ದಿತ್ವಾ ಚಂಡಮಾರುತವು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲೂ ಭಾರಿ ಚಳಿ, ಮೋಡ ಮುಸುಕಿದ ವಾತಾವರಣಕ್ಕೆ ಕಾರಣವಾಗಿತ್ತು. ಇದೀಗ ಬಕುಂಗ್ ಚಂಡಮಾರುತವು ಹಿಂದು ಮಹಾಸಾಗರದಲ್ಲಿ ರೂಪುಗೊಳ್ಳುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ವಿಪರೀತ ಚಳಿಗೆ ಕಾರಣವಾಗಿದೆ, ಯಾವುದೇ ರೀತಿಯ ಯಾವುದೇ ರೀತಿಯ ಭೂಕುಸಿತ, ಪ್ರವಾಹ ಇರದು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿ ಚಳಿ ಹೆಚ್ಚಾಗಲಿದೆ. ಈಗಾಗಲೇ ದಕ್ಷಿಣ ಭಾರತದಲ್ಲಿ ಚಳಿ ಉಂಟಾಗಲು ಆರಂಭವಾಗಿದೆ.
ನೈಋತ್ಯ ಹಿಂದೂ ಮಹಾಸಾಗರದಲ್ಲಿ ಬಕುಂಗ್ ಚಂಡಮಾರುತ ರೂಪುಗೊಂಡಿದೆ. ಈ ಮಾರುತವು ಇಂಡೋನೇಷ್ಯಾದಿಂದ ದೂರ ಸರಿಯುತ್ತಿದೆ. ಹವಾಮಾನ ಸಂಸ್ಥೆಗಳ ಪ್ರಕಾರ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಗಂಟೆಗೆ 60 ಕಿಮೀಗಿಂತಲೂ ವೇಗವಾಗಿ ಗಾಳಿ ಬೀಸುತ್ತಿದೆ. ಚಂಡಮಾರುತವು ಸಮುದ್ರಮಟ್ಟಕ್ಕಿಂತ ಮೇಲಿದ್ದು, ಕೆಲವೇ ದಿನಗಳಲ್ಲಿ ದುರ್ಬಲಗೊಳ್ಳಲಿದೆ. ಈ ಚಂಡಮಾರುತ ಭಾರತದಿಂದ ದೂರವೇ ಇದ್ದರೂ, ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಈಶಾನ್ಯ ದಿಕ್ಕಿನಿಂದ ಶೀತಗಾಳಿ ಪ್ರವೇಶಿಸಲು ಕಾರಣವಾಗುತ್ತಿದೆ. ಕರಾವಳಿ ಮತ್ತು ಒಳನಾಡಿನ ಭಾಗದಲ್ಲಿ ತಾಪಮಾನ ಭಾರಿ ಕುಸಿತ ಕಾಣುತ್ತಿದೆ.

