ಅಡಿಕೆ ಕೊಳೆರೋಗ | ಕಾಪರ್‌ ಸಲ್ಫೇಟ್‌ ಸಹಾಯಧನಕ್ಕೆ ಸಾಲು ಸಾಲು ಅರ್ಜಿ | ಅಸಹಾಯಕ ಸ್ಥಿತಿಯಲ್ಲಿ ಇಲಾಖೆ | ನಿರೀಕ್ಷೆಯಲ್ಲಿ ಬೆಳೆಗಾರ |

August 21, 2022
12:46 PM

ಅಡಿಕೆ ಕೊಳೆರೋಗ ಪ್ರತೀ ವರ್ಷದ ಸಮಸ್ಯೆ. ಅಡಿಕೆ ಬೆಳೆಯುವ ಮಲೆನಾಡಿನಲ್ಲಿ ಕೊಳೆರೋಗ ಮಾಮೂಲಿ. ಆದರೆ ಬೆಳೆಗಾರರು ಮಳೆಗಾಲದ ಅವಧಿಯಲ್ಲಿ ಸಾಹಸದಿಂದ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡುತ್ತಾರೆ. ಹೇಗೋ ನಿಯಂತ್ರಣ ಮಾಡುತ್ತಾರೆ. ಈ ಬಾರಿ ವ್ಯಾಪಕ ಮಳೆಯಾಯಿತು, ಕೊಳೆರೋಗ ವ್ಯಾಪಕವಾಯಿತು. ಇದೀಗ ಕೊಳೆರೋಗ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೋ ದ್ರಾವಣದ ಅಗತ್ಯ ವಸ್ತು ಕಾಪರ್‌ ಸಲ್ಫೇಟ್‌ ಸಹಾಯಧನದ ಬಗ್ಗೆ ಚರ್ಚೆ ಆರಂಭವಾಗಿದೆ. ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ, ಅಡಿಕೆ ನಾಡಿನ ಜನಪ್ರತಿನಿಧಿಗಳು, ಸರ್ಕಾರ ಮೌನವಾಗಿದೆ.

Advertisement

ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ಸಿಂಪಡಣೆ ಮಾಡಿರುವ ಕೃಷಿಕರು ಮಳೆಗಾಲ ಮಧ್ಯ ಅವಧಿಯಲ್ಲಿ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಲು ಆರಂಭ ಮಾಡುತ್ತಾರೆ. ಇಲಾಖೆಯು ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗ ನಿಯಂತ್ರಣ ಅಡಿಯಲ್ಲಿ ಸಹಾಯಧನ ನೀಡುವ ಯೋಜನೆಯನ್ನು ಪ್ರಕಟಿಸಿದ ನಂತರ ಅರ್ಜಿ ಸಲ್ಲಿಸಲು ಆರಂಭವಾಗುತ್ತದೆ. ಪ್ರತೀ ವರ್ಷ ಈ ಯೋಜನೆ ಪ್ರಕಟವಾದ ಕೂಡಲೇ ಕೃಷಿಕರು ಅರ್ಜಿ ಸಲ್ಲಿಸುತ್ತಾರೆ. ಮಲೆನಾಡು ಭಾಗದ ಎಲ್ಲಾ ಕಡೆಗಳಲ್ಲೂ ಈ ಯೋಜನೆ ಇರುತ್ತದೆ. ಯೋಜನೆಯ ಪ್ರಕಾರ ಕಾಪರ್‌ ಸಲ್ಫೇಟ್‌ ಗೆ ಸಹಾಯಧನ ಲಭ್ಯವಾಗುತ್ತದೆ. ದ ಕ ಜಿಲ್ಲೆಯಲ್ಲಿನ ಕೃಷಿಕರು ಹಾಗೂ ಈ ಹಿಂದೆ ಬಂದ ಅರ್ಜಿಗಳ ಪ್ರಕಾರ ಸುಮಾರು ಒಂದು ಕೋಟಿ ರೂಪಾಯಿ ಸಹಾಯಧನದ ಅಗತ್ಯ ಇರುತ್ತದೆ. ಆದರೆ ಇಲ್ಲಿ ಸುಮಾರು 8 ರಿಂದ 10 ಲಕ್ಷದವರೆಗೆ ಮಾತ್ರವೇ ಸಹಾಯಧನ ಲಭ್ಯವಾಗುತ್ತದೆ. ಹೀಗಾಗಿ ಕೃಷಿಕರಿಗೆ ಲಭ್ಯವಾಗುವ ಸಹಾಯಧನ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅನೇಕ ಕೃಷಿಕರು ಈಗ ಅರ್ಜಿ ಸಲ್ಲಿಸುವುದೇ ಬಿಟ್ಟಿದ್ದಾರೆ. ಈ ಬಾರಿ ಕೊಳೆರೋಗ ವ್ಯಾಪಕ ಇದ್ದ ಕಾರಣ ಅರ್ಜಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಯೋಜನೆಯ ಪ್ರಕಾರ ಕಾಪರ್‌ ಸಲ್ಫೇಟ್‌ ಗೆ ಶೇ.75 ರಷ್ಟು ಸಹಾಯಧನ ನೀಡಲಾಗುತ್ತದೆ. ಯೋಜನೆಯಡಿ ಒಬ್ಬ ರೈತನಿಗೆ 1 ಹೆಕ್ಟೇರ್‌ವರೆಗೆ 10 ಕೆಜಿ ಕಾಪರ್‌ ಸಲ್ಫೇಟ್‌  ಸಹಾಯಧನ ದೊರೆಯಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಅದೇ ಮಾದರಿಯ ಸಮಸ್ಯೆ ಆಗಿದೆ. ಸಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಕಾಪರ್‌ ಸಲ್ಫೇಟ್‌ ಗೆ ಸಹಾಯಧನ ನೀಡಲಾಗುತ್ತಿತ್ತು. ಅನುದಾನ ಕಳೆದ ಎರಡು ವರ್ಷಗಳಿಂದ ಬಿಡುಗಡೆ ಆಗಿಲ್ಲ. ಈ ವರ್ಷ ಉ ಕ ಜಿಲ್ಲೆಗೆ 17.25 ಲಕ್ಷ ಮಂಜೂರಾಗಿದೆ. ಆದರೆ, ಇಲ್ಲಿ 500 ಕ್ಕೂ ಹೆಚ್ಚು ಅರ್ಜಿಗಳು ಈಗಾಗಲೇ ಬಂದಿವೆ.  ಈ ಅನುದಾನ ಸಾಕಾಗುವುದಿಲ್ಲ. ಮೊದಲು ಅರ್ಜಿ ನೀಡಿದ ಒಂದಷ್ಟು ರೈತರಿಗೆ ಮಾತ್ರ ಸೌಲಭ್ಯ ದೊರೆಯುವ ಸಾಧ್ಯತೆ ಇದೆ.

ಅಡಿಕೆಗೆ ಉತ್ತಮ ಧಾರಣೆ ಇದ್ದ ಕಾರಣದಿಂದ ಕಳೆದ 3 – 4 ವರ್ಷಗಳಿಂದ ಅಡಿಕೆ ಬೆಳೆಗಾರರು ಈ ಸಹಾಯಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಧ್ಯಮ ವರ್ಗ ಹಾಗೂ ಅತೀ ಸಣ್ಣ ರೈತರಿಗೆ ಇಂತಹ ಸಹಾಯಧನಗಳು ನೆರೆವಾಗುತ್ತವೆ. ಆದರೆ ಕೃಷಿಕರು ಧ್ವನಿ ಎತ್ತದ ಕಾರಣ ಸಹಾಯಧನದ ಬಗ್ಗೆ ಯಾವುದೇ ಇಲಾಖೆಗಳೂ, ಮೌನವಾಗಿವೆ. ಈ ಬಾರಿ ಕೊಳೆರೋಗದ ಕಾರಣದಿಂದ 2018 ರಲ್ಲಿ ಆದ ಅಡಿಕೆ ನಷ್ಟದ ಮಾದರಿಯಲ್ಲೇ ಅಡಿಕೆ ಕೊಳೆರೋಗದಿಂದ ನಾಶವಾಗಿದೆ. ಹೀಗಾಗಿ ಈಗ ಸಹಾಯಧನಗಳ ನೆನಪಾಗಿವೆ. ಹೀಗಾಗಿ ಚರ್ಚೆಯಾಗಿದೆ. ಅಡಿಕೆ ನಾಡಿನ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಗಮನಹರಿಸಲು ಕೃಷಿಕರು ಒತ್ತಾಯಿಸಿದ್ದಾರೆ.

Advertisement
ಭಾರೀ ಮಳೆಯ ಕಾರಣದಿಂದ ಈ ಬಾರಿ ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ. ಅಡಿಕೆ ಕೃಷಿಕರಿಗೆ ಇರುವ ಸಹಾಯಧನಗಳು ಅನೇಕ ಕೃಷಿಕರಿಗೆ ನೆರವಾಗುತ್ತವೆ. ಹೀಗಾಗಿ ಕಾಪರ್‌ ಸಲ್ಫೇಟ್‌ ಬೆಲೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಅಡಿಕೆ ಧಾರಣೆ ಉತ್ತಮವಿದ್ದರೂ ಕೊಳೆರೋಗದಿಂದ ನಷ್ಟವಾದ ಹಿನ್ನೆಲೆಯಲ್ಲಿ ಕೃಷಿಕರಿಗೆ ಸಂಕಷ್ಟವಾಗಿದೆ. ಇದಕ್ಕಾಗಿ ಸೂಕ್ತವಾದ ಸಹಾಯಧನದ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ ಹೇಳಿದ್ದಾರೆ.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ
ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ
July 15, 2025
7:26 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ
July 14, 2025
11:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group