ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ : ಇದರಿಂದಾಗುವ ಪ್ರಯೋಜನಗಳೇನು..?

December 9, 2023
1:50 PM

ಯಾವುದೇ ಕಾಯಿಲೆ(Decease) ಇರಲಿ ಹೊಟ್ಟೆ ತುಂಬ ಊಟ(Meal) ಮಾಡಿದ ನಂತರ ಔಷಧ ಸೇವಿಸಬೇಕು ಎನ್ನುವುದು ವಾಡಿಕೆ. ಆದರೆ ಕೆಲವು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ(Empty stomach) ಸೇವಿಸುವುದೇ ಒಳಿತು. ಯೇಲ್ ವಿಶ್ವವಿದ್ಯಾನಿಲಯ ಮತ್ತು ಬ್ರಿಟಿಷ್ ನ್ಯೂರೋಸೈನ್ಸ್ ಅಸೋಸಿಯೇಷನ್‌ನ ಸಂಶೋಧಕರ ಪ್ರಕಾರ, ನೀವು ಖಾಲಿ ಹೊಟ್ಟೆಯಲ್ಲಿರುವಾಗ ಅದು ಹಸಿವನ್ನು ಉತ್ತೇಜಿಸುತ್ತದೆ. ಆಗ ಹೊಟ್ಟೆಯ ಹಾರ್ಮೋನ್(Harmon) ಹೊಸ ಮೆದುಳಿನ ಕೋಶಗಳ(brain cell) ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ.

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ. ಜೇಷ್ಠಮದ್ದು, ಹಿಪ್ಪಲಿ, ಜಾಯಿಕಾಯಿ, ಗದಗನಕಾಯಿ, ಶುಂಠಿ, ಮೆಣಸಿನ ಕಾಳನ್ನು ತೇಯ್ದು ಮಗುವಿಗೆ ಒಂದು ಚಮಚದಷ್ಟು ಮುಂಜಾನೆ ನೀಡಿದರೆ ಜಂತು ಹುಳುವಿನ ಸಮಸ್ಯೆ ಉಂಟಾಗದು. ಹಸಿದ ಹೊಟ್ಟೆಯಲ್ಲಿ ಮೂರು ಲೋಟ ನೀರು ಕುಡಿದು 45 ನಿಮಿಷಗಳ ನಂತರ ಆಹಾರ ಸೇವಿಸಬೇಕು. ಉತ್ತಮ ಚಯಾಪಚಯ ಕ್ರಿಯೆಗೆ, ತ್ವಚೆಯ ಕಾಂತಿ ಹೆಚ್ಚಲು, ಬೊಜ್ಜಿನ ಸಮಸ್ಯೆ ನಿವಾರಿಸಲು, ಹೊಳೆಯುವ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೆ ಇದು ಸಹಕಾರಿ. ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದು. ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಹೊಟ್ಟೆ ಮತ್ತು ಎದೆಯುರಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುತ್ತದೆ.

ಹಲ್ಲುಜ್ಜಿದ ನಂತರ ಹಸಿದ ಹೊಟ್ಟೆಯಲ್ಲೇ 10–15 ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವ ರೂಢಿ ಮಾಡಿಕೊಂಡರೆ ಅನೇಕ ಲಾಭಗಳಿವೆ. ಕೂದಲು ಉದುರುವಿಕೆ ಕಡಿಮೆ ಆಗುತ್ತದೆ. ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡಬಲ್ಲುದು. ಖಾಲಿ ಹೊಟ್ಟೆಗೆ ಕರಿಬೇವು ಸೇವನೆ ಗ್ಯಾಸ್ಟ್ರಿಕ್‌ ಹಾಗೂ ಅಸಿಡಿಟಿಗೆ ರಾಮಬಾಣ, ಕೀಲುನೋವು ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಾಗೂ ಆ್ಯಸಿಡಿಟಿ ಸಮಸ್ಯೆಗೆ ರಾಮಬಾಣ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿ ನೋವು ಮುಂತಾದ ಸಮಸ್ಯೆಗಳಿಗೆ ಕರಿಬೇವು ಸೇವನೆ ಪರಿಹಾರ ನೀಡುತ್ತದೆ.ಕರಿಬೇವು ಸೇವನೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ.

ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ನೀಡುತ್ತದೆ. ಕಹಿಬೇವನ್ನು ಅರೆದು ಮುಂಜಾನೆ ಕುಡಿದರೆ ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುವುದಿಲ್ಲ. ವಾಯು ಸಂಬಂಧಿ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಇದಕ್ಕಿದೆ.ಹಸಿದ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ.ಉದ್ವೇಗ ಹಾಗೂ ಆತಂಕದಿಂದ ಎದೆಬಡಿತ ಹೆಚ್ಚುವ ಸಮಸ್ಯೆ ನಿಮ್ಮಲ್ಲಿದ್ದರೆ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೀಬೆ ಹಣ್ಣು ಸೇವಿಸುವುದು ಅತ್ಯುತ್ತಮ.

– ಸಂಗ್ರಹ ಮಾಹಿತಿ
Although not eating makes some people irritable, there’s some good evidence to show that it can make you more productive. According to researchers from Yale University and the British Neuroscience Association, the stomach hormone that stimulates hunger when you have an empty stomach also promotes new brain cell growth
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ
March 27, 2026
6:50 AM
by: ದ ರೂರಲ್ ಮಿರರ್.ಕಾಂ
ವೈಜ್ಞಾನಿಕ ಬೆಂಬಲ ಬೆಲೆ ಮತ್ತು ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
March 27, 2026
6:45 AM
by: ದ ರೂರಲ್ ಮಿರರ್.ಕಾಂ
ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ
March 27, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror