ಅಡಿಕೆ ಬಣ್ಣದಿಂದ ಸೀರೆ | ವಿದೇಶಕ್ಕೂ ವ್ಯಾಪಿಸಿದ ಅಡಿಕೆಯ ಬಣ್ಣ | ನಾರಿಯರ ಹೆಮ್ಮೆಯ ಇಳಕಲ್ ಸೀರೆಗೆ ಹೆಚ್ಚುತ್ತಿರುವ ಬೇಡಿಕೆ |

March 29, 2023
4:31 PM

ಅಡಿಕೆ ಕೇವಲ ತಿಂದು ಉಗುಳುವ ವಸ್ತು ಎಂಬುದು  ಇದುವರೆಗೂ ಪ್ರಚಾರ ಇತ್ತು. ಈಗ  ಕಾಲ ಬದಲಾಗಿದೆ. ಅಡಿಕೆಯ ಬಣ್ಣ ಅಥವಾ ಅಡಿಕೆಯ ಚೊಗರು ಬಟ್ಟೆಯ ಬಣ್ಣಕ್ಕೆ ಉಪಯುಕ್ತವಾಗಿದೆ, ರಾಸಾಯನಿಕ ಮುಕ್ತವಾಗಿರುವ ಬಣ್ಣವಾಗಿ ಸ್ಥಾನ ಪಡೆಯುತ್ತಿದೆ. ವಿದೇಶದಲ್ಲೂ ಈಗ ಅಡಿಕೆಯ ಚೊಗರು ಸ್ಥಾನ ಪಡೆಯುತ್ತಿದೆ.

ರಾಜ್ಯದಲ್ಲಿ ಸಾವಿರಾರು ಕೃಷಿಕರ  ಬದುಕನ್ನು ಕಟ್ಟಿದ್ದು ಅಡಿಕೆ ಬೆಳೆ. ಆದರೆ ಅಡಿಕೆಯಿಂದ ಬಣ್ಣ ತಯಾರಿ ಸಾಧ್ಯ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಅಡಿಕೆಯ ಬಣ್ಣವನ್ನು ವಸ್ತ್ರೋದ್ಯಮದಲ್ಲಿ ಬಳಸುವ ಪ್ರಯೋಗ ವಿದೇಶಗಳಿಗೂ ವ್ಯಾಪಿಸುತ್ತಿದೆ. ಇನ್ನಷ್ಟು ಸಂಶೋಧನೆಗಳು, ಮಾರುಕಟ್ಟೆ ಸೃಷ್ಟಿಯಾದರೆ ಅಡಿಕೆ ಕೃಷಿಯಲ್ಲಿ ಹೊಸ ಕ್ರಾಂತಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಇಕೆಯ ಚೊಗರಿನ ಬಣ್ಣದ ಬಗ್ಗೆ ಅನೇಕ ಸಂಶೋಧನೆಗಳಾಗುತ್ತಿದ್ದು, ಇದರ ಉಪಯೋಗವನ್ನು ಕಂಡುಕೊಂಡಿದ್ದಾರೆ. ಕರ್ನಾಟಕದ ಸಂಸ್ಕೃತಿ, ನಾರಿಯರ ಹೆಮ್ಮೆಯ ಇಳಕಲ್ ಸೀರೆಗೆ ಈಗ ನಮ್ಮ ಕರಾವಳಿ ಹಾಗೂ ಮಲೆನಾಡ ಅಡಿಕೆಯ ಬಣ್ಣ ಇನ್ನಷ್ಟು ಮೆರಗು ನೀಡುತ್ತಿದೆ.

ಅಡಿಕೆ ಬೇಯಿಸಿದ ಚೋಗರಿನ ಮೂಲಕ ಬಣ್ಣ ತಯಾರಿಸಿ ಬಟ್ಟೆಗಳಿಗೆ ಅಡಿಕೆಯ ಬಣ್ಣದ ಪ್ರಯೋಗ ಪ್ರಗತಿಯಲ್ಲಿದೆ. ಅಡಿಕೆ ಬೆಳೆಗಾರರಾಗಿ ನಮಗೆ ಇದು ಹೆಮ್ಮೆಯ ವಿಷಯ. ನಾವು ಬೆಳೆದ ಬೆಳೆ ಇಂತಹ ಹಲವಾರು ರೂಪ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ. ಇದು ಇನ್ನಷ್ಟು ಹೆಚ್ಚಾಗಬೇಕಾದಲ್ಲಿ ಇದಕ್ಕೆ ಪ್ರಚಾರ ಸಿಗಬೇಕು. ಅಡಿಕೆ ಬೆಳೆಗಾರರಾಗಿ ನಾವು ಇದನ್ನ ನಮ್ಮ ಜವಾಬ್ದಾರಿಯಾಗಿ ಭಾವಿಸಿ ಈ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರವನ್ನು ಕೋಡೊಣ.

