‍ಇಪಿ ರದ್ದು ಮಾಡಿ ಎಸ್‍ಇಪಿ ಜಾರಿಗೆ ಸರ್ಕಾರದ ಚಿಂತನೆ ನಡೆಸಿದೆ.

Advertisement
Advertisement

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‍ಇಪಿ ಅಡಿ ವಿದ್ಯಾರ್ಥಿಗಳನ್ನ ದಾಖಲಾತಿ ಮಾಡಿಕೊಳ್ಳುವುದನ್ನು ಕೈಬಿಡಲಾಗುತ್ತದೆ. ಈಗಾಗಲೇ ಅದರ ಅಡಿ ದಾಖಲಾದ ವಿದ್ಯಾರ್ಥಿಗಳ ಕೋರ್ಸ್ ಮುಕ್ತಾಯಕ್ಕೆ ಕ್ರಮವಹಿಸಲಾಗುತ್ತದೆ. ಎಸ್‍ಇಪಿ ಜಾರಿಗೆ ನೀತಿ ನಿಯಮಗಳು, ಪಠ್ಯಕ್ರಮ ಸೇರಿದಂತೆ ಶಿಕ್ಷಣ ನೀತಿ ರಚನೆಗೆ ತಜ್ಞರ ಸಮಿತಿ ರಚನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಶೀಘ್ರವೇ ತಜ್ಞರ ರಚನೆ ಮಾಡಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ. ಬಹುತೇಕ ರಾಜ್ಯ ಸರ್ಕಾರದ ಅಧೀನದ ವಿವಿಗಳ ಅಭಿಪ್ರಾಯ ಪಡೆದಿರುವ ಸರ್ಕಾರ, ತಜ್ಞರ ಸಮಿತಿಯ ವರದಿ ಪಡೆದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಕ್ರಮಕ್ಕೆ ಮಂದಾಗಲಿದೆ. ಎನ್‍ಇಪಿಯ ಕೆಲವು ಅಂಶಗಳೊಂದಿಗೆ ತಜ್ಞರ ಸಮಿತಿಯಿಂದ ಸರ್ಕಾರವೇ ವಿಶೇಷ ಶಿಕ್ಷಣ ನೀತಿ ರೂಪಿಸಲಿದೆ. ಈ ಯೋಜನೆ ಫಲಿಸಿದರೆ 2024-25ನೇ ಸಾಲಿನಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿಯಾಗುವ ಸಾಧ್ಯತೆ ಇದೆ.

Source : Digital Media

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚೀನಾವನ್ನು ಸೈಡ್‌ಲೈನ್‌ ಮಾಡಿದ ಯುಎಸ್‌ | ಯುಎಸ್‌ನ ವಾಲ್‌ಮಾರ್ಟ್‌ಗೆ ಭಾರತದಿಂದ ಚಿಲ್ಲರೆ ವಸ್ತುಗಳ ರಫ್ತು | ಈ ವರ್ಷ ವಾಲ್‌ಮಾರ್ಟ್‌ ಆಮದು ಮಾಡಿಕೊಂಡ ವಸ್ತು ಎಷ್ಟು..? |
December 1, 2023
2:10 PM
by: The Rural Mirror ಸುದ್ದಿಜಾಲ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ
ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |
December 1, 2023
12:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror