ಜೋಡೆತ್ತು ಸಾಕಾಣಿಕೆದಾರರ ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನ

February 19, 2024
1:24 PM

ಜೋಡೆತ್ತು ಸಾಕಾಣಿಕೆ(Cattle) ಮಾಡುವ ರೈತರಿಂದ(Farmer) ಯಾವುದೇ ಜಾತಿಯಿಲ್ಲ(Caste) ಹಾಗೂ ಯಾವುದೇ ಧರ್ಮವೂ ಕೂಡ ಇಲ್ಲ. ಆದರೆ, ಇಂದು ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತು ಸಾಕಾಣಿಕೆದಾರರು ತಾವು ಹಾಕಿದ ಬಂಡವಾಳವನ್ನೂ ಕೂಡ ಮರಳಿ ಪಡೆಯದ ಸ್ಥಿತಿಯಲ್ಲಿದ್ದಾರೆ. ಈ ಕಾರಣಕ್ಕಾಗಿ, ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದಾಗ, ಅನೇಕ ಎತ್ತುಗಳು ಕಾಸಾಯಿಖಾನೆಯ(Slaughterhouse) ಪಾಲಾಗುತ್ತಿವೆ. ಎತ್ತುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಹೋರಿಕರುಗಳನ್ನು ಸಾಕಿ ಸಲುಹಲು ರೈತರಿಗೆ ಸಾಧ್ಯವಾಗುತ್ತಿಲ್ಲ.

Advertisement
Advertisement

ಇದರಿಂದ ಹೋರಿಕರುಗಳನ್ನು ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ, ಇಂದು ದಿನಾಲು ಲಕ್ಷಾಂತರ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ನಮ್ಮ ಕಣ್ಣು ಮುಂದೆ ಓಡಾಡುವ ಜೀವಂತ ಬಾಲ ನಂದಿಗಳನ್ನು ಕಾಸಾಯಿಖಾನೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡು, ನಾವು ದೇವಸ್ಥಾನಗಳಲ್ಲಿರುವ ನಂದಿಗಳನ್ನು ಪೂಜಿಸಿದರೆ, ದೇವಸ್ಥಾನಗಳಲ್ಲಿರುವ ಯಾವ ನಂದಿಯೂ ಕೂಡ ಮುಂದೆ ನಮ್ಮ ಮಕ್ಕಳು ನರಕಯಾತನೆಯನ್ನು ಅನುಭವಿಸುವುದನ್ನು ತಪ್ಪಿಸಲಾರ. ಈ ಕಟು ಸತ್ಯದ ದರ್ಶನವು ಸಮಸ್ಯೆ ಕೈ ಮೀರಿ ಹೋಗುವ ಮುಂಚೆ ಸಮಾಜಕ್ಕೆ ಆಗಲೇಬೇಕಾಗಿದೆ.

Advertisement

ಗ್ರಾಮಗಳಲ್ಲಿ ಅನ್ನ ಸಂಪತ್ತು ಉಳಿಯಬೇಕಾದರೆ ನಂದಿ ಸಂಪತ್ತನ್ನು ಉಳಿಸಿಕೊಳ್ಳಲೇಬೇಕಾಗಿದೆ. ನಮ್ಮ ಗ್ರಾಮಗಳಲ್ಲಿರುವ ಹಿರಿಯ ರೈತರೊಂದಿಗೆ ಹಾಗೂ ಜೋಡೆತ್ತು ಸಾಕಾಣಿಕೆ ಮಾಡುವ ರೈತರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದಾಗ ಜೋಡೆತ್ತುಗಳ ಮಹತ್ವದ ಕುರಿತು ನಮಗೆ ಖಂಡಿತ ಅರಿವಾಗುತ್ತದೆ. ಈ ಕಾರಣಕ್ಕಾಗಿ, ಪ್ರತಿಯೊಂದು ಜಾತಿ ಹಾಗೂ ಧರ್ಮದಲ್ಲಿರುವ ಜೋಡೆತ್ತುಗಳನ್ನು ಹೊಂದಿದ ರೈತರನ್ನು ಒಗ್ಗೂಡಿಸಿ ಜೋಡೆತ್ತುಗಳನ್ನು ಉಳಿಸಲು ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಮೊದಲ‌ ಹಂತದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ “ಜೋಡೆತ್ತು ಸಾಕಾಣಿಕೆದಾರರ ಸರ್ವ ಜಾತಿ ಹಾಗೂ ಸರ್ವ ಧರ್ಮ ಸಮ್ಮೇಳನ” ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ.‌ ಹಾಗಾಗಿ, ಸರ್ವರ ಒಳಿತನ್ನು ಒಳಗೊಂಡ ಈ ಕಾರ್ಯದಲ್ಲಿ ಕೈ ಜೋಡಿಸಲು ಇಚ್ಚಿಸುವ ಆಸಕ್ತರು ಹೆಚ್ಚಿನ‌ ಮಾಹಿತಿ ಪಡೆಯಲು 8884390598 ಗೆ ಸಂಪರ್ಕಿಸಬಹುದು.

Advertisement

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com, 9110885321, Abhishek

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ
April 28, 2024
4:40 PM
by: The Rural Mirror ಸುದ್ದಿಜಾಲ
ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |
April 28, 2024
4:01 PM
by: ಮಹೇಶ್ ಪುಚ್ಚಪ್ಪಾಡಿ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror