ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಅರಣ್ಯ ಭೂಮಿಯನ್ನಯ ಕೃಷಿಗೆ ಬಳಸಿಕೊಳ್ಳುವಾಗ ಪರಿಸರಕ್ಕೆ ಹಾನಿಯಾಗದಂತ ಸರ್ಕಾರ ಎಚ್ಚರಿಕೆ ವಹಿಸಿದೆ. ಕಟ್ಟುನಿಟ್ಟಾದ ಪರಿಸರ ಮಾರ್ಗಸೂಚಿಗಳ ಅಡಿಯಲ್ಲಿ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. ಮಣ್ಣಿನ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಈ ಯೋಜನೆಯ ಕಡ್ಡಾಯ ಭಾಗವಾಗಲಿದೆ ಎಂದು ತಿಳಿದುಬಂದಿದೆ.
ಈ ಯೋಜನೆಯಿಂದ ಸಣ್ಣ ರೈತರ ಬದುಕಿನಲ್ಲಿ ಯಾವ ರೀತಿಯಲ್ಲಿ ಬದಲಾವಣೆಯನ್ನು ಕಾಣಬಹುದು ಎಂಬುದನ್ನು ನೋಡುವುದಾದರೆ
- ಆರ್ಥಿಕ ಸ್ವಾವಲಂಬನೆ: ಇಳುವರಿ ಹೆಚ್ಚಾದಂತೆ ರೈತರ ಆದಾಯವೂ ವೃದ್ಧಿಸುತ್ತದೆ, ಇದು ಸಾಲದ ಸುಳಿಯಿಂದ ಹೊರಬರಲು ಸಹಕಾರಿಯಾಘಿರುತ್ತದೆ.
- ಭೂ ಹಿಡುವಳಿ ವಿಸ್ತರಣೆ: ಕನಿಷ್ಢ ಭೂಮಿ ಹೊಂದಿರುವ ರೈತರಿಗೆ ಹೆಚ್ಚಿನ ಜಾಗ ಸಿಗುವುದರಿಂದ ಅವರು ವೈವಿಧ್ಯಮ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ.
- ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿ: ಕೃಷಿ ಚಟುವಟಿಕೆಗಳು ಚುರುಕುಗೊಂಡರೆ ರಸಗೊಬ್ಬರ, ಬೀಜ ಮತ್ತು ಕೃಷಿ ಉಪಕರಣಗಳ ಬೇಡಿಕೆ ಹೆಚ್ಚಾಗಿ ಗ್ರಾಮೀಣ ಆರ್ಥಿಕತೆ ಸುಧಾರಿಸುತ್ತದೆ.
- ಕೃಷಿಯತ್ತ ಯುವಕರ ಒಲವು: ಇತ್ತೀಚಿನ ದಿನಗಳ್ಲಿ ಯುವಕರು ಐಟಿ ಅಥವಾ ಇತರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ. ಭೂ ಲಭ್ಯತೆ ಮತ್ತು ಲಾಭದಾಯಕ ಹೆಚ್ಚಾದರೆ, ಕೃಷಿಯನ್ನು ಒಂದು ಉತ್ತಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಯುವ ಪೀಳಿಗೆಗೆ ಪ್ರೇರಣೆ ಸಿಗುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

