ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ 3 ನೇ ಪಟ್ಟಿಯನ್ನು ರೀಲಿಸ್ ಮಾಡಿದ್ದು, ಅಳೆದು ತೂಗಿ 43 ಮಂದಿಯ ಲಿಸ್ಟ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದೆ.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗೆ ತೆರೆ ಬಿದ್ದಿದ್ದೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ ಟಿಕೆಟ್ ನೀಡಿಲ್ಲ. ವರಣಾದಲ್ಲಿ ಮಾತ್ರ ಅವರು ಸ್ಪರ್ಧೆ ಮಾಡಲಿದ್ದಾರೆ. ಅಥಣಿ ಕ್ಷೇತ್ರದಿಂದ ನಿನ್ನೆಯಷ್ಟೆ ಕಾಂಗ್ರೆಸ್ ಸೇರಿದ್ದ ಸವದಿ ಮೊದಲ ಯತ್ನದಲ್ಲಿಯೇ ಟಿಕೆಟ್ ಪಡೆದುಕೊಂಡಿದ್ದಾರೆ. ಕೋಲಾರದಿಂದ ಕೊತ್ತೂರು ಮಂಜುನಾಥಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ತೆರೆದಾಳದಿಂದ ಉಮಾಶ್ರೀಗೆ ಈ ಬಾರಿ ಟಿಕೆಟ್ ನೀಡಿಲ್ಲ.
ತೀವ್ರ ಕುತೂಹಲ ಕೇರಳಿಸಿದ್ದ ಮಂಗಳೂರು ದಕ್ಷಿಣಕ್ಕೆ ಮಾಜಿ ಶಾಸಕ ಲೋಬೊ ಕೊನೆಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೂ ಈಚೆಗೆ ಬಿಜೆಪಿ ಬಿಟ್ಟು ಕೈ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅಶೋಕ್ ಕುಮಾರ್ ರೈ ಪುತ್ತೂರು ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಂಗಳೂರು ಉತ್ತರಕ್ಕೆ ಮೂರನೇ ಪಟ್ಟಿಯಲ್ಲಿಯೂ ಹೆಸರು ಘೋಷಣೆ ಮಾಡಿಲ್ಲ. ಇಲ್ಲಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಬಾವಾ ನಡುವೆ ತೀವ್ರ ಫೈಟ್ ಇದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರಕ್ಕೆ ತೀವ್ರ ವಿರೋಧದ ನಡುವೆ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಗೆ ಪಕ್ಷ ಮಣೆ ಹಾಕಿದೆ.