ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಬೆನ್ನಲ್ಲೇ ಅಸಮಾದಾನಿತಗೊಂಡಿರುವ ಕಾರ್ಯಕರ್ತರು, ಕೆಪಿಸಿಸಿ ಸದಸ್ಯ, ಹಾಗೂ ಕಡಬ ಬ್ಲಾಕ್ ಉಸ್ತುವಾರಿಯಾಗಿದ್ದ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರು ಬಾರೀ ವಿರೋಧ ಹೊರಹಾಕಿದ್ದು , ರಾಜ್ಯದ ಪ್ರಮುಖ ಕಾಂಗ್ರೇಸ್ ನಾಯಕರಿಗೆ ಈ ವಿಚಾರ ಹಲವು ರೀತಿಯಲ್ಲಿ ತೊರಿಸಿ ಕೊಟ್ಟಿರುವ ನಂದಕುಮಾರ್ ಅಭಿಮಾನಿಗಳು, ಇಂದು ಮುಂದುವರಿದು ನಿಂತಿಕಲ್ಲಿನಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ.
ಈ ಸಮಾವೇಶ ನಡೆಸಿದ್ದಲ್ಲಿ, ನಡೆಸುವುವವರ ವಿರುದ್ದ ಕ್ರಮ ಜರುಗಿಸುವ ಬೆದರಿಕೆಯನ್ನು ಬ್ಲಾಕ್ ಕಾಂಗ್ರೇಸ್ ಸ್ಪಷ್ಟಪಡಿಸಿತ್ತು. ಆದರೆ ಎ.9 ರಂದು ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್‌ನ ಲಕ್ಷ್ಮೀ ವೆಂಕಟ್ರಮಣ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ. ಸಭಾಭವನ ಎಲ್ಲಾ ಆಸನಗಳು ಭರ್ತಿಯಾಗಿದ್ದು, ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಮಹಿಳೆಯರು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…