ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಕೊರೋನಾ ಬಗ್ಗೆ ತೀರಾ ಎಚ್ಚರ ಅಗತ್ಯವಿದೆ. ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಮಾಸ್ಕ್ ಕಡ್ಡಾಯ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಗೊಳ್ಳಬೇಕು. ಸಮಾರಂಭಗಳಲ್ಲಿ ಜನಸಂದಣಿ ಕಡಿಮೆಬೇಕು. ಯಾವುದೇ ಲಾಕ್ಡೌನ್ ಇರುವುದಿಲ್ಲ ಎಂದು ಹೇಳಿದ್ದಾರೆ.
Advertisement
ಈಗ ಮತ್ತೆ ಕೊರೋನಾ ಬಗ್ಗೆ ಭಯ ಸೃಷ್ಠಿಸುವುದು ಬೇಡ, ಲಸಿಕೆ ಪಡೆಯಲು ಸಿದ್ಧವಿದೆ, ಕೊರತೆ ಆಗದಂತೆ ಪೂರೈಸಲು ಸರಕಾರ ಸಿದ್ಧವಿದೆ ಎಂದ ಯಡಿಯೂರಪ್ಪ, ಕೊರೋನಾ ಪರೀಕ್ಷೆ ಹೆಚ್ಚಳ ಹಾಗೂ 42 ಆಸ್ಪತ್ರೆಯಲ್ಲಿ ಚಿಕಿತ್ಸೆ, ಕಡ್ಡಾಯವಾಗಿ ಮಾಸ್ಕ್ ಬಳಕೆ, ಪ್ರಕರಣ ಹೆಚ್ಚಿರುವ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚೆಸಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ ಎಂದು ಬಿಎಸ್ವೈ ಹೇಳಿದರು. ಕಲ್ಬುರ್ಗಿ, ಬೆಂಗಳೂರಿಗೆ ಹೆಚ್ಚು ಒತ್ತು ನೀಡಲಾಗಿದೆ. ಮೂರನೇ ಹಂತದ ಪಟ್ಟಣಗಳಿಗೂ ಟೆಸ್ಟ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ವ್ಯಾಕ್ಸಿನ್ ವೇಸ್ಟ್ ಆಗದಂತೆ ಕ್ರಮ ಕೈಗೊಳ್ಳುವುದು. ಹಳೆಯದನ್ನ ಖಾಲಿ ಮಾಡಿ, ಹೊಸತನ್ನು ಬಳಸಿಕೊಳ್ಳುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮಾಸ್ಕ್ ಕಡ್ಡಾಯ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಗೊಳ್ಳಬೇಕು. ಸಮಾರಂಭಗಳಲ್ಲಿ ಜನಸಂದಣಿ ಕಡಿಮೆಬೇಕು. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಿನಿಮಾ, ಹೋಟೆಲ್ ಮತ್ತೆಲ್ಲಾದ್ರೂ ಮಾಸ್ಕ್ ಬಳಕೆ ಕಡ್ಡಾಯ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement