ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

June 14, 2025
12:11 PM
ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ ಪಠ್ಯಗಳು ಇವೆ. ಹಾಗಾಗಿ ಹೆಚ್ಚಿನ ಮಕ್ಕಳಿಗೆ ಸ್ಫರ್ಧಾತ್ಮಕ ಪರೀಕ್ಷೆಯು ಉಪಯುಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದು ಮಕ್ಕಳು ಐದನೇ ತರಗತಿ ಕಲಿಕೆಯಿಂದಲೇ ಅವುಗಳ ಪರಿಚಯ ಮಾಡಲು ಸಾಧ್ಯವಿದೆ. ಕೇಂದ್ರ ಸರಕಾರದ ಸಿಬಿಎಸ್ಸಿ ವಿಷಯಗಳ ನವೋದಯ ಹಾಗೂ ಸಿಬಿಎಸ್ಸಿ ಮತ್ತು ಐಸಿಎಸ್ಸಿ ವಿಷಯಗಳನ್ನು ಒಳಗೊಂಡ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗಳು ಹಾಗೂ ರಾಜ್ಯ ಪಠ್ಯಪುಸ್ತಕಗಳ ವಿಷಯಗಳೊಳಗೊಂಡ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರವೇಶ ಪರೀಕ್ಷೆಗಳು ನಡೆಯುತ್ತಿವೆ.

Advertisement

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ ಪಠ್ಯಗಳು ಇವೆ. ಹಾಗಾಗಿ ಹೆಚ್ಚಿನ ಮಕ್ಕಳಿಗೆ ಈ ಪರೀಕ್ಷೆಯು ಉಪಯುಕ್ತವಾಗಿದೆ.

ನವೋದಯ ಪ್ರವೇಶ ಪರೀಕ್ಷಾ ಅರ್ಜಿ ಸಲ್ಲಿಕೆಯು ಈಗಾಗಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರೆಯಲಾಗಿದೆ. ಜುಲೈ 29 ಕೊನೆಯ ದಿನವಾಗಿದೆ. ಉಳಿದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ಇನ್ನಷ್ಟೆ ಬರಬೇಕಿದೆ.

ಮಕ್ಕಳನ್ನು ಇಂಥ ಪರೀಕ್ಷೆಗೆ ಅಭ್ಯಾಸ ಮಾಡುವುದರಿಂದ ಅವರಲ್ಲಿ ಎಳವೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರಿಚಯಿಸುವ ಒಂದು ಕಲ್ಪನೆ ಮೂಡುತ್ತದೆ. ಪ್ರತಿಯೊಂದು ಕಲಿಕೆಯು ಅನುಭವದ ಕಲಿಕೆ ಆಗಿರಬೇಕು ಜೊತೆಗೆ ಮಕ್ಕಳಿಗೆ ಜ್ಞಾನದ ಮಟ್ಟವನ್ನು ಅರಿಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ಇಂಥ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ಇಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿ ಶಾಲೆಗಳಿಗೆ ಸೇರ್ಪಡೆಗೊಳ್ಳುವುದು ಮುಖ್ಯವಲ್ಲ. ಈ ಪರೀಕ್ಷೆಯ ಅನುಭವ ಪಡೆದುಕೊಳ್ಳುವುದು ಮುಖ್ಯವಾಗಿದೆ. ಆಸಕ್ತಿ ಇರುವವರು ಆಯ್ಕೆಯ ನಂತರ ತಮ್ಮ ವಿದ್ಯಾಭ್ಯಾಸವನ್ನು ವಸತಿ ಶಾಲೆಗಳಲ್ಲಿ ಮುಂದುವರಿಸಬಹುದು ಆದರೆ ಇಂಥ ಅವಕಾಶಗಳು ಈ ಒಂದು ಕಾಲಘಟ್ಟದಲ್ಲಿ ಮಾತ್ರ ಸಿಗುವುದರಿಂದ ಹೆಚ್ಚಿನ ಮಕ್ಕಳು ಮತ್ತು ಪೋಷಕರು ಇದರ ಬಗ್ಗೆ ಗಮನಹರಿಸಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರನ್ನು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯವು ಆಗಿದೆ.

ಈ ನಿಟ್ಟಿನಲ್ಲಿ ಗ್ರಾಮೀಣ ಪರಿಸರದಲ್ಲಿ ಮಕ್ಕಳ ಜ್ಞಾನ ವರ್ಧನೆ ಹಾಗೂ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಕಳೆದ ಏಳು ವರ್ಷಗಳಿಂದ ನಾವು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಿದ್ದೇವೆ. ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗಿ ನವೋದಯ, ಮೊರಾರ್ಜಿ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

Advertisement

ಪಸ್ತುತ ವರುಷವು ಕೂಡ ಗುತ್ತಿಗಾರು ಅರಿವು ಕೇಂದ್ರದಲ್ಲಿ ಮಕ್ಕಳ ಬೌದ್ಧಿಕ ಚಟುವಟಿಕೆಗಳ ಮೂಲಕ ಗ್ರಂಥಾಲಯದ ಸದ್ಬಳಕೆ ಮತ್ತು ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸುವುದು ಜೊತೆಗೆ ಉತ್ತಮ ಕಲಿಕಾ ವಿಧಾನದೊಂದಿಗೆ ಮಕ್ಕಳಲ್ಲಿ ಜ್ಞಾನ ವರ್ದನೆ ಮಾಡುವ ಕಾರ್ಯ ನಡೆಯುತ್ತಿದೆ. ಮಕ್ಕಳು ಪೋಷಕರು ಇದರ ಸದ್ಭಳಕೆ ಮಾಡಿಕೊಳ್ಳಬಹುದು.

2025-26 ಸಾಲಿನ ನವೋದಯ/ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಗುತ್ತಿಗಾರು ಅರಿವು ಕೇಂದ್ರ (ಗ್ರಂಥಾಲಯ)ದಲ್ಲಿ ತರಬೇತಿ ನೀಡಲಾಗುವುದು. ದಿನಾಂಕ 15-06-2025 ರಿಂದ ಪ್ರತಿ ಆದಿತ್ಯವಾರ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನಡೆಯಲಿದೆ. ಸಂಪರ್ಕಿಸಿ : 9448845322 , 80731 17026

ಬರಹ :
ದಿವ್ಯ ಸುಜನ್ ಗುಡ್ಡೆಮನೆ
, ಶ್ರೀ ದುರ್ಗಾ ತರಬೇತಿ ಕೇಂದ್ರ , ಗುತ್ತಿಗಾರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group