ಜೀವನದಲ್ಲಿ ಎರಡು ರೀತಿಯ ಕಲೆಗಳಿವೆ. ಒಂದು ಸಂಘರ್ಷದ ಜೀವನ. ಮತ್ತೊಂದು ಸ್ವೀಕರಿಸುವಿಕೆ. ಬಹುತೇಕರು ಮೊದಲನೆಯದರಲ್ಲಿ ಜೀವನ ಮುಗಿಸುತ್ತಾರೆ. ಕೆಲವೇ ಕೆಲವರು ಜೀವನವನ್ನ ಸ್ವೀಕರಿಸಿ ಸಂಘರ್ಷ ಕೊನೆಗೊಳ್ಳಿಸುತ್ತಾರೆ. ಯಾರು ಜೀವನವನ್ನು ಸ್ವೀಕರಿಸಿತ್ತಾರೋ ಅವರಲ್ಲಿ ಪ್ರಶ್ನೆಗಳಿರುವುದಿಲ್ಲ. ಯಾರ ಜೀವನ ಸಂಘರ್ಷದಲ್ಲಿ ಇರುವುದೋ ಅವರಲ್ಲಿ ಪ್ರಶ್ನೆಗಳೆಂದು ಮುಗಿಯುವುದಿಲ್ಲ. ನಂಗೆ ಬಹಳಷ್ಟು ಜನಗಳು ವಿಚಿತ್ರ ವಿಚಿತ್ರ ಆಧ್ಯಾತ್ಮಿಕ ಪ್ರಶ್ನೆಗಳನ್ನು ಕಳಿಸುತ್ತಾರೆ. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಯಾಕೆಂದರೆˌ ಅವರು ಅವುಗಳನ್ನು ಸ್ವೀಕರಿಸಲು ಸಿದ್ದವಾಗಿಲ್ಲ.
ನಾನು ಉತ್ತರ ಕೊಟ್ಟರೆˌ ಅವರು ಮತ್ತೊಂದುˌ ಮತ್ತೊಂದು ಪ್ರಶ್ನೆಗಳನ್ನು ಕಳಿಸುತ್ತಲೆ ಇರುತ್ತಾರೆ. ಯಾರಿಂದಲೂ ನಿಮ್ಮ ಪ್ರಶ್ನೆಗಳನ್ನು ಸಮಾಧಾನ ಪಡಿಸಲು ಆಗದು. ಇದು ನನಗೂ ಇರುವ ಮೀತಿ. ನಿಮ್ಮ ಪ್ರಶ್ನೆಗಳಿಗೆˌ ನಾನು ನೀಡುವ ಉತ್ತರ ತಪ್ಪಾಗಿರಬಹುದು ಅಥವ ಸರಿಯಾಗಿರಬಹುದು…ಅಲ್ಲಿಗೆ ನಿಮ್ಮ ಪ್ರಶ್ನೆ ಮುಗಿಯುವದು. ಆದರೆˌ ಅಲ್ಲಿಗೆ ಮುಗಿಯುವುದಿಲ್ಲ. ನೀವು ನನಗೆ ಪ್ರಶ್ನೆಗಳ ಮೂಲಕ ನಿರಂತವಾಗಿ ಕೆಣುಕುವಿರಿ. ಅವುಗಳಿಗೆಲ್ಲ ನಾನು ಉತ್ತರಿಸಲಾರೆ. Im sorry dear friends.
ನೀವು ಸ್ವೀಕರಿಸಲು ಸಾಧ್ಯವಾದ್ರೆˌ ನಿಮ್ಮಲ್ಲಿ ಪ್ರಶ್ನೆಗಳೆ ಇಲ್ಲ. ನೀವು ಯಾರನ್ನೂ ಸ್ವೀಕರಿಸುವುದಿಲ್ಲ. ಹಾಗೇ ನೀವು ಸ್ವೀಕರಿಸಿದ್ರೆ ˌ ಬುದ್ದˌ ಅಲ್ಲಮˌ ಬಸವˌ ಓಶೋˌ ನಾನಕˌ ಕೃಷ್ಣ ˌಗೋರಕˌ ಜೀಸಸ್ ˌ ಮಹಮ್ಮದ್…ಮಾನವ ಕುಲದ ಎಲ್ಲ ದುಃಖ ಆ ಕಾಲಕ್ಕೆ ಮುಗಿಯುತ್ತಿತ್ತು. ಅದು ಮುಗಿಯುವುದಿಲ್ಲ.
ನೀವು ಯಾರನ್ನು ಸ್ವೀಕರಿಸುವುದಿಲ್ಲ ಮತ್ತು ನಿಮ್ಮ ಪ್ರಶ್ನೆಗಳು ಯಾರೊಂದಿಗೂ ಮುಗಿಸುವುದಿಲ್ಲ. ಕೊನೆಯಾಗಿಸುವುದಿಲ್ಲ. ನೀವು ನಿರಂತರವಾಗಿ ಒಂದೆ ಪ್ರಶ್ನೆಯನ್ನು ನೂರಾರು ಜನರಲ್ಲಿ ಕೇಳಿˌ ನಿಮಗೆ ಬೇಕಾದ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಿರಿ. ಅದಕ್ಕೆ ಕೊನೆಯಿಲ್ಲ. ನಿಮಗೆ ವಾಗ್ ಯುದ್ದದಲ್ಲಿ ಆಸಕ್ತಿಯಿದ್ದಷ್ಟೆ. ಉತ್ತರಗಳಲ್ಲಿ ಅಲ್ಲ.
ನಿಮ್ಮ ಈ ಸ್ವಯಂನ ನಿರಾಕರಣೆಯಿಂದಲೆ ಪುರೋಹಿತಶಾಹಿಯನ್ನು ಹುಟ್ಟುಹಾಕುತ್ತೀರುವಿರಿ. ನಿಮ್ಮ ಮೂರ್ಖ ಪ್ರಶ್ನೆಗಳಿಂದಲೆ ಪುರೋಹಿತಶಾಹಿ ಸದಾ ಶಾಶ್ವತವಾಗಿರುತ್ತೆ. ನಿಮ್ಮೊಳಗೆ ಉತ್ತರ ಕಂಡುಕೊಳ್ಳಲು ಸ್ಪೂರ್ತಿಸಿದಿರುವವರನ್ನು ಈ ಜಗತ್ತು ಎಂದು ನಂಬುವುದಿಲ್ಲ. ಅವರನ್ನೆಲ್ಲ ಕೊಂದು ಹಾಕಿದೆ. ನಿಮ್ಮಗೆಲ್ಲ ಹೊರಗಡೆಯಿಂದ ಮತ್ತು ಅದೂ ಬಹು ದೂರದಿಂದ ಮತ್ತು ಸತ್ತವರಿಂದ ಸತ್ತ ಉತ್ತರಗಳು ಬರಬೇಕು. ಅಂದರೆ ಮಾತ್ರ ನಿಮಗೆ ಅವು ಬಹುತೇಕ ಅಧಿಕೃತ. ಅಂದರೆˌ ಮೃತ ಉತ್ತರ ಬಯಸುವ ನೀವು ಜೀವಂತವಾಗಿರುವಿರೋ?
ನಮಗೆ ನಮ್ಮ ಸತ್ಯ ಅರ್ಥವಾಗುವುದಿಲ್ಲ ˌ ಅಂಥದರಲ್ಲಿ ಪಕ್ಕದವರ ಸತ್ಯ ಅರ್ಥವಾಗುವದು ದೂರ. ಆದರೆˌ ನಾವು ಪಕ್ಕದವರ ಸತ್ಯವನ್ನು ಹುಡುಕುತ್ತೇವೆ ಮತ್ತು ನಂಬುತ್ತೆವೆ. ನಮಗೆ ಉತ್ತರಗಳು ಅದು ಸತ್ತವರಿಂದˌ ದೂರದವರೊಂದಿಗೆ ಬರಬೇಕು ಅದು ಮಾತ್ರ ಸತ್ಯ. ಸತ್ಯ ನಿಮ್ಮ ಪಕ್ಕ ಇರುವ ನಿಮ್ಮ ಹೆಂಡತಿˌ ಮಕ್ಕಳುˌ ಗೆಳೆಯರುˌ ಸಹಧ್ಯೋಗಿ…ಅವರೊಂದಿಗೆಯು ಕಾಣಬಹುದು. ಅದು ಕಾಣಲು ನೀವು ಎಚ್ಚರವಾಗಬೇಕು. ಎಲ್ಲರು ಮಲಗಿಕೊಂಡಿದ್ದಾರೆ. ಆಗ ಅಲ್ಲಿ ಒಬ್ಬ ಎಚ್ಚರವಾಗಿದ್ದಾನೆ. ಅವನನ್ನು ನೋಡಲು ನೀವೂ ಎಚ್ಚರವಾಗಬೇಕು.
ಸೂರ್ಯೊದಯ ಕಾಣಲುˌ ನೀವು ಮೊದಲು ಹಾಸಿಗೆಯಿಂದ ಎದ್ದು ಎಚ್ಚರವಾಗಬೇಕು! ಮತ್ತು ನಿಮ್ಮ ಮನೆ ಕಿಡಕಿ ಬಾಗಿಲು ತೆಗೆಯಬೇಕು. ಕತ್ತಲಲ್ಲಿಯೆ ಮಲಗಿಕೊಂಡು ಬೆಳಕು ಬರುತ್ತೀಲ್ಲವೇಕೆ? ಎಂದು ಪ್ರಶ್ನೆ ಕೇಳಿದ್ರೆ. ಅದು ಯಾವುದೇ ಉತ್ತರಗಳಿಂದ ಬರುವುದಿಲ್ಲ. ಅದಕ್ಕೆ ನೀವು ನಿಮ್ಮ ಕ್ರಿಯೆ ( action) ದಿಂದ ಬೆಳಕು ತಂದುಕೊಳ್ಳಬೇಕು. ಪ್ರಶ್ನೋತ್ತರ ಅದು ಕ್ರಿಯೆಯೊಳಗೆ ಇಲ್ಲದಾಗ ನಿರ್ಜಿವ. ಸತ್ತ ಪದಗಳೊಂದಿಗೆ ಆಟವಷ್ಟೆ.
ಜಯದೇವ ಪೂಜಾರ
life Another acceptance. Most end up living in the former. Very few accept life and end conflict. Those who have accepted life have no questions. Those whose lives are in conflict never cease to be questions.