ಅಡಿಕೆ ಕೊಳೆರೋಗ ಪ್ರತೀ ವರ್ಷದ ಸಮಸ್ಯೆ. ಅಡಿಕೆ ಬೆಳೆಯುವ ಮಲೆನಾಡಿನಲ್ಲಿ ಕೊಳೆರೋಗ ಮಾಮೂಲಿ. ಆದರೆ ಬೆಳೆಗಾರರು ಮಳೆಗಾಲದ ಅವಧಿಯಲ್ಲಿ ಸಾಹಸದಿಂದ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡುತ್ತಾರೆ. ಹೇಗೋ ನಿಯಂತ್ರಣ ಮಾಡುತ್ತಾರೆ. ಈ ಬಾರಿ ವ್ಯಾಪಕ ಮಳೆಯಾಯಿತು, ಕೊಳೆರೋಗ ವ್ಯಾಪಕವಾಯಿತು. ಇದೀಗ ಕೊಳೆರೋಗ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೋ ದ್ರಾವಣದ ಅಗತ್ಯ ವಸ್ತು ಕಾಪರ್ ಸಲ್ಫೇಟ್ ಸಹಾಯಧನದ ಬಗ್ಗೆ ಚರ್ಚೆ ಆರಂಭವಾಗಿದೆ. ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ, ಅಡಿಕೆ ನಾಡಿನ ಜನಪ್ರತಿನಿಧಿಗಳು, ಸರ್ಕಾರ ಮೌನವಾಗಿದೆ.
ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ಸಿಂಪಡಣೆ ಮಾಡಿರುವ ಕೃಷಿಕರು ಮಳೆಗಾಲ ಮಧ್ಯ ಅವಧಿಯಲ್ಲಿ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಲು ಆರಂಭ ಮಾಡುತ್ತಾರೆ. ಇಲಾಖೆಯು ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗ ನಿಯಂತ್ರಣ ಅಡಿಯಲ್ಲಿ ಸಹಾಯಧನ ನೀಡುವ ಯೋಜನೆಯನ್ನು ಪ್ರಕಟಿಸಿದ ನಂತರ ಅರ್ಜಿ ಸಲ್ಲಿಸಲು ಆರಂಭವಾಗುತ್ತದೆ. ಪ್ರತೀ ವರ್ಷ ಈ ಯೋಜನೆ ಪ್ರಕಟವಾದ ಕೂಡಲೇ ಕೃಷಿಕರು ಅರ್ಜಿ ಸಲ್ಲಿಸುತ್ತಾರೆ. ಮಲೆನಾಡು ಭಾಗದ ಎಲ್ಲಾ ಕಡೆಗಳಲ್ಲೂ ಈ ಯೋಜನೆ ಇರುತ್ತದೆ. ಯೋಜನೆಯ ಪ್ರಕಾರ ಕಾಪರ್ ಸಲ್ಫೇಟ್ ಗೆ ಸಹಾಯಧನ ಲಭ್ಯವಾಗುತ್ತದೆ. ದ ಕ ಜಿಲ್ಲೆಯಲ್ಲಿನ ಕೃಷಿಕರು ಹಾಗೂ ಈ ಹಿಂದೆ ಬಂದ ಅರ್ಜಿಗಳ ಪ್ರಕಾರ ಸುಮಾರು ಒಂದು ಕೋಟಿ ರೂಪಾಯಿ ಸಹಾಯಧನದ ಅಗತ್ಯ ಇರುತ್ತದೆ. ಆದರೆ ಇಲ್ಲಿ ಸುಮಾರು 8 ರಿಂದ 10 ಲಕ್ಷದವರೆಗೆ ಮಾತ್ರವೇ ಸಹಾಯಧನ ಲಭ್ಯವಾಗುತ್ತದೆ. ಹೀಗಾಗಿ ಕೃಷಿಕರಿಗೆ ಲಭ್ಯವಾಗುವ ಸಹಾಯಧನ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅನೇಕ ಕೃಷಿಕರು ಈಗ ಅರ್ಜಿ ಸಲ್ಲಿಸುವುದೇ ಬಿಟ್ಟಿದ್ದಾರೆ. ಈ ಬಾರಿ ಕೊಳೆರೋಗ ವ್ಯಾಪಕ ಇದ್ದ ಕಾರಣ ಅರ್ಜಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಯೋಜನೆಯ ಪ್ರಕಾರ ಕಾಪರ್ ಸಲ್ಫೇಟ್ ಗೆ ಶೇ.75 ರಷ್ಟು ಸಹಾಯಧನ ನೀಡಲಾಗುತ್ತದೆ. ಯೋಜನೆಯಡಿ ಒಬ್ಬ ರೈತನಿಗೆ 1 ಹೆಕ್ಟೇರ್‌ವರೆಗೆ 10 ಕೆಜಿ ಕಾಪರ್ ಸಲ್ಫೇಟ್ ಸಹಾಯಧನ ದೊರೆಯಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಅದೇ ಮಾದರಿಯ ಸಮಸ್ಯೆ ಆಗಿದೆ. ಸಮಗ್ರ ತೋಟಗಾರಿಕಾ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಕಾಪರ್ ಸಲ್ಫೇಟ್ ಗೆ ಸಹಾಯಧನ ನೀಡಲಾಗುತ್ತಿತ್ತು. ಅನುದಾನ ಕಳೆದ ಎರಡು ವರ್ಷಗಳಿಂದ ಬಿಡುಗಡೆ ಆಗಿಲ್ಲ. ಈ ವರ್ಷ ಉ ಕ ಜಿಲ್ಲೆಗೆ 17.25 ಲಕ್ಷ ಮಂಜೂರಾಗಿದೆ. ಆದರೆ, ಇಲ್ಲಿ 500 ಕ್ಕೂ ಹೆಚ್ಚು ಅರ್ಜಿಗಳು ಈಗಾಗಲೇ ಬಂದಿವೆ. ಈ ಅನುದಾನ ಸಾಕಾಗುವುದಿಲ್ಲ. ಮೊದಲು ಅರ್ಜಿ ನೀಡಿದ ಒಂದಷ್ಟು ರೈತರಿಗೆ ಮಾತ್ರ ಸೌಲಭ್ಯ ದೊರೆಯುವ ಸಾಧ್ಯತೆ ಇದೆ.
ಅಡಿಕೆಗೆ ಉತ್ತಮ ಧಾರಣೆ ಇದ್ದ ಕಾರಣದಿಂದ ಕಳೆದ 3 – 4 ವರ್ಷಗಳಿಂದ ಅಡಿಕೆ ಬೆಳೆಗಾರರು ಈ ಸಹಾಯಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಧ್ಯಮ ವರ್ಗ ಹಾಗೂ ಅತೀ ಸಣ್ಣ ರೈತರಿಗೆ ಇಂತಹ ಸಹಾಯಧನಗಳು ನೆರೆವಾಗುತ್ತವೆ. ಆದರೆ ಕೃಷಿಕರು ಧ್ವನಿ ಎತ್ತದ ಕಾರಣ ಸಹಾಯಧನದ ಬಗ್ಗೆ ಯಾವುದೇ ಇಲಾಖೆಗಳೂ, ಮೌನವಾಗಿವೆ. ಈ ಬಾರಿ ಕೊಳೆರೋಗದ ಕಾರಣದಿಂದ 2018 ರಲ್ಲಿ ಆದ ಅಡಿಕೆ ನಷ್ಟದ ಮಾದರಿಯಲ್ಲೇ ಅಡಿಕೆ ಕೊಳೆರೋಗದಿಂದ ನಾಶವಾಗಿದೆ. ಹೀಗಾಗಿ ಈಗ ಸಹಾಯಧನಗಳ ನೆನಪಾಗಿವೆ. ಹೀಗಾಗಿ ಚರ್ಚೆಯಾಗಿದೆ. ಅಡಿಕೆ ನಾಡಿನ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಗಮನಹರಿಸಲು ಕೃಷಿಕರು ಒತ್ತಾಯಿಸಿದ್ದಾರೆ.
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…