ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ | ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ | ಪರಿಸರದ ಮೇಲಾಗುವ ಪರಿಣಾಮಗಳೇನು..?

May 21, 2024
4:55 PM
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿದೆ. ಹಾಗಾದರೆ  ಇದರಿಂದಾಗುವ ಲಾಭ ಅಥವಾ ನಷ್ಟಗಳೇನು..? ಈ ಬಗ್ಗೆ ವಿಜಯಕರ್ನಾಟಕ ಸಮಗ್ರ ವರದಿ ಮಾಡಿದೆ..

ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ ಮುಖ್ಯ.  ಶಿವಮೊಗ್ಗ(Shimoga) ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ(Agumbe Ghat) ಸುರಂಗ ಮಾರ್ಗ(tunnel construction) ನಿರ್ಮಾಣಕ್ಕೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(National Highway Authority) ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿದೆ. ಹಾಗಾದರೆ  ಇದರಿಂದಾಗುವ ಲಾಭ ಅಥವಾ ನಷ್ಟಗಳೇನು..? ಇದಕ್ಕೆ ತಗಲುವ ವೆಚ್ಚ ಎಷ್ಟು ಸಾವಿರ ಕೋಟಿ? ಹಾಗೂ ಪರಿಸರದ ಮೇಲೆ ಯಾವೆಲ್ಲಾ ಪರಿಣಾಮಗಳನ್ನು ಬೀರುತ್ತೆ ಅನ್ನುವ ಬಗ್ಗೆ ಮಾಹಿತಿ ಇಲ್ಲಿದೆ..

Advertisement
ಮಲ್ಪೆ-ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169A) ಚತುಷ್ಪಥ ಯೋಜನೆ ಸದ್ಯ ಪ್ರಗತಿಯಲ್ಲಿದೆ. ಮತ್ತೊಂದೆಡೆ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಇದೀಗ ಕೇಳೊಇಬರುತ್ತಿದೆ. ಇನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹದ್ದಾರಿ ಸಚಿವ ನಿತಿನ್‌ ಗಡ್ಕರಿ ಇತ್ತೀಚೆಗಷ್ಟೇ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕರಾವಳಿ ಮಲೆನಾಡು ಸಂಪರ್ಕ ಕಲ್ಪಿಸುವ ಸುರಂಗ ಯೋಜನೆ ಪ್ರಸ್ತಾವನೆವನ್ನು ಸಲ್ಲಿಕೆ ಮಾಡಲಾಗಿತ್ತು.

ಇನ್ನು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಒಪ್ಪಿಗೆ ನೀಡಿದ್ದು, 2 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಪಿಆರ್‌ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಗೆ ಸಂಪರ್ಕ ಕಲ್ಪಿಸುವ 12 ಕಿಲೋ ಮೀಟರ್‌ ದೂರದವರೆಗೆ 3,500 ಕೋಟಿ ರೂಪಾಯಿ ವೆಚ್ಚ ಎಂದು ನಿರೀಕ್ಷಿಸಲಾಗಿದೆ. ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ (169ಎ) ಚತುಷ್ಪಥ ಯೋಜನೆಯಡಿ ಸುರಂಗ ನಿರ್ಮಾಣ ಯೋಜನೆ ಇದಕ್ಕೆ ಸೇರಿಲ್ಲ. ಆದರೂ ದ್ವಿಪಥ ರಸ್ತೆ ನಿರ್ಮಾಣದ ಬದಲು ಸುರಂಗ ಯೋಜನೆ ಸೇರಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಗುಂಬೆ ಘಾಟಿ ಕೊರೆದು ಸುರಂಗ ಮಾರ್ಗ ನಿರ್ಮಾಣ ಲೆಕ್ಕಾಚಾರವು ಅಪಾಯದ ಕರೆಗಂಟೆ ಎಂಬುದು ಕೆಲ ಪರಿಸರವಾದಿಗಳ ಲೆಕ್ಕಚಾರ. ಒಂದು ವೇಳೆ, ಈ ಯೋಜನೆಗೆ ಸರಕಾರ ಮುಂದಾದರೆ, ತುಂಬಲಾರದಷ್ಟು ಪರಿಸರ ನಾಶವಾಗಲಿದೆ. ಪ್ರಸ್ತುತ ಆಗುಂಬೆ ಘಾಟಿಯಲ್ಲಿ ಉದ್ದೇಶಿತ ಸುರಂಗ ಮಾರ್ಗದ ಉದ್ದ 12 ಕಿ.ಮೀ. ಇದೆ. ಘಾಟಿ ಕೊರೆದು ಇಂತಹ ಎರಡು ಟನಲ್‌ಗಳನ್ನು ನಿರ್ಮಾಣ ಮಾಡುವುದರಿಂದ ಭವಿಷ್ಯದಲ್ಲಿ ಪ್ರಕ್ರತಿ ವಿಕೋಪಕ್ಕೆ ನಾಂದಿಯಾಗಲಿದೆ. ಮಲ್ಪೆ- ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169ಎ) ಚತುಷ್ಪಥ ಯೋಜನೆ ಪ್ರಗತಿಯಲ್ಲಿದ್ದು, ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರಕಾರವು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಗೆ ನೀಡಿದೆ. 2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ ಸಿದ್ಧವಾಗಲಿದೆ.

ಟನಲ್‌ನಿಂದಾಗುವ ನಷ್ಟ :

  1. ಟನಲ್‌ ನಿರ್ಮಾಣ ವೇಳೆ ಬಳಸುವ ಸ್ಫೋಟಕ, ಅತ್ಯಾಧುನಿಕ ಯಂತ್ರಗಳ ಹೊಡೆತಕ್ಕೆ ಗುಡ್ಡವೇ ಜಾರುವ ಭೀತಿ.
  2. ಆಗುಂಬೆ ಘಾಟಿ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇದು ಸಿಂಗಳಿಕ, ದಾಸಮಂಗಟ್ಟೆ, ಕಾಳಿಂಗ ಸರ್ಪ ಸೇರಿದಂತೆ ಕೋಟ್ಯಂತರ ಜೀವವೈವಿಧ್ಯಗಳ ಆವಾಸ. ಯೋಜನೆಯಿಂದ ಅವಕ್ಕೆ ಧಕ್ಕೆ.
  3. ಮಾನ್ಸೂನ್‌ ಮಾರುತಗಳನ್ನು ತಡೆದು ಮಳೆ ಸುರಿಸುವ ಆಗುಂಬೆ ಘಾಟಿಗೆ ಧಕ್ಕೆಯಾದರೆ, ವರ್ಷಧಾರೆ ಮೇಲೆ ನೇರ ಪರಿಣಾಮ.
  4. ಶಿವಮೊಗ್ಗ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಜೀವನದಿಯಂತಿರುವ ತುಂಗಾ ಹರಿವಿನ ಮೇಲೂ ಪರಿಣಾಮ.
  5. ಆಗುಂಬೆ ಘಾಟಿ ಇಡಿ ಪಶ್ಚಿಮಘಟ್ಟದಲ್ಲೇ ಅತಿ ಹೆಚ್ಚು ಜೀವವೈವಿಧ್ಯ ಹೊಂದಿರುವ ಕಣಿವೆ. ಈಗಲೂ ಮಾನವ ಸಂಪರ್ಕಕ್ಕೆ ಬರದ ಪ್ರದೇಶಗಳು ಹಲವು ಇವೆ. ಅವುಗಳ ಮೇಲೂ ನೇರ ಪರಿಣಾಮ.
ಈ ಹಿಂದೆ ನಿತಿನ್ ಗಡ್ಕರಿ ಏನು ಹೇಳಿದ್ದರು? : 2022ರಲ್ಲಿ ಶಿರಾಡಿ ಘಾಟ್‌ನಲ್ಲಿ ಸುರಂಗ ರಸ್ತೆ ನಿರ್ಮಿಸುವ ಕುರಿತಾಗಿ ಪ್ರಸ್ತಾಪ ಕೇಳಿ ಬಂದಿತ್ತು. ಆದರೆ ಈ ಕುರಿತ ಪರಾಮರ್ಶೆ ಬಳಿಕ ಲೋಕಸಭೆಗೆ ಮಾಹಿತಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ಸಾಧ್ಯವಿಲ್ಲ ಎಂದು ಹೇಳಿದ್ದರು. 26 ಕಿಲೋ ಮೀಟರ್ ಸುರಂಗ ರಸ್ತೆ ಬದಲಿಗೆ ಶಿರಾಡಿ ಘಾಟ್ ರಸ್ತೆ ವಿಸ್ತರಣೆ ಸೂಕ್ತ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75, ಮಂಗಳೂರು ಹಾಗೂ ಬೆಂಗಳೂರು ನಗರವನ್ನು ಸಂಪರ್ಕಿಸುತ್ತದೆ. ಸುರಂಗ ರಸ್ತೆ ನಿರ್ಮಾಣ ಯೋಜನೆಯ ಪ್ರಸ್ತಾಪವನೆಯನ್ನು ಕೇಂದ್ರ ಸರ್ಕಾರ ಕೈ ಬಿಟ್ಟ ಬಳಿಕ ಈ ಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.

(ಮೂಲ: ವಿಜಯ ಕರ್ನಾಟಕ)

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group