ಕೊರೋನಾ ಅಬ್ಬರ | ಸಾರ್ವಜನಿಕ ಸಮಾರಂಭ, ಆಚರಣೆಗಳಿಗೆ ಪಾಸ್ ಕಡ್ಡಾಯ | ಕೋವಿಡ್‌ ನಿಯಮ ಕಡ್ಡಾಯಕ್ಕೆ ಜಿಲ್ಲಾಧಿಕಾರಿ ಆದೇಶ |

April 19, 2021
10:53 PM

ಕೊರೋನಾ ಅಬ್ಬರ ಹೆಚ್ಚುತ್ತಿದೆ. ನಗರ ಪ್ರದೇಶ ಮಾತ್ರವಲ್ಲ ಹಳ್ಳಿಗಳಲ್ಲೂ ಕೊರೋನಾ ಭಯ ಹೆಚ್ಚಿದೆ. ಇದಕ್ಕಾಗಿ ಎಲ್ಲೆಡೆಯೂ ಎಚ್ಚರ ಅಗತ್ಯವಾಗಿದೆ. ಈ ಕಾರಣದಿಂದ ದ ಕ ಜಿಲ್ಲಾಧಿಕಾರಿಗಳಿ ಡಾ.ರಾಜೇಂದ್ರ ಕೆ ವಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Advertisement
Advertisement

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ಮನಗಂಡು ಸಾರ್ವಜನಿಕ ಸಮಾರಂಭ ಆಚರಣೆಗಳು, ಕಾರ್ಯಕ್ರಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನಿರ್ದೇಶಿಸಿದ್ದಾರೆ.

Advertisement

ಜಿಲ್ಲೆಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನೋರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮದುವೆ ಸಮಾರಂಭಗಳು – ತೆರೆದ ಪ್ರದೇಶಗಳಲ್ಲಿ 200 ಜನರು ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್‍ಗಳು ಇತ್ಯಾದಿ ಮುಚ್ಚಿದ ಸ್ಥಳಗಳಲ್ಲಿ 100 ಜನರು ಪಾಲ್ಗೊಳ್ಳಬಹುದು. ಜನ್ಮ ದಿನ ಹಾಗೂ ಇತರೆ ಆಚರಣೆಗಳು ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್‍ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ನಿಧನ ಅಥವಾ ಶವಸಂಸ್ಕಾರ ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್‍ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ಅಂತ್ಯ ಕ್ರಿಯೆಗೆ 25 ಜನರು ಹಾಗೂ ಇತರೆ ಸಮಾರಂಭಗಳಿಗೆ ಹಾಲ್‍ನ ವಿಸ್ತೀರ್ಣಕ್ಕೆ ಅನುಗುಣವಾಗಿ 25 ಜನರು ಮತ್ತು ರಾಜಕೀಯ ಆಚರಣೆ ಹಾಗೂ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನರು ಪಾಲ್ಗೊಳ್ಳಬಹುದು ಹಾಗೂ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ.

ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು,  ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕ ