ಅಡಿಕೆ ಅಕ್ರಮ ಸಾಗಾಟ ಪ್ರಕರಣ | ತನಿಖೆ ಆರಂಭಿಸಿದ ಮೇಘಾಲಯ ಸರ್ಕಾರ |

January 11, 2024
7:41 PM
ಅಡಿಕೆ ಅಕ್ರಮ ಸಾಗಾಟದ ಬಗ್ಗೆ ರೈತರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಮೇಘಾಲಯದಲ್ಲಿ ತನಿಖೆ ಆರಂಭವಾಗಿದೆ. ಮಾಹಿತಿ ಪ್ರಕಾರ ಪ್ರತೀ ದಿನ ರಾತ್ರಿ 12 ಮೆಟ್ರಿಕ್‌ ಟನ್‌ ಅಡಿಕೆ ಕಳ್ಳಸಾಗಾಣಿಗೆ ಮೂಲಕ ಬರುತ್ತಿತ್ತು.

 ಬಾಂಗ್ಲಾದೇಶದಿಂದ ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣದ ಕುರಿತು ಇದೀಗ ತನಿಖೆಗೆ ಮೇಘಾಲಯ ಸರ್ಕಾರ ಮುಂದಾಗಿದೆ. ಅಡಿಕೆ ಅಕ್ರಮ ಸಾಗಾಟದ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಮೇಘಾಲಯದ ಉತ್ತರ ಗರೋ ಹಿಲ್ಸ್‌ನ ಜಿಲ್ಲಾಧಿಕಾರಿ ಕುಮಾರಿ ಮಿಥಾಲಿ ಚಂದ್ರ ಅವರು ತನಿಖೆ ಆರಂಭಿಸಿದ್ದಾರೆ.

Advertisement
Advertisement
Advertisement

ಅಡಿಕೆಯಲ್ಲಿ ಬರ್ಮಾದಿಂದ ಬಾಂಗ್ಲಾದೇಶದ ಮೂಲಕ ವಿವಿಧ ಮಾರ್ಗದ ಮೂಲಕ ಭಾರತದೊಳಕ್ಕೆ ಸಾಗಿಸಲಾಗುತ್ತಿತ್ತು. ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳ ವಿವಿಧ ಪ್ರದೇಶಗಳ ಮೂಲಕ ಸಾಗಾಟವಾಗುತ್ತಿತ್ತು. ಇದೆಲ್ಲಾ ಅಂತಿಮವಾಗಿ ಅಸ್ಸಾಂನ ಮಟಿಯಾ ಪ್ರದೇಶದಲ್ಲಿ ದಾಸ್ತಾನುಗೊಂಡು ಬಳಿಕ ದೇಶದ ವಿವಿಧ ರಾಜ್ಯಗಳಿಗೆ, ವಿವಿಧ ಮಾರುಕಟ್ಟೆಗೆ ಸಾಗಾಟ ಮಾಡಲಾಗುತ್ತಿತ್ತು. ಕಳೆದ ಕೆಲವು ಸಮಯಗಳಿಂದ ಈ ಸಾಗಾಟ ನಡೆಯುತ್ತಿತ್ತು. ಭಾರತ ಸರ್ಕಾರ ಅಥವಾ ಮೇಘಾಲಯ ಸರ್ಕಾರಕ್ಕೆ ಯಾವುದೇ ತೆರಿಗೆಯೂ ಪಾವತಿ ಆಗುತ್ತಿರಲಿಲ್ಲ. ಹೀಗೆ ಅಕ್ರಮವಾಗಿ ಬಂದಿರುವ ಅಡಿಕೆಯನ್ನು ದೇಶದ ವಿವಿಧ ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಕೆಲವು ಕಂಪನಿಗಳು ಕಳ್ಳಸಾಗಣೆ ವಸ್ತುಗಳನ್ನು ಖರೀದಿಸುತ್ತಿತ್ತು. ಈ ಅಕ್ರಮ ಸಾಗಾಟಕ್ಕೆ ಮೇಘಾಲಯ ಸೇರಿದಂತೆ ದೇಶದ ಹಲವು ಕಡೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

Advertisement

ಮೇಘಾಲಯ ಸರ್ಕಾರದ ಮಾಹಿತಿಯ ಪ್ರಕಾರ  ಪ್ರತಿದಿನ ರಾತ್ರಿಯಲ್ಲಿ ಸುಮಾರು 12 ಸಾವಿರ ಕೆಜಿ ಅಡಿಕೆಯನ್ನು ಯಾವುದೇ ತೆರಿಗೆಯನ್ನು ಪಾವತಿ ಮಾಡದೆ ಅಕ್ರಮವಾಗಿ ಅಡಿಕೆ ಸಾಗಾಟ ನಡೆಯುತ್ತಿತ್ತು. ಈ ಅಕ್ರಮ ದಂಧೆಯು ಸ್ಥಳೀಯ ಅಡಿಕೆ ದರವನ್ನು ಕಡಿಮೆ ಮಾಡಿ ರೈತ ಸಮುದಾಯಕ್ಕೆ  ನಷ್ಟವನ್ನು ಉಂಟುಮಾಡಿತ್ತು. ಹೀಗಾಗಿ ಈಗ ಸರ್ಕಾರಗಳು ಎಚ್ಚೆತ್ತುಕೊಂಡಿದೆ.

ಇದಕ್ಕಾಗಿ ಅಡಿಕೆ ಅಕ್ರಮ ಸಾಗಾಟದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಹಿತಿ ಪಡೆದು ಈಗ ಜಿಲ್ಲಾ ಆಡಳಿತವು ಕ್ರಮಕ್ಕೆ ಮುಂದಾಗಿದೆ. ರೈತರ ದೂರಿನ ಮೇರೆಗೆ ಡಿಸಿ ಮಿಥಾಲಿ ಅವರು  ಅಧಿಕಾರಿ ನಿಪೋನ್ ಹಜಾಂಗ್ ಅವರನ್ನು ತನಿಖೆಯ ಉಸ್ತುವಾರಿಗೆ ನೇಮಿಸಿದ್ದಾರೆ. ಶೀಘ್ರದಲ್ಲಿ ವರದಿಯನ್ನು ನೀಡಲಿದ್ದಾರೆ. ಈ ನಡುವೆ  ಜಿಲ್ಲಾಧಿಕಾರಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

Advertisement

ಅಸ್ಸಾಂ ಮತ್ತೆ ಅಡಿಕೆ ವಶಕ್ಕೆ : ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಅಡಿಕೆ ಕಳ್ಳಸಾಗಣೆಯನ್ನು ಪ್ರಕರಣವನ್ನು ಅಸ್ಸಾಂ ರೈಫಲ್ಸ್‌ ಮತ್ತೆ ಪತ್ತೆ ಮಾಡಿದೆ.  ಮೂರು ಟ್ರಕ್‌ಗಳಲ್ಲಿ ಸುಮಾರು 3.168 ಕೋಟಿ ರೂಪಾಯಿಗಳ ಅಡಿಕೆಯನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.

The Meghalaya government has now started an investigation into the case of illegal transportation of Arecanut from Bangladesh. Meghalayas North Garo Hills, Kumari Mithali Chandr District Collector Kumari Mithali Chandra has started an investigation following a complaint about illegal smuggling  of Arecanut from Bangladesh through the various borders of the Meghalaya state.

Advertisement

Source : IANS

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror