ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಹೆಸರಿನಲ್ಲಿ ರೈತರ, ಜನರ ಹಣದಲ್ಲಿ ಬಿಜೆಪಿ ಪ್ರಚಾರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ ಮೂಲಕ ಮೂಲ ಆಶಯದ ವಿರುದ್ಧವಾಗಿ ವರ್ತಿಸಿದೆ, ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನಾಗಿಸಿದೆ, ಜನರ, ರೈತರ ಹಣದಲ್ಲಿ ಸಭೆ ನಡೆಸಿ ಪಕ್ಷದ ಪ್ರಚಾರ ಸಭೆಯನ್ನಾಗಿಸಿದೆ ಎಂದು ಆರೋಪಿಸಿದೆ. ಕ್ಯಾಂಪ್ಕೋ ತಾನು ಬೆಳೆದು ಬಂದ ಹಾದಿ, ಎದುರಿಸುತ್ತಿರುವ ಸವಾಲುಗಳು, ಸರ್ಕಾರದಿಂದ ಸಿಗಬೇಕಾದ ಸವಲತ್ತು, ಪರಿಹಾರಗಳ ಬಗ್ಗೆ ಗಮನ ಸೆಳೆಯಲು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದರೇ ಅಥವಾ ಬಿಜೆಪಿ ಪ್ರಚಾರ ಕಾರ್ಯಕ್ರಮ ಮಾಡಿ ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ಅನ್ಯಾಯ ಮಾಡಿದರೇ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು ಮಾತನಾಡದೆ, ರಾಜಕೀಯ ಭಾಷಣ ಮಾಡಿರುವುದು ಸರಿಯಲ್ಲ, ಅದೂ ರೈತರ ಹಣದಲ್ಲಿ, ಜನರ ಹಣದಲ್ಲಿ ಮಾಡಿರುವ ಸಮಾವೇಶದಲ್ಲಿ ರಾಜಕೀಯವನ್ನೂ ಎಳೆದು ತರಲಾಗಿದೆ.ಕ್ಯಾಂಪ್ಕೋದಲ್ಲಿ ಒಂದೇ ಪಕ್ಷದ ಸದಸ್ಯರು ಅಲ್ಲ, ಎಲ್ಲಾ ಪಕ್ಷದ ಸದಸ್ಯರೂ ಇದ್ದಾರೆ. ಈ ಪಕ್ಷಾತೀತ ಸಹಕಾರಿ ಸಂಘದ ವೇದಿಕೆಯಲ್ಲಿ ಚುನಾವಣಾ ಭಾಷಣ ಮಾಡಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದ ಕಾಂಗ್ರೆಸ್ ಕ್ಯಾಂಪ್ಕೋ ಸ್ಥಾಪಕ ವಾರಾಣಾಸಿ ಸುಬ್ರಾಯ ಭಟ್ ಅವರು ಮೊನ್ನೆ ವೇದಿಕೆಯಲ್ಲಿರುತ್ತಿದ್ದರೆ ಅಮಿತ್ ಶಾ ಅವರನ್ನು ಗೆಟ್ ಔಟ್ ಎನ್ನುತ್ತಿದ್ದರು. ಆದರೇ ಬಿಜೆಪಿಯ ಚಮಚಾ ಹಾಗೂ ಚೇಲಾಗಳಂತೆ ವರ್ತಿಸುವ ಈಗಿನ ಬಹುತೇಕ ನಿರ್ದೇಶಕರು ಅಡಳಿತ ಮಂಡಳಿಯ ಸದಸ್ಯರು ವೇದಿಕೆಯ ದುರುಪಯೋಗಕ್ಕೆ ಮೂಕ ಸಾಕ್ಷಿಯಾದರು ಎಂದರು.
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು ಹಾಗೂ ಅದಕ್ಕೆ ಸರಕಾರ ಒದಗಿಸಲಿರುವ ಪರಿಹಾರ ಕ್ರಮಗಳ ಬಗ್ಗೆ ಮಾತನಾಡದ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು ಪುತ್ತೂರು ಭೇಟಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆಯೆಂದು ಗೇಲಿ ಮಾಡಿದರು. ಅಡಿಕೆ ಬೆಳೆಗೆ ಪ್ರಯೋಜನಕಾರಿಯಾಗುವ ಯಾವುದೇ ಮಾತುಗಳನ್ನು ಆಡಿಲ್ಲ. ಗುಜರಾತ್ ಹಾಗೂ ಅಡಿಕೆಗಿರುವ ನಂಟಿಗಷ್ಟೆ ಅಡಿಕೆಯ ಉಲ್ಲೇಖ ಮಾಡಿದರು. ಅಡಿಕೆ ಆಮದು, ಎಲೆ ಚುಕ್ಕಿ ಹಾಗೂ ಹಳದಿ ರೋಗದಿಂದ ಸಂಕಷ್ಟ ಪಡುತ್ತಿರುವ ರೈತನಿಗೆ ಯಾವುದೇ ಯೋಜನೆ, ಪರಿಹಾರ ಘೋಷಿಸಿಲ್ಲ ಎಂದರು.ಅಮಿತ್ ಶಾ ಅವರ ಮಗ ಅಡಿಕೆ ಅಮದು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ . ಹೀಗಾಗಿಯೇ ಶಾ ರವರು ಅಡಿಕೆಯ ಕನಿಷ್ಟ ಅಮದು ಬೆಳೆಯನ್ನು ಹೆಚ್ಚಿಸುವ ಬಗ್ಗೆ ತುಟಿಪಿಟಕ್ ಎಂದಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮೌನೀಸ್ ಮಸ್ಕರೆಂಜಸ್, ರವೀಂದ್ರ ರೈ ನೆಕ್ಕಿಲು ಮತ್ತು ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…