#Backache | ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಬೆನ್ನು ನೋವು | ಆಯುರ್ವೇದ ಚಿಕಿತ್ಸೆ ಮೂಲಕ ನೋವಿನಿಂದ ಹೊರಬನ್ನಿ‌ |

August 31, 2023
1:33 PM
ಇಂದಿನ ಯುಗದಲ್ಲಿ ಕೆಟ್ಟ ಜೀವನಶೈಲಿಯಿಂದ ಬೆನ್ನು ನೋವು ಅಥವಾ ಒತ್ತಡವು ತುಂಬಾ ಸಾಮಾನ್ಯವಾಗಿದೆ. ಯಾರು ಸರಿಯಾಗಿ ಕುಳಿತುಕೊಳ್ಳುವುದಿಲ್ಲ, ಕುಳಿತುಕೊಳ್ಳುವ ಭಂಗಿ ಸರಿಯಾಗಿಲ್ಲ. ಸಾಮಾನ್ಯವಾಗಿ, ಅಂತಹ ಜನರು ಬೆನ್ನುನೋವಿನ ಗಂಭೀರ ಸಮಸ್ಯೆಯಿಂದ ಬಳಲುತ್ತಾರೆ.

ಇಂದಿನ ಆಧುನಿಕ ಯುಗದಲ್ಲಿ ಅಧಿಕ ಕಾರ್ಯ ಒತ್ತಡಗಳಿಂದ ಸಾಮಾನ್ಯವಾಗಿ ಉಂಟಾಗುವ ಸಮಸ್ಯೆ ಅಂದರೆ ಅದುವೇ ಸೊಂಟ ನೋವು. ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ.

Advertisement

ಸೊಂಟ ನೋವಿಗೆ ಸಾಮಾನ್ಯ ಕಾರಣಗಳು :
* ದೀರ್ಘಾವಧಿ ಯವರಿಗೆ ಒಂದೇ ಬದಿಯಲ್ಲಿ / ಭಂಗಿಯಲ್ಲಿ ಮಲಗುವುದು
* ಅತಿಯಾದ ಶ್ರಮ / ಪ್ರಯಾಣ
* ವಿಚಿತ್ರವಾದ ಭಂಗಿಯಲ್ಲಿ ಕುಳಿತು ಕೊಳ್ಳುವುದು
* ಅತಿಯಾಗಿ ಬಗ್ಗಿಕೊಂಡೆ ಅತಿ ಕೆಲಸ ಮಾಡುವುದು
* ಉಳುಕು ಮೂಳೆ ಮುರಿತ
* ಏಕಕಾಲದಲ್ಲಿ ಅತಿ ವ್ಯಾಯಾಮ ಮಾಡುವುದು

ಸೊಂಟ ನೋವು ತಡೆಗಟ್ಟಲು ಸುಲಭ ಪರಿಹಾರಗಳು :
* ಸುರಕ್ಷಿತ ಮತ್ತು ಆರೋಗ್ಯಕರ ವ್ಯಾಯಾಮಗಳು
* ಯೋಗಾಸನ
* ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು
* ನೇರವಾಗಿ ನಿಂತುಕೊಳ್ಳುವುದು ನೇರವಾಗಿ ನಡೆಯುವುದು ನೇರವಾಗಿ ಮಲಗುವುದು
* ನೋವಿನ ಪ್ರದೇಶದಲ್ಲಿ ಬಿಸಿ ನೀರಿನ ಶಾಖ ಕೊಡುವುದು
* ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾದ ತೈಲ ಗಳಿಂದ ನೋವಿನ ಜಾಗಕ್ಕೆ ಮಸಾಜ್ ಮಾಡುವುದು.
* ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಪಂಚಕರ್ಮ ಚಿಕಿತ್ಸೆ ಸೊಂಟ ನೋವಿಗೆ ಉತ್ತಮ ಚಿಕಿತ್ಸೆ ಆಗಿದೆ ಅದರಲ್ಲಿ ಕಟ್ಟಿಬಸ್ತಿ ಚಿಕಿತ್ಸಾ ವಿಧಾನದಿಂದ ಸೊಂಟ ನೋವು ನಿವಾರಣೆ ಮಾಡಬಹುದು.

ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ನಿಮಗೆ ತೊಂದರೆಗಳಾದಲ್ಲಿ ದಯವಿಟ್ಟು ನಿರ್ಲಕ್ಷಿಸಬೇಡಿ. ನೋವು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರು ನೋವಿನ ಕಾರಣ ಕಂಡುಹಿಡಿಯಬಹುದು ಮತ್ತು ಅದನ್ನು ನಿರ್ವಹಿಸಲು ಯೋಜನೆಯನ್ನು ರೂಪಿಸಬಹುದು. ಸೊಂಟ ನೋವನ್ನು ನಿರ್ಲಕ್ಷಿಸಿದರೆ ಮತ್ತು ಚಿಕಿತ್ಸೆ ನೀಡದೆ ಹೋದಲ್ಲಿ ಅದು ಹೆಚ್ಚಿನ ಗಂಭೀರ ಸಮಸ್ಯೆಗಳಿಗೆ( ಅಂಗವೈಕಲ್ಯಕ್ಕೆ) ಕಾರಣವಾಗಬಹುದು.

Advertisement
ಬರಹ :
ಡಾ.ಜ್ಯೋತಿ, ಲಕ್ಷ್ಮಿ ಕ್ಲಿನಿಕ್ ಮಂಗಳೂರು, 94481 680
53

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group