ಕೊಲಂಬಿಯಾ ವಿಮಾನಾಪಘಾತ …. | ಇಲ್ಲಿ ಚಿಂತನೆಯ ವಿಷಯ ಏನು ? | ಮಕ್ಕಳಿಗೆ ಸ್ವಾವಲಂಬನೆಯ ಪಾಠ ಅಗತ್ಯ ಏಕೆ ?

June 11, 2023
1:21 PM
ಕೊಲಂಬಿಯಾ ವಿಮಾನ ಅಪಘಾತದ  40 ದಿನದ ಬಳಿಕ ಪತ್ತೆಯಾದ ಮಕ್ಕಳು ಅಮೆಜಾನ್‌ ಕಾಡಿನಲ್ಲಿ ಬದುಕಿದ ರೀತಿಯ  ಬಗ್ಗೆ ಬಹಳ ಅಚ್ಚರಿಯ ವಿಷಯವಾಗಿತ್ತು. ಇಡೀ ಪ್ರಪಂಚವೇ ಈ ಬಗ್ಗೆ ಗಮನ ಹರಿಸಿದೆ. ಈ ಬಗ್ಗೆ ಚಿಂತಕ, ಬರಹಗಾರ ಪ್ರಬಂಧ ಅಂಬುತೀರ್ಥ ಬರೆದಿದ್ದಾರೆ….

ಈಗ್ಗೆ ನಲವತ್ತೊಂದು ದಿನದ ಹಿಂದೆ ಅಮೇಜಾನ್ ಸಹ್ಯಾದ್ರಿ ಕಾನನ ಶ್ರೇಣಿಯ ಕೊಲಂಬಿಯಾ ದ ಆಗ್ನೇಯ ದಲ್ಲಿ ಏಳು ಜನ ಪ್ರಯಾಣ ಮಾಡುತ್ತಿದ್ದ ಲಘು ವಿಮಾನವೊಂದು ಪತನವಾಗಿ‌ ಒಬ್ಬ ಮಹಿಳೆ , ಆಕೆಯ ಸಂಬಂಧಿ ಒಬ್ಬ ಪುರುಷ ಮತ್ತು ಪೈಲಟ್ ವಿಮಾನ ಅಪಘಾತ ನೆಡೆದ ಸ್ಥಳದಲ್ಲಿ ಶವವಾಗಿ‌ ಸಿಕ್ಕಿದ್ದರು.

Advertisement
Advertisement
Advertisement
Advertisement

ವಿಶೇಷವೇನೆಂದರೆ ಕ್ರಮವಾಗಿ ಹದಿಮೂರು ವರ್ಷ, ಒಂಬತ್ತು ವರ್ಷ, ಏಳು ವರ್ಷ ಮತ್ತು ಹನ್ನೊಂದು ತಿಂಗಳ ಮಗು ಈ ಅಪಘಾತದಲ್ಲಿ ಬದುಕುಳಿದಿದ್ದವು.ಆದರೆ ಆ ಮಕ್ಕಳು ದಟ್ಟ ಅಮೇಜಾನ್ ಕಾಡಿನಲ್ಲಿ ಸುರಕ್ಷಿತ ಜಾಗವನ್ನರಿಸುವ ಪ್ರಯತ್ನ ದಲ್ಲಿ ದಾರಿ ತಪ್ಪಿಸಿಕೊಂಡಿದ್ದವು.ಕೊಲಂಬಿಯಾ ಸರ್ಕಾರ ನೂರು ಜನ ಸೈನಿಕರನ್ನು ಈ ಮಕ್ಕಳ ಹುಡುಕಲು ವಿಮಾನಪಘಾತವಾದ ಸ್ಥಳದಲ್ಲಿ ಯೋಜನೆ ಮಾಡಿತ್ತು.ಈ ಮಿಲಟರಿ ವಿಶೇಚ ಪಡೆಗೆ ಸತತ ನಲವತ್ತು ದಿನಗಳ ಹುಡುಕಾಟದ ಪ್ರಯತ್ನದ ನಂತರ ಮಕ್ಕಳು ಕಾಡಿನಲ್ಲಿ ಸುರಕ್ಷಿತವಾಗಿ ಸಿಕ್ಕಿದವು.

Advertisement

ಸರ್ಕಾರ ಹೆಲೆಕ್ಯಾಪ್ಟರ್ ಮೂಲಕ ಅಲ್ಲಲ್ಲಿ ಆಹಾರದ ಪ್ಯಾಕೆಟ್ ಹಾಕಿತ್ತು.‌ ಈ ಮಕ್ಕಳ ಅಜ್ಜಿಯಿಂದ ಮಕ್ಕಳಿಗೆ ದೈರ್ಯ ತುಂಬುವ ಮಾತನಾಡಿದ ಸಂಭಾಷಣೆಯ ಆಡಿಯೋ ವನ್ನು ಕಾಡಿನ ಅಲ್ಲಲ್ಲಿ ಪ್ರಸರಣ ಮಾಡುವ ಪ್ರಯತ್ನ ಮಾಡಲಾಗಿತ್ತು.
ಆದರೆ ಸರ್ಕಾರದ ಆಹಾರ ಪ್ಯಾಕೆಟ್ ಬಳಸದೆಯೂ ಆ ಹನ್ನೊಂದು ತಿಂಗಳ ಮಗು ಸಹಿತ ಮೂವರು ಮಕ್ಕಳು ಅಂತಹ ದಟ್ಟ ಅರಣ್ಯದಲ್ಲಿ ಕಾಡು ಪ್ರಾಣಿ ಗಳ ಕೈಗೆ ಸಿಗದೇ ಅಲ್ಲಲ್ಲಿ ಸಿಗುವ ಹಣ್ಣು ಹಂಪಲುಗಳನ್ನೂ ಮತ್ತು ನದಿ ತೊರೆಗಳಲ್ಲಿ ಮೀನು ಹಿಡಿದು ತಿಂದು ನಲವತ್ತು ದಿನ‌ ಯಶಸ್ವಿಯಾಗಿ ಕಾಡಿನಲ್ಲಿ ಕಳೆದು ಜೀವಂತವಾಗಿ ಮಿಲಿಟರಿ ಪಡೆಗೆ ಸಿಕ್ಕಿದವು.

ಅಚ್ಚರಿಯಲ್ವೆ…?ಈ ಮಕ್ಕಳನ್ನು ಬೆಳಸಿದ ರೀತಿ ಅದ್ಭುತವಲ್ವ…?. ಅಂತಹ ಕಾಡಿನಲ್ಲಿ ಮಕ್ಕಳು ಅಂತಹ ಅಪಘಾತದ ಆಘಾತವಾಗಿಯೂ ಸ್ಥೈರ್ಯ ದಿಂದ ಹನ್ನೊಂದು ತಿಂಗಳ ಮಗು ವನ್ನು ಜೊತೆಯಲ್ಲಿಟ್ಟುಕೊಂಡು ಅದಕ್ಕೆ ಆಹಾರ ತಿನ್ನಿಸಿ ಲಾಲನೆ ಪಾಲನೆ ಮಾಡಿ‌ ತಾವೂ ಆಹಾರ ಸಂಗ್ರಹಿಸಿ ತಿಂದು “ರಕ್ಷಕ” ರು ಸಿಗುವ ತನಕ ಹೋರಾಟ ಮಾಡಿ ಬದುಕಿದ್ದು ಅತ್ಯದ್ಭುತವಲ್ವ…?

Advertisement

ನಾವು ಇವತ್ತು ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತೀವಿ…? ಹದಿನಾಲ್ಕು ವರ್ಷದ ಮಕ್ಕಳಿಗೂ ಬಾಯಿಗೆ ಅನ್ನ ಕಲೆಸಿ ಉಣ್ಣಿಸುವವರಿದ್ದಾರೆ.‌ ಒಂದು ಹನಿ ಮಳೆ ನೀರಿಗೆ ಮೈಯೊಡ್ಡದ, ಹಸಿವು ಎಂದರೆ ಏನೆಂಬುದೇ ಅರಿವಾಗದಂತೆ ಆಹಾರ ಉಣ್ಣಿಸಿ ಬೆಳೆಸುತ್ತಿದ್ದೇವೆ…!! ಆದರೆ ಇಂತಹ ಕಷ್ಟ ಗಳಿಗೆ ನಮ್ಮ ಮಕ್ಕಳು ಸಿಲುಕಿದ್ದಿದ್ದರೆ…? (ಎಂದೂ ಸಿಲುಕದಿರಲಿ)
ಹೌದು ನಾವು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಬದುಕುವುದು ಹೇಗೆಂದು ಕಲಿಸಬೇಕು. ಕುಂಟೆ ಕ್ವಾಣ ನಷ್ಟು ವಯಸ್ಸಿನ ಮಕ್ಕಳು ಉಂಡ ತಟ್ಟೆ ತೊಳೆಯವು… ಕನಿಷ್ಠ ಅಡಿಗೆ ಮನೆಯಿಂದ ನೀರು ಲೋಟದಲ್ಲಿ ತೆಗೆದುಕೊಂಡೂ ಕುಡಿಯಲೊಲ್ಲವು…!!!
ಮಕ್ಕಳಿಗೆ ಸ್ವಾವಲಂಬನೆಯನ್ನೇ ಕಲಿಸದ ಇಂದಿನ ಪೋಷಕರು ಇಂತಹ ಅಪಘಾತ , ಅಪಹರಣ ದಂತಹ ಸಂಧರ್ಭದಲ್ಲೂ ಅಥವಾ ಇದೇ ಮಕ್ಕಳು ದೊಡ್ಡವರಾದ ಮೇಲೂ ಪರಿತಪಿಸಿ ಸಂತ್ರಸ್ತರಾಗುವಂತೆ ಬೆಳೆಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ನಾನು ಆರ್ ಎಸ್ ಎಸ್ ನವರ “ಗುರು ಕುಲ ಶಿಕ್ಷಣ ಪದ್ದತಿ” ಯನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ.
ಅಲ್ಲಿ ಮಕ್ಕಳಿಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದನ್ನು ಕಲಿಸುವುದರ ಜೊತೆಯಲ್ಲಿ ಮಕ್ಕಳಿಗೆ ಕೃಷಿ ಹೈನುಗಾರಿಕೆ ಸಹಿತ ಹಲವಾರು “ಜೀವನ ಕಲೆ” ಯ ಶಿಕ್ಷಣ ಕೊಡುತ್ತಾರೆ. ಆಸಕ್ತರು ಚಿಕ್ಕ ಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದ ಪ್ರಭೋದಿನಿ‌ ಶಿಕ್ಷಣ ಸಂಸ್ಥೆಗೆ ಬೇಟಿ ನೀಡಬಹುದು.

Advertisement

ಕೊಲಂಬಿಯಾದಲ್ಲೂ ಮಕ್ಕಳಿಗೆ ಸ್ವಾವಲಂಬನೆಯ‌ ಶಿಕ್ಷಣ ಕೊಟ್ಟ ಪರಿಣಾಮ ಆ ಮಕ್ಕಳು ಅಂತಹ ದುರ್ಗಮ ಕಾಡಿನಲ್ಲಿ ಕ್ರೂರ ಮೃಗಗಳ ನಡುವೆ ಬಚಾವಾಗಿ ತಮ್ಮ ಆಹಾರವನ್ನು ಹುಡುಕಿ ತಿಂದು ನಲವತ್ತು ದಿನಗಳ ಸುದೀರ್ಘ ಅವಧಿಯಲ್ಲಿ ಬದುಕಿವೆ…
ಈ ಮಕ್ಕಳ ಸ್ಥೈರ್ಯ ಧೈರ್ಯವನ್ನು ಎಷ್ಟು ಮೆಚ್ಚಿದರೂ ಸಾಲದು. ಈ ಮಕ್ಕಳ ಪೋಷಕರನ್ನ ಈ. ಸಂಧರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲೇ ಬೇಕು.

ಬರಹ :
ಪ್ರಬಂಧ ಅಂಬುತೀರ್ಥ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror