Arecanut Market | ಅಡಿಕೆ ಕಳ್ಳ ಸಾಗಾಣಿಕೆಯನ್ನು ನಿಲ್ಲಿಸಲು ಸಾಧ್ಯವಾಗದಿರುವುದು ಆಘಾತಕಾರಿ ವಿಷಯ |

February 27, 2024
3:18 PM
ಅಡಿಕೆ ದರ ಇಳಿಕೆಗೆ ಅಕ್ರಮ ಆಮದು ಆಗುತ್ತಿರುವುದು ಕಾರಣ, ತಕ್ಷಣವೇ ಅಡಿಕೆ ಆಮದು ಕಡಿವಾಣಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ಕಣ್ಣೆದುರೇ ನಡೆಯುತ್ತಿರುವ ಅಡಿಕೆ ಕಳ್ಳ ಸಾಗಾಣಿಕೆಯನ್ನು ನಿಲ್ಲಿಸಲು ಸಾಧ್ಯವಾಗದಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.

Advertisement
ಅಮಳ ರಾಮಚಂದ್ರ

ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಏರುಗತಿಯಲ್ಲಿದ್ದ ಅಡಿಕೆ ಮಾರುಕಟ್ಟೆ ರೈತರ ಮುಖದಲ್ಲಿ ನಗುವನ್ನು ತರಿಸಿತ್ತು. ಕೋವಿಡ್ ಸಂದರ್ಭದಲ್ಲಿ ಅಂತರಾಷ್ಟ್ರೀಯ ಗಡಿಗಳು ಮುಚ್ಚಿ ಭಾರತಕ್ಕೆ ವಿದೇಶಿ ಅಡಿಕೆಯ ಹರಿವು ನಿಂತ ತಕ್ಷಣ ಅಡಿಕೆಯ ಬೆಲೆ ಗಗನಕೇರಿತ್ತು. ಕೋವಿಡ್ ನಂತರ, ಅಂತರಾಷ್ಟ್ರೀಯ ಗಡಿಗಳು ತೆರೆದುಕೊಂಡು ಇದೀಗ ವಿದೇಶೀ ಅಡಿಕೆಯ ಕಳ್ಳ ಸಾಗಾಟ ದೇಶದ ಈಶಾನ್ಯ ಗಡಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ದೇಶದ ಗಡಿಗಳಲ್ಲಿ ಒಂದು ನರಪಿಳ್ಳೆಯನ್ನೂ ನುಗ್ಗುವುದಕ್ಕೆ ಬಿಡುವುದಿಲ್ಲ ಎಂದು ಜಂಬು ಕೊಚ್ಚಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ತನ್ನ ಕಣ್ಣೆದುರೇ ನಡೆಯುತ್ತಿರುವ ಅಡಿಕೆ ಕಳ್ಳ ಸಾಗಾಣಿಕೆಯನ್ನು ನಿಲ್ಲಿಸಲು ಸಾಧ್ಯವಾಗದಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ದೇಶದ ಗಡಿಗಳಲ್ಲಿನ ಅಧಿಕಾರಿಗಳ ಲಂಚಕೋರತನ ಮತ್ತು ಗಡಿಗಳನ್ನು ಭದ್ರಪಡಿಸುವಲ್ಲಿನ ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ ಮತ್ತು ಆ ಮೂಲಕ ವಿದೇಶೀ ಅಡಿಕೆಯ ನಿರಂತರ ಕಳ್ಳಸಾಗಾಟ ಅಡಿಕೆ ಮಾರುಕಟ್ಟೆಯ ಇಂದಿನ ದುಃಸ್ಥಿತಿಗೆ ನಿಜವಾದ ಕಾರಣವಾಗಿದೆ.

ಅಡಿಕೆ ಮಾರುಬಿಟ್ಟೆ ಸುಭದ್ರವಾಗಿತ್ತು ಏರು ಗತಿಯಲ್ಲಿತ್ತು. ಕೋವಿಡ್ ನಂತರವೂ, ಕಳೆದ ಎರಡು ವರ್ಷ ಕಾಲ ಅಡಿಕೆ ಮಾರುಕಟ್ಟೆ ಸುಸ್ಥಿರವಾಗಿತ್ತು. ಯಾವಾಗ ಕೇಂದ್ರ ಸರ್ಕಾರಭೂತಾನ್‌ನಿಂದ ಹಸಿ ಅಡಿಕೆಯನ್ನು ತಾನೇ ವಿಧಿಸಿದ ಕನಿಷ್ಠ ಆಮದು ಬೆಲೆ ರೂ.351ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮತ್ತು ಶೇಕಡ 110 ರ ಆಮದು ಸುಂಕದ ಬದಲಾಗಿ ಶೇಕಡಾ 10ರ ದರದಲ್ಲಿ ವರ್ಷವೊಂದರ 1700 ಟನ್ ಆಮದು ಮಾಡಿಕೊಳ್ಳುವುದಕ್ಕೆ ಆರಂಭಿಸಿತೋ ಅಂದಿನಿಂದಲೇ ಅಡಿಕೆ ಮಾರುಕಟ್ಟೆ ಕುಸಿಯುವುದಕ್ಕೆ ಆರಂಭವಾಯಿತು. ಹಸಿ ಅಡಿಕೆಯ ಹೆಸರಿನಲ್ಲಿ ಮತ್ತು ಇತರ ಕಳ್ಳ ಹೆಸರುಗಳಲ್ಲಿ ಬಿಳಿ ಗೋಟು ಅಡಿಕೆ ಅವ್ಯಾಹತವಾಗಿ ಕಳ್ಳ ಸಾಗಾಣಿಕೆಗೊಂಡು ಭಾರತದ ಮಾರುಕಟ್ಟೆಯಲ್ಲಿ ದರ ಕುಸಿದು ಇಂದಿನ ಈ ಸ್ಥಿತಿಗೆ ಕಾರಣವಾಯಿತು. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ರೈತರು ಅಡಿಗೆಯ ಮಾರುಕಟ್ಟೆ ದರ ಕುಸಿದು ಹೀನಾಯ ಸ್ಥಿತಿಗೆ ತಲುಪಿದ್ದಾರೆಂದರೆ ಅದಕ್ಕೆ ಅಡಿಕೆಯ ಕಳ್ಳ ಸಾಗಾಣಿಕೆಯನ್ನು ತಡೆಯಲು ವಿಫಲವಾದ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ ಎಂದು ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರಿಂದ ತೊಡಗಿ ಅಡಿಕೆಯ ಕಟ್ಟ ಕಡೆಯ ಕೃಷಿಕರವರೆಗೆ ಭಾರತಕ್ಕೆ ಕಳ್ಳ ಸಾಗಾಣಿಕೆಯ ಮೂಲಕ ಅವ್ಯಾಹತವಾಗಿ ಕಳಪೆ ಗುಣಮಟ್ಟದ ಅಡಿಕೆ ಪೂರೈಕೆ ಆಗುತ್ತಿದೆ, ಈ ಕಳಪೆ ಗುಣಮಟ್ಟದ ಅಡಿಕೆಯನ್ನು ನಮ್ಮ ರೈತರು ಬೆಳೆದ ಶ್ರೇಷ್ಠ ಗುಣಮಟ್ಟದ ಅಡಿಕೆಗೆ ಮಿಶ್ರಣ ಮಾಡಿ , ಅಡಿಕೆಯ ಮಾರುಕಟ್ಟೆಯನ್ನು ಹಾಳುಗೆಡಹಿ ಅಡಿಕೆಯ ಬೆಲೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ತಕ್ಷಣ ದೇಶದ ಗಡಿಗಳನ್ನು ಭದ್ರಪಡಿಸಿ, ವಿದೇಶೀ ಅಡಿಕೆಯ ಅಕ್ರಮ ಕಳ್ಳಸಾಗಾಟವನ್ನು ತಡೆದು , ತನ್ಮೂಲಕ ಅಡಿಕೆಯ ಕಲಬೆರಕೆಯನ್ನು ನಿಲ್ಲಿಸಿ ಮಾರುಕಟ್ಟೆ ಚೇತರಿಕೆಗೆ ಕ್ರಮ ಕೈಗೊಳ್ಳುವುದೇ ಅಡಿಕೆ ಮಾರುಕಟ್ಟೆಯ ಪುನಶ್ಚೇತನಕ್ಕೆ ಅಗತ್ಯವಾಗಿ ಆಗಬೇಕಾಗಿರುವುದಾಗಿದೆ. ಇದನ್ನೇ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿಯವರು ಮೊನ್ನೆ ದಿವಸ ಹೇಳಿದ್ದಾರೆ ಎಂದು ಅಮಳ ರಾಮಚಂದ್ರ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌ ಪಿ ಮುರಳೀಧರ ಗೌಡ,  ಎಪಿಎಂಸಿ ಮಾಜಿ ಸದಸ್ಯ ಶಕೂರ್‌ ಹಾಜಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಶಶಿಕಿರಣ್‌ ರೈ ಉಪಸ್ಥಿತರಿದ್ದರು.

KPCC Spokesperson Amala Ramachandra said that it is shocking that the central government is not able to stop the smuggling of Arecanuts which is happening right in front of its eyes.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group