ಗ್ರಾಹಕರ ಗಗನಕುಸುಮವಾಗುತ್ತಿರುವ ಚಿನ್ನ| ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ | 67 ಸಾವಿರಕ್ಕೆ ಏರಿದ ಬಂಗಾರದ ರೇಟ್

March 11, 2024
1:06 PM

ಮದುವೆ ಸೀಜನ್‌(Marriage Season) ಆರಂಭವಾಗುತ್ತಿದೆ. ಚಿನ್ನ(Gold) ಕೊಳ್ಳುವ ಸಂಭ್ರಮ ಒಂದೆಡೆಯಾದರೆ, ಗಗನಕ್ಕೇರುತ್ತಿರುವ ಚಿನ್ನದ ಬೆಲೆ(Gold price) ಎಲ್ಲರನ್ನು ಚಿಂತೆಗೀಡು ಮಾಡಿದೆ. ಮದುವೆಗೆ ಚಿನ್ನ ಕೊಳ್ಳಲೇಬೇಕಾದ ಅನಿವಾರ್ಯ. ಆದರೆ ಬೆಲೆ ಕೇಳಿದ್ರೆ ಶಾಕ್‌ ಆಗುವಂತಿದೆ. ಸದ್ಯ ಚಿನ್ನದ ಬೆಲೆ ಎಲ್ಲಾ ರೆರ್ಕಾಡ್‍ಗಳನ್ನ ಬ್ರೇಕ್ (Record break)ಮಾಡಿದೆ. ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಭಾನುವಾರ ಬಂಗಾರದ ರೇಟ್ (Gold & Silver Rate) ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.

ಇದೊಂದು ಆಲ್ ಟೈಮ್ ಹೈಯೆಸ್ಟ್ ರೆರ್ಕಾಡ್ ಆಗಿದೆ. ಬಂಗಾರ ಯಾವತ್ತೂ ಈ ರೇಟ್‍ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿನಿಂದ ಮದುವೆ ಸೀಜನ್ ಇದ್ದು, ಅಕ್ಷಯ ತೃತೀಯಕ್ಕೂ ಚಿನ್ನಕ್ಕೆ ಡಿಮ್ಯಾಂಡ್ ಇರೋದ್ರಿಂದ ಈ ರೇಟ್ ಇದೇ ತರಹ ಮುಂದುವರಿಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳುತ್ತಾರೆ.

Advertisement

ದರ ಏರಿಕೆಗೆ ಕಾರಣಗಳೇನು?: ಡಾಲರ್ ದುರ್ಬಲವಾಗಿರೋದು. ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಗಾರದ ಮೇಲೆ ಇನ್ವೆಸ್ಟ್ ಮಾಡ್ತಾ ಇರೋದು ಚಿನ್ನದ ಪೂರೈಕೆಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಶುಭ ಸಮಾರಂಭಗಳ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿರೋದು ಗ್ರಾಹಕರಲ್ಲಿ ಆತಂಕ ತಂದಿದೆ. ಮದುವೆಗೆ ಆಭರಣಗಳನ್ನು ಮಾಡಿಸೋದು ಹೇಗೆ ಅಂತಾ ಚಿಂತಿತರಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ರೇಟ್ ಮತ್ತಷ್ಟು ಗಗನಕ್ಕೆ ಏರುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ.

– ಅಂತರ್ಜಾಲ ಮಾಹಿತಿ

Advertisement
Gold price has broken all records. The sky is bleak for the poor and the middle class. On Sunday, Gold & Silver Rate rose to record levels in the history of Chinivarpet. Gold price has crossed 67 thousand and silver has crossed 75 thousand.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ
ಎಲ್ ನಿನೋ ಎಚ್ಚರಿಕೆ – ದೇಶದಲ್ಲಿ 43% ಮಳೆ ಕೊರತೆ, ಕರ್ನಾಟಕ ಸೇರಿ 12 ರಾಜ್ಯಗಳ 315 ಜಿಲ್ಲೆಗಳಿಗೆ ಕೇಂದ್ರದ ವಿಶೇಷ ಕೃಷಿ ಯೋಜನೆ
June 25, 2026
7:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror