#Agriculture | 11 ಗಂಟೆಯಲ್ಲಿ ನಿರಂತರ 18 ಎಕರೆ ಭೂಮಿ ಉಳುಮೆ | ತನ್ನ ಜೋಡೆತ್ತುಗಳೊಂದಿಗೆ ರೈತನ ವಿಶೇಷ ದಾಖಲೆ |

July 20, 2023
11:48 AM
ಮಳೆಯಾಗದೆ ಅನೇಕ ರೈತರು ಉಳುಮೆ ಮಾಡಿಲ್ಲ. ಇದೀಗ ಮಳೆಯಾಗುತ್ತಿದೆ ಎನ್ನುವ ಹಂತದಲ್ಲಿ ರೈತರದು ಸವಾಲಿನ ಕೆಲಸ . ಕೃಷಿ ಕಾಯಕ ಎಂದರೆ ಹೀಗೇ. ಇದಕ್ಕೊಂದು ನಿದರ್ಶನ ರೈತ ಯಂಕಪ್ಪ. ಇವರು ನಿರಂತರವಾಗಿ ಉಳುಮೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಾರಿ ಮುಂಗಾರು ಉತ್ತರ ಕರ್ನಾಟಕದ ಕಡೆ ಇನ್ನೂ ಮಳೆ ಸರಿಯಾಗಿ ಆಗಿಲ್ಲ. ಅದರಲ್ಲೂ ಬಯಲು ಸೀಮೆ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬಿಜಾಪುರ, ಯಾದಗಿರಿ ಕಡೆ ರೈತರು ಮಳೆರಾಯನಿಗಾಗಿ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾರೆ. ಮಳೆ ಬಾರದಿದ್ದರೆ ಬೆಳೆ ಇಲ್ಲ. ಬೆಳೆ ಇಲ್ಲದಿದ್ದರೆ ಜೀವನವೇ ದುಸ್ತರವಾಗಲಿದೆ.

Advertisement

ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತ ಯಂಕಪ್ಪ ಎಂಬುವವರು ವಿಶೇಷ ಪ್ರಯತ್ನ ಕೈಗೊಂಡಿದ್ದಾರೆ. ರೈತ ಯಂಕಪ್ಪ  ಅವರ  ಜೋಡೆತ್ತುಗಳ ಸಹಕಾರದಿಂದ ಈ ಸಾಧನೆಯನ್ನು ಮಾಡಿದ್ದಾರೆ. ಮನುಷ್ಯರು ಗಿನ್ನಿಸ್ ರೆಕಾರ್ಡ್ ಗಾಗಿ ಏನೇನೋ ಮಾಡೋದನ್ನು ಕೇಳಿದ್ದೀವಿ. ಆದರೆ ಇಲ್ಲಿ ಜೋಡೆತ್ತುಗಳನ್ನು ಬಳಸಿಕೊಂಡು ಈ ರೈತ ದಾಖಲೆಯನ್ನು ಮಾಡಿದ್ದಾರೆ. ಈ  ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 11 ಗಂಟೆಯಲ್ಲಿ 18 ಎಕರೆಯ ಕೃಷಿ ಭೂಮಿಯನ್ನು ನಿರಂತರವಾಗಿ ಉಳುಮೆ ಮಾಡಿ ಜೋಡೆತ್ತುಗಳೊಂದಿಗೆ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮೂಷ್ಟುರು ಗ್ರಾಮದ ಜೋಡೆತ್ತುಗಳು ಹೊಸ ದಾಖಲೆ ಬರೆದಿವೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group