ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಷಕನ್ಯೆ ಅಂತಾ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಯತ್ನಾಳ್ ಹೇಳಿಕೆ ಖಂಡಿಸಿ ಮೈಸೂರಿನಲ್ಲಿ ದೂರು ದಾಖಲಾಗಿದೆ. ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಮೈಸೂರು ಸಿಟಿ ಪೊಲೀಸ್ ಆಯುಕ್ತರಿಗೆ ಎನ್‌ಎಸ್‌ಯುಐ ದೂರು ನೀಡಿದೆ. ಚುನಾವಣಾ ಅಧಿಕಾರಿಗಳಿಗೂ ದೂರು ನೀಡಿ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ.
ಅಲ್ಲದೇ ಪ್ರಧಾನಿ ಮೋದಿ ಇಂದಿನಿಂದ (ಏಪ್ರಿಲ್ 29) ರಾಜ್ಯ ಪ್ರವಾಸ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ `ವಿಷ ಸರ್ಪ’ ಕಟು ಟೀಕೆಗೆ ಮೋದಿ ಕೌಂಟರ್ ಬಗ್ಗೆ ಕುತೂಹಲ ಮೂಡಿದೆ.
ಖರ್ಗೆಯವರ `ವಿಷ ಸರ್ಪ’ ಆರೋಪಕ್ಕೆ ಮೋದಿ ತಿರುಗೇಟು ಏನಿರಬಹುದೆಂದು ಚರ್ಚೆಯಾಗ್ತಿದೆ. ವಿವಾದ ಸೃಷ್ಟಿಸಿರುವ ಖರ್ಗೆ ಹೇಳಿಕೆಗೆ ಈಗಾಗಲೇ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಚುನಾವಣಾ ಆಯೋಗಕ್ಕೂ ಖರ್ಗೆ ವಿರುದ್ಧ ಬಿಜೆಪಿ ದೂರು ನೀಡಿದೆ. ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್ ಪಾಳಯದಲ್ಲೂ ತಳಮಳ ಶರುವಾಗಿದೆ. ವಿವಾದ ಹಸಿ ಇರುವಾಗಲೇ ರಾಜ್ಯಕ್ಕೆ ಮೋದಿ ಎಂಟ್ರಿ ಕೊಡುತ್ತಿದ್ದು, ಖರ್ಗೆ ಟೀಕೆಗೆ ಕೌಂಟರ್ ಕೊಡ್ತಾರಾ? ಇದರಿಂದ ಚುನಾವಣಾ ಪಾಲಿಟಿಕ್ಸ್ಗೆ ಮತ್ತಷ್ಟು ಲಾಭವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.