ಮುಂದುವರಿದ ಮಳೆಯ ಅಬ್ಬರ | ಮಲೆನಾಡು ತಪ್ಪಲು ಪ್ರದೇಶದಲ್ಲಿ ದಾಖಲೆ ಮಳೆ |

July 19, 2024
10:41 AM
ಕಳೆದ 24 ಗಂಟೆಯಲ್ಲಿ ಮಲೆನಾಡು ತಪ್ಪಲು ಪ್ರದೇಶದಲ್ಲಿ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಸತತ ಮೂರನೇ ದಿನವೂ ಭಾರೀ ಮಳೆ ಮುಂದುವರಿದಿದೆ. 

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಮಲೆನಾಡು ತಪ್ಪಲು ಪ್ರದೇಶದಲ್ಲಿ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಸತತ ಮೂರನೇ ದಿನವೂ ಭಾರೀ ಮಳೆ ಮುಂದುವರಿದಿದೆ. 

Advertisement
Advertisement

ಮಲೆನಾಡು -ಕೊಡಗು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಮಲೆನಾಡು ತಪ್ಪಲು ಭಾಗವಾದ ಕೊಲ್ಲಮೊಗ್ರದಲ್ಲಿ 139 ಮಿಮೀ,ಬಾಳುಗೋಡು 162 ಮಿಮೀ, ಮಡಪ್ಪಾಡಿ 167ಮಿಮೀ, ಸುಬ್ರಹ್ಮಣ್ಯ 114 ಮಿಮೀ,ಬಳ್ಪ 128 ಮಿಮೀ, ಉಬರಡ್ಕ 178ಮಿಮೀ, ಚೆಂಬು 136 ಮಿಮೀ, ಬೆಳ್ಳಾರೆ 130 ಮಿಮೀ, ಕೋಡಿಂಬಾಳ 124 ಮಿಮೀ, , ಐವರ್ನಾಡು 162 ಮಿಮೀ, ಬೆಳ್ತಂಗಡಿ 155 ಮಿಮೀ, ಬಾಳಿಲ 133 ಮಿಮೀ,   ಪುತ್ತೂರು 115ಮಿಮೀ,  ಕಲ್ಲಗುಂಡಿ ಸಂಪಾಜೆ 132ಮಿಮೀ, ಬಜಗೋಳಿ 227ಮಿಮೀ, , ಸುಳ್ಯ 142 ಮಿಮೀ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಕಳೆದ 3 ದಿನಗಳಲ್ಲಿ 300 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಇದು ಕೃಷಿಕರೇ ಮಳೆದಾಖಲು ಮಾಡುವ ಗುಂಪಿನ ಮಾಹಿತಿ.

Advertisement

ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಶುಕ್ರವಾರ ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆ, ಹಾಗೂ ಕರಾವಳಿ ಜಿಲ್ಲೆಗಳಿಗೆ ನಾಳೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಜೋರಾದ ಗಾಳಿಯೊಂದಿಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆರೆಂಜ್ಅಲರ್ಟ್ ನೀಡಲಾಗಿದೆ, ಜುಲೈ 21 ರಿಂದ 23 ರವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 19 ರಿಂದ 23 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Advertisement

ಮಲೆನಾಡು ಮತ್ತು ಕರಾವಳಿ ಭಾಗದಲ್ಲಂತೂ ವರುಣ ಅಬ್ಬರ ಜೋರಾಗಿದ್ದು, ಗುಡ್ಡ ಕುಸಿತ, ಮತ್ತೊಂದೆಡೆ ಹಳ್ಳ- ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಳೆ ಇನ್ನೂ ಜು‌. 24 ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Persistent rainfall persists in coastal and Malenadu regions. Over 100 mm of precipitation has been recorded in the Malenadu areas. The meteorological department predicts that heavy rainfall will continue for the next four days.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror