ದೇಶವನ್ನು ಅತ್ಯಧಿಕ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಈ ದೇಶವನ್ನು ಅಷ್ಟೂ ವರ್ಷಗಳ ಕಾಲ ಮುನ್ನಡೆಸಿತ್ತು. ಇದೀಗ ಕಳೆದ 10 ವರ್ಷಗಳಲ್ಲಿ ಕುಸಿಯುತ್ತಾ ಸಾಗಿದೆ. ಈ ಬಾರಿ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಫರ್ಧೆ ಮಾಡುತ್ತಿದೆ. ಮೈತ್ರಿ ಕೂಟದ ಪಕ್ಷಗಳೂ ಸೇರಿ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸ್ಫರ್ಧಿಸಿದೆ. ಆಡಳಿತ ಪಕ್ಷಕ್ಕೊಂದು ಸಮರ್ಥವಾದ ವಿಪಕ್ಷವೂ ಅಗತ್ಯವಿದೆ. ಆದರೆ ಕಾಂಗ್ರೆಸ್ ಪಕ್ಷ ಉಳಿಸಲು ರಾಹುಲ್ ಗಾಂಧಿ ವಿಫಲರಾಗುತ್ತಿದ್ದಾರೆಯೇ…? ಹೀಗೊಂದು ಚರ್ಚೆ ಶುರುವಾಗುತ್ತಿದೆ.
ಕೇವಲ 326 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಈವರೆಗೂ 281 ಅಭ್ಯರ್ಥಿಗಳನ್ನಷ್ಟೇ ಪ್ರಕಟಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬಲವಾಗಿರುವ ಎನ್‌ಡಿಎ (NDA) ಒಕ್ಕೂಟವನ್ನು ಏಕಾಂಗಿಯಾಗಿ ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯ ಎಂದು ಅರಿತಿರುವ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ಛತ್ತೀಸ್‌ಗಡ, ಉತ್ತರಾಖಂಡ್, ಹಿಮಾಚಲಪ್ರದೇಶ, ಗೋವಾ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.ಉಳಿದ ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೊಂಡಿದೆ. ಉತ್ತರಪ್ರದೇಶ(80), ಮಹಾರಾಷ್ಟ್ರ (48), ಬಿಹಾರ(40) ಮತ್ತು ತಮಿಳುನಾಡು(39) ಒಟ್ಟು 207 ಸ್ಥಾನಗಳಿದ್ದು, ಈ ಪೈಕಿ ಕೇವಲ 52ರಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಅಂದರೆ 25.12%ರಷ್ಟು ಕಡೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಒಡಿಶಾ, ಆಂಧ್ರ, ಬಂಗಾಳದಲ್ಲಿ ಕಾಂಗ್ರೆಸ್ ಪ್ರಭಾವ ಇಲ್ಲವಾಗಿದೆ.
ಯಾವ ವರ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ? : 1996ರಲ್ಲಿ 529 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 140 ರಲ್ಲಿ ಜಯಗಳಿಸಿತ್ತು.1999 ರಲ್ಲಿ 453 ರಲ್ಲಿ ಸ್ಪರ್ಧಿಸಿದರೆ 2004 ರಲ್ಲಿ 417 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. 2009ರ ಚುನಾವಣೆಯಲ್ಲಿ 440 ಕ್ಷೇತ್ರಗಳ ಪೈಕಿ 206 ಅಭ್ಯರ್ಥಿಗಳು ಜಯಗಳಿಸಿದ್ದರು. 2014ರಲ್ಲಿ 464 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿದಿದ್ದರೂ ಕೇವಲ 44 ಮಂದಿ ಮಾತ್ರ ಜಯಗಳಿಸಿದ್ದರು. 2019ರಲ್ಲಿ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ 52 ಮಂದಿ ಮಾತ್ರ ಗೆದ್ದಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಏಕೆ ಹಿನ್ನಡೆಯಾಗುತ್ತಿದೆ…? : 2009ರ ಚುನಾವಣೆಯಲ್ಲಿ 206 ಅಭ್ಯರ್ಥಿಗಳು ಜಯಗಳಿಸಿ, 2014ರಲ್ಲಿ ಕೇವಲ 44 ಮಂದಿ ಮಾತ್ರ ಜಯಗಳಿಸಿದ್ದರು. ಅಂದರೆ ದಿಢೀರನೆ ಕುಸಿಯುವದಕ್ಕೆ ಕಾಂಗ್ರೆಸ್‌ನ ಕಾರ್ಯವೈಖರಿಯೇ ಪ್ರಮುಖ ಕಾರಣ. 2010 ರ ನಂತರ ಸೋಶಿಯಲ್ ಮೀಡಿಯಾ ಚುರುಕಾಯಿತು. 2014 ರ ವೇಳೆಗೆ ಎಲ್ಲಾ ಮಾಧ್ಯಮಗಳ ಹೊರತಾಗಿ ಬಿಜೆಪಿಯು ಸೋಶಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಂಡಿತು. ಗ್ರಾಮೀಣ ಮಟ್ಟದವರೆಗೂ ತಲಪಿತು. ಇದೇ ತಂತ್ರವನ್ನು ಎಎಪಿ ಕೂಡಾ ದೆಹಲಿಯಲ್ಲಿ, ಪಂಜಾಬ್‌ನಲ್ಲೂ ಮಾಡಿತ್ತು. ಬಿಜೆಪಿಯೂ ಇದನ್ನೇ ಅಸ್ತ್ರವಾಗಿಸಿತು, ಪ್ರಭಾವ ಹೆಚ್ಚಾದಂತೆ ಮಾಧ್ಯಮಗಳ ಬೆಂಬಲವೂ ಬಿಜೆಪಿ ಪಡೆಯಿತು. ಕಾಂಗ್ರೆಸ್, ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳಲು ಇಂದಿಗೂ ಸರಿಯಾದ ಕ್ರಮಗಳನ್ನು ಮಾಡಿಲ್ಲ. ಯುವಕರ ತಂಡವನ್ನು ಕಟ್ಟಿಲ್ಲ, ಹೀಗಾಗಿ ಗ್ರಾಮೀಣ ಮಟ್ಟದವರೆಗೂ ಕಾಂಗ್ರೆಸ್ ವೇವ್ ತಲಪುತ್ತಿಲ್ಲ. ಯುವ ನಾಯಕತ್ವದ ಕೊರತೆ ಸಹಿತ ವಿವಿಧ ಕಾರಣಗಳಿಂದ ಕಾಂಗ್ರೆಸ್ ಹಿನ್ನಡೆಯಾಗುತ್ತಲೇ ಬಂದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…