ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

April 25, 2024
10:12 PM

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಈಚೆಗೆ ನಡೆಯಿತು.

Advertisement
Advertisement

ಮಹಾಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್  ವಹಿಸಿ, ಶಿಕ್ಷಕ ರಕ್ಷಕ ಸಂಘದ ಪಾತ್ರದ ಮಹತ್ವವನ್ನು ಉಲ್ಲೇಖಿಸುವುದರೊಂದಿಗೆ ಕಾಲೇಜಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

Advertisement

ನೂತನ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದಯ ಅವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ  ಪ್ರೇಮ, ಸಹ ಕಾರ್ಯದರ್ಶಿಯಾಗಿ  ಸೇಸಮ್ಮ ಇವರು ಆಯ್ಕೆಗೊಂಡರು. ಸದಸ್ಯರುಗಳಾದ  ಶಿವಣ್ಣ,  ಪಾರ್ವತಿ ಹಾಗೂ  ನಾಗೇಶ ಇವರುಗಳು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಮುಂದುವರಿದರು. ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ. ನೂರಂದಪ್ಪ ನಡೆಸಿಕೊಟ್ಟರು.

ಕಾರ್ಯಕ್ರಮವು  ದಿವ್ಯಶ್ರೀ ಜಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.  ಶಿಕ್ಷಕರ ಕಾರ್ಯಕಾರಿ ಸಮಿತಿ,  ಉಪಾಧ್ಯಕ್ಷ   ಡಾ. ಸೀತಾರಾಮ ಪಿ.  ಸ್ವಾಗತಿಸಿದರು. ಶಿಕ್ಷಕ- ರಕ್ಷಕ ಸಂಘದ  ಖಜಾಂಜಿ  ವೆರೋನಿಕಾ ಪ್ರಭಾ ವಿ. ಪಿ.,  2023-2024ರ ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಶಿಕ್ಷಕ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ  ಚಂದ್ರಕಲಾ ವಂದಿಸಿದರು.ಕಾರ್ಯಕ್ರಮವನ್ನು ಪಾವನ ರೈ ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12-07-2024 | ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆ ನಿರೀಕ್ಷೆ | ರಾಜ್ಯದ ವಿವಿದೆಡೆ ಸಾಮಾನ್ಯ ಮಳೆ |
July 12, 2024
2:21 PM
by: ಸಾಯಿಶೇಖರ್ ಕರಿಕಳ
ತಮಿಳುನಾಡಿನಿಂದ ಮತ್ತೆ ‘ಕಾವೇರಿ’ ಕಾಟ : ನಿತ್ಯ 1 ಟಿಎಂಸಿ ನೀರು ಹರಿಸಿ : ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ
July 12, 2024
10:57 AM
by: The Rural Mirror ಸುದ್ದಿಜಾಲ
ಮಳೆಯ ನೀರನ್ನು ವಿಭಜಿಸುವ ಕರ್ನಾಟಕದ ಅದ್ಬುತ ಸ್ಥಳ
July 12, 2024
10:33 AM
by: The Rural Mirror ಸುದ್ದಿಜಾಲ
ಕಣ್ಮರೆಯಾದ ಅಚ್ಚ ಕನ್ನಡದ ಮಾತಿನ ಮಲ್ಲಿ ಅಪರ್ಣಾ | ಕ್ಯಾನ್ಸರ್‌ಗೆ ಬಲಿಯಾದ ಅಪರ್ಣಾ |
July 12, 2024
9:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror