ಜ.18 ರಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ | ರಾಜ್ಯ ಗುತ್ತಿಗೆದಾರರ ಸಂಘದಿಂದ ನಿರ್ಧಾರ |

January 16, 2023
9:38 PM
ಗುತ್ತಿಗೆದಾರರ ಸಮಸ್ಯೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 18 ರಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಸರ್ಕಾರದ ವಿರುದ್ಧ ಹಾಗೂ  ಸರ್ಕಾರ ಬಾಕಿ ಇರಿಸಿಕೊಂಡಿರುವ 25 ಸಾವಿರ ಕೋಟಿ ರೂ.  ಕಾಮಗಾರಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಲಂಚ ಕೊಡದ ಕಾರಣಕ್ಕೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಕಾಮಗಾರಿ ಮುಗಿದಿದ್ದರೂ 25 ಸಾವಿರ ಕೋಟಿ ರೂ. ಬಿಡುಗಡೆ ಮಾಡಿಲ್ಲ. ಲೋಕೋಪಯೋಗಿ ಇಲಾಖೆಯಿಂದ 4 ಸಾವಿರ ಕೋಟಿ, ನೀರಾವರಿ ಇಲಾಖೆಯಿಂದ 8 ಸಾವಿರ ಕೋಟಿ ಹಾಗೂ ಬಿಬಿಎಂಪಿಯಿಂದ 3 ಸಾವಿರ ಕೋಟಿ ರೂ. ಬಾಕಿ ಇರಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾ ಮಾಡಲಾಗುವುದು. ಗುತ್ತಿಗೆದಾರರಿಂದ ಸಚಿವರು, ಹಿರಿಯ ಅಧಿಕಾರಿಗಳು, ಶಾಸಕರು ಲಂಚ ಕೇಳಿರುವ ಆಡಿಯೋ, ವೀಡಿಯೊ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಜನವರಿ 19ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಜನವರಿ 18ರಿಂದ ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಂಪಣ್ಣ ವಿವರಿಸಿದರು. 20 ಸಾವಿರಕ್ಕೂ ಅಧಿಕ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಅವರು ವಿವರಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

700 ಕ್ಕೂ ಅಧಿಕ ರೆಸಿಪಿ | ದಿವ್ಯ ಮಹೇಶ್‌ ಅವರಿಗೆ “ಪಾಕ ಪ್ರವೀಣೆ” ಪ್ರಶಸ್ತಿ
August 5, 2025
8:05 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ಪಂಜದ ಕ್ರಿಯೇಟಿವ್‌ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ |
August 5, 2025
7:48 AM
by: ದ ರೂರಲ್ ಮಿರರ್.ಕಾಂ
ಪ್ಲಾಸ್ಟಿಕ್‌ ತ್ಯಾಜ್ಯ ಕಡಿಮೆ ಮಾಡಲು ಏನು ಕ್ರಮ ? ಅಧ್ಯಯನ ವರದಿ ನಿಯಮ ಗ್ರಾಮಗಳಲ್ಲೂ ಜಾರಿಯಾಗಲಿ
August 5, 2025
7:02 AM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಮೀಥೇನ್ ಕಡಿತದ ಗುರಿ | ವಿಯೆಟ್ನಾಂನಲ್ಲಿ ವಿಶೇಷ ಮಾರ್ಗಸೂಚಿ
August 4, 2025
9:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group