ಈ ಸೀರೆಗಳನ್ನು ಗುಳೆದಗುಡ್ಡೆಯ ಇಳಕಲ್ ಸೀರೆಯ ತಯಾರಕರು ಸಿದ್ದಪಡಿಸಿದ್ದು, ಮದುವೆ ಸಮಾರಂಭಗಳು,  ಚುನಾವಣೆಗಳು ಹೀಗೆ ಹಲವು ಸಂದರ್ಭಗಳು ನಮ್ಮ ಮುಂದಿವೆ. ಇಂತಹ ಎಲ್ಲ ಸಂದರ್ಭಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಈ ಉತ್ಪನ್ನಕ್ಕೆ ಪ್ರಚಾರ ಮತ್ತು ಈ ಉತ್ಪನ್ನವನ್ನು ನಾವು ಸಹ ಬಳಕೆ ಮಾಡುವ ಮೂಲಕ ಈ ಉತ್ಪನ್ನವನ್ನು ಬೆಳೆಸೋಣ. ಈ ಮೂಲಕ ಅಡಿಕೆಯ ಮೌಲ್ಯವರ್ಧನೆಗೆ ಕೈಜೋಡಿಸಬೇಕಾಗಿದೆ.

ಈಚೆಗೆ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡಾ ಇಳಕಲ್‌ ಸೀರೆಯನ್ನು ಧರಿಸಿ ಸಂತಸ ಪಟ್ಟಿದ್ದರು. ಈ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು , ನಮ್ಮ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಸಮೃದ್ಧವಾಗಿ ಬೆಳೆಯುವ ಅಡಿಕೆಯ ಚೊಗರಿನಿಂದ ತೆಗೆದ ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ನಮ್ಮ ಕರುನಾಡಿನ ಹೆಮ್ಮೆಯ ಪ್ರತೀಕ ಇಳಕಲ್ ಸೀರೆಯಾಗಿದೆ. ಸಂಸ್ಕೃತಿಯನ್ನು ಇಳಕಲ್ ಸೀರೆ ಸೂಚಿಸಿದರೆ, ನೈಸರ್ಗಿಕ ಬಣ್ಣವು ನಮ್ಮ ಕರ್ನಾಟಕದ ಮಣ್ಣಿನ ಸೊಬಗನ್ನು ಪ್ರತಿನಿಧಿಸುತ್ತದೆ.

ಉಡುಗೆಗಳಲ್ಲಿ ನೈಸರ್ಗಿಕ ಬಣ್ಣದ ಬಳಕೆಯ ಮೂಲಕ ನಮ್ಮ ಮಣ್ಣಿನಲ್ಲಿ ಹಾಗೂ ನೀರಿನಲ್ಲಿ ರಾಸಾಯನಿಕ ಬಣ್ಣಗಳು ಮಿಶ್ರಣಗೊಂಡು ಕಲುಷಿತಗೊಳ್ಳುವುದನ್ನು ತಪ್ಪಿಸಿಬಹುದು.

ಉತ್ತರ ಕರ್ನಾಟಕದ ನೇಕಾರರು ಗುಳೇದಗುಡ್ಡ ಖಾನದ ಬ್ಯಾನರ್ ಅಡಿಯಲ್ಲಿ ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಿಂದ ಗುಳೇದಗುಡ್ಡ ಖಾನ ಬ್ಲೌಸ್ ಮತ್ತು ಇಳಕಲ್ ಸೀರೆಗಳಿಗೆ ಅಡಿಕೆ ಚೊಗರಿನ ಪ್ರಯೋಗ ಮಾಡಿದ್ದಾರೆ ಹಾಗೂ ಹೆಗ್ಗೋಡಿನ ಚರಕ ಮಹಿಳಾ ಸಹಕಾರಿ ಸಂಘವು ಕಳೆದ ಎರಡು ದಶಕಗಳಿಂದ ಅಡಿಕೆ ಚೊಗರನ್ನು ಜವಳಿ ಬಣ್ಣವಾಗಿ ದೊಡ್ಡ ರೀತಿಯಲ್ಲಿ ಬಳಸುತ್ತಿದೆ.

ಇದೇ ರೀತಿಯಲ್ಲಿ ಹಲವಾರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಉದಯೋನ್ಮುಖ ಉದ್ಯಮಿಗಳು, ಕೃಷಿಕರು ಪ್ರಯತ್ನಿಸುತ್ತಿದ್ದು, ಅವರ ಪ್ರಯತ್ನಗಳಿಗೆ ನಮ್ಮಲ್ಲರ ಸಹಕಾರ ಸದಾ ಇರಲಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?
March 29, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror