ವಿಮಾನ ಅಪಘಾತದ 40 ದಿನಗಳ ಬಳಿಕ ಪತ್ತೆಯಾದ ಮಕ್ಕಳು | ಕೊಲಂಬಿಯಾದ ಅಮೆಜಾನ್‌ ಕಾಡಿನಲ್ಲಿ ಪತನವಾಗಿದ್ದ ವಿಮಾನ |

June 11, 2023
10:57 AM

ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ಕು ಮಕ್ಕಳು ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ 40 ದಿನಗಳ ನಂತರ ಪತ್ತೆಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮಿಲಿಟರಿ ಪಡೆ ಶೋಧ ಕಾರ್ಯ ನಡೆಸುತ್ತಿತ್ತು. ಅಪಘಾತದಲ್ಲಿ ವಿಮಾನದ ಪೈಲಟ್‌ ಹಾಗೂ ಇತರ ಮೂವರು ಶವಗಳನ್ನು ಸೈನ್ಯವು ಅಪಘಾತದ ಸ್ಥಳದಲ್ಲಿ ಪತ್ತೆ ಮಾಡಿತ್ತು. ಆದರೆ ಮಕ್ಕಳ ಸುಳಿವು ಪತೆತಯಾಗಿರಲಿಲ್ಲ.  

Advertisement

ಈ ಮಕ್ಕಳ ಪತ್ತೆ ಕಾರ್ಯದ ಬಳಿಕ ಕೊಲಂಬಿಯಾ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದು,  “ಇಡೀ ದೇಶಕ್ಕೆ ಸಂತೋಷವಾಗಿದೆ” ಎಂದು ಹೇಳಿದರು.

ಮೇ 1 ರಂದು ಅಮೆಜಾನ್ ಕಾಡಿನಲ್ಲಿ ಅವರ ಲಘು ವಿಮಾನ ಇಂಜಿನ್ ವೈಫಲ್ಯದಿಂದಾಗಿ  ಪತನಗೊಂಡು ಮಕ್ಕಳ ತಾಯಿ ಮತ್ತು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು. ಆ ಬಳಿಕ ಮೂವರ ಮೃತದೇಹ ಪತ್ತೆಯಾಗಿತ್ತು, ಆದರೆ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ಅಲ್ಲಿನ ಸೇನೆ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ನಡುವೆ ಮಕ್ಕಳು ಪತ್ತೆಯಾಗಿದ್ದಾರೆ ಎಂದು ಕಳೆದ ತಿಂಗಳು ಕೊಲಂಬಿಯಾ ಅಧ್ಯಕ್ಷರು ಟ್ವೀಟ್‌ ಮಾಡಿ ಟೀಕೆಗೆ ಒಳಗಾಗಿದ್ದರು. ಕೊಲಂಬಿಯಾದ ಮಕ್ಕಳ ಕಲ್ಯಾಣ ಸಂಸ್ಥೆಯು ತನ್ನ ಕಚೇರಿಗೆ ನೀಡಿದ ಮಾಹಿತಿಯನ್ನು  ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅವರು ಮರುದಿನ ಟ್ವೀಟ್ ಮೂಲಕ ತಿಳಿಸಿ ಗೊಂದಲ ನಿವಾರಿಸಿದ್ದರು. ಅದಾದ ಬಳಿಕ ನಿರಂತರ ಪತ್ತೆ ಕಾರ್ಯ ಆರಂಭವಾಗಿತ್ತು.

40 ದಿನಗಳಿಂದ ರಕ್ಷಣೆಗಾಗಿ ಮಕ್ಕಳು ಅಮೆಜಾನ್‌ ಕಾಡಿನಲ್ಲಿ ಓಡಾಟ ಮಾಡುತ್ತಿದ್ದರು, ಇಷ್ಟೂ ದಿನ ಕಾಡಿನ ಗೆಡ್ಡೆಗೆಣಸು ಹಾಗೂ ನೀರು ಕುಡಿದು ಬದುಕಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿಮಾನ ಅಪಘಾತದ ನಂತರ ಮೂವರು ಮೃತಪಟ್ಟರೆ, ಮಕ್ಕಳು ಅಪಘಾತ ಸ್ಥಳದಿಂದ ತಪ್ಪಿಸಿಕೊಂಡಿದ್ದರು. ಸಹಾಯಕ್ಕಾಗಿ ಮಳೆಕಾಡಿನಲ್ಲಿ ಅಲೆದಾಡಿದರು. ಸೇನಾ ಪಡೆಯುವ ವಿಮಾನ ಹಾಗೂ ಮೃತದೇಹ ಪತ್ತೆಯ ಬಳಿಕ ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಸಣ್ಣ ಹೆಜ್ಜೆಗುರುತುಗಳನ್ನು  ಕಂಡುಹಿಡಿದಿದ್ದರು. ಹೀಗಾಗಿ ಮಕ್ಕಳ ಇರುವಿಕೆ ಬಗ್ಗೆ ಆಗ ಖಚಿತ ಪಡಿಸಿದರೂ ದಿನ ಉರುಳಿದಂತೆ ಬದುಕಿರುವ ಸಾಧ್ಯತೆ ಕ್ಷೀಣವಾಗ ತೊಡಗಿತ್ತು. ಆದರೆ ಮಳೆಕಾಡಿನಲ್ಲಿ ಮಕ್ಕಳು ಇನ್ನೂ ಜೀವಂತವಾಗಿದ್ದಾರೆ ಎಂದು ಶೋಧ ತಂಡಗಳು ಖಚಿತ ಪಡಿಸಿ ಹುಡುಕಾಟ ಆರಂಭ ಮಾಡಿತ್ತು. ಮಕ್ಕಳ ಸಮುದಾಯದ ಸದಸ್ಯರು ಹಣ್ಣುಗಳು ಮತ್ತು ಕಾಡಿನ ಬದುಕುಳಿಯುವ ಕೌಶಲ್ಯಗಳ ಬಗ್ಗೆ ಅವರ ಜ್ಞಾನವನ್ನು ಹಂಚಿಕೊಂಡಿದ್ದರು. ಇದರ ಪರಿಣಾಮವಾಗಿ ಮಕ್ಕಳು ಕಾಡಿನಲ್ಲಿ ಜೀವಂತವಾಗಿ ಉಳಿಯಲು ಉತ್ತಮ ಅವಕಾಶ ನೀಡಿದೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group