ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ತಾಪಮಾನ ಕುಸಿತದ ಹಿನ್ನಲೆಯಲ್ಲಿ ತೀವ್ರ ಮಂಜು ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ ಬೆಳಗಿನ ಸಮಯದಲ್ಲಿ ಮಂಜಿನ ಪ್ರಭಾವ ಹೆಚ್ಚಾಗಿದ್ದು, ಇದು ಗೋಚರತೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಯಾಣಿಕರು ನಿಧಾನವಾಗಿ ವಾಹನ ಚಲಾಯಿಸಲು ಮತ್ತು ಫಾಗ್ ಲೈಟ್ ಬಳಸಲು ಸೂಚಿಸಲಾಗಿದೆ.
ಈಶಾನ್ಯ ಉತ್ತರ ಪ್ರದೇಶದಲ್ಲಿ ತುಂಬಾ ದಟ್ಟವಾದ ಮಂಜು ಬೀಳುವ ನೀರೀಕ್ಷೆಯಿದೆ ಮತ್ತು ಅಸ್ಸಾಂ, ಮೇಘಾಲಯ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣೀಪುರ, ಮಿಜೋರಾಂ, ತ್ರಿಪುರ, ಒಡಿಶಾ ಮತ್ತು ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ದಟ್ಟವಾದ ಮಂಜು ಬೀಳುವ ಸಾಧ್ಯತೆಯಿದೆ. ಗರಿಷ್ಠ ಮಂಜಿನ ಸಮಯದಲ್ಲಿ ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಬೇಕು ಮತ್ತು ವಾಹನ ಚಲಾಯಿಸುವಾಗ ಫಾಗ್ ಲೈಟ್ ಬಳಸಬೇಕು ಎಂದು ಐಎಮ್ ಡಿ ಸಲಹೆ ನೀಡಿದೆ.
ಮಧ್ಯಪ್ರದೇಶ-ಮಹಾರಾಷ್ಟ್ರದಲ್ಲಿ ಶೀತಗಾಳಿ ಎಚ್ಚರಿಕೆ: ಕಳೆದ ಐದು ದಿನಗಳಿಂದ ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ, ತೆಲಂಗಾಣ ಮತ್ತು ಉತ್ತರ ಒಡಿಶಾದಲ್ಲಿ ಶೀತಗಾಳಿಯ ಪರಿಣಾಮ ಬೀರುತ್ತಿದೆ ಮತ್ತು ಅದು ಮುಂದುವರಿಯುವ ನಿರೀಕ್ಷೆಯಿದೆ. ಈ ಪ್ರದೇಶಗಳು ಮುಂದಿನ ಎರಡು ಮೂರು ದಿನಗಳಲ್ಲಿ ಚಳಿಯಿಂದ ಸ್ವಲ್ಪ ಪರಿಹಾರ ಪಡೆಯಬಹುದು. ಉತ್ತರ ಭಾರತದಲ್ಲಿ ತಾಪಮಾನವು ಸಾಮಾನ್ಯವಾಗಿರುವು ಸಾಧ್ಯತೆಯಿದೆ. ಪಂಜಾಬ್ ಹರಿಯಾಣ ಚಂಡೀಗಢ, ಹಿಮಾಚಲ ಪ್ರದೇಶ ಪೂರ್ವ ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ದಟ್ಟವಾದ ಮಂಜು ಕಂಡುಬರಬಹುದು.
ಪಂಜಾಬ್ ಹರಿಯಾಣದಲ್ಲಿ ತೀವ್ರ ಚಳಿ: ಪಂಜಾಬ್ ಮತ್ತು ಹರಿಯಾಣದಲ್ಲಿ ತೀವ್ರ ಚಳಿ ಇದೆ. ಮಂಗಳವಾರ ಎರಡೂ ನೆರೆಯ ರಾಜ್ಯಗಳಲ್ಲಿ ಅತ್ಯಂತ ಶೀತ ಸ್ಥಳವಾಗಿದ್ದು, ಕನಿಷ್ಠ ತಾಪಮಾನ 3.6 ಡಿಗ್ರಿ ಆಗಿತ್ತು. ಹವಾಮಾನ ಇಲಾಖೆಯ ವರದಿಯ ಪ್ರಕಾರ ಅಮೃತಸರದಲ್ಲಿ ಕನಿಷ್ಠ ತಾಪಾಮನಾ 6.1 ಡಿಗ್ರಿ ಲುಧಿಯಾದಲ್ಲಿ 9.2 ಡಿಗ್ರಿ ಮತ್ತು ಪಟಿಯಾಲದಲ್ಲಿ 10.1 ಡಿಗ್ರಿ ದಾಖಲಾಗಿದೆ. ಚಂಡೀಗಢದಲ್ಲಿಯೂ ಸಹ ಶೀತ ಅಲೆಯ ಪರಿಣಾಮ ಕಂಡುಬಂದಿದ್ದು, ತಾಪಾಮನಾ 8.6 ಡಿಗ್ರಿ ದಾಖಲಾಗಿದೆ. ಹರಿಯಾಣದಲ್ಲಿ ಅಂಬಾಲಾದಲ್ಲಿ ಕನಿಷ್ಠ ತಾಪಮಾನ 10.9 ಡಿಗ್ರಿ ಮತ್ತು ಹಿಸಾರ್ ನಲ್ಲಿ 6.7́ಡಿಗ್ರಿ ದಾಖಲಾಗಿದೆ.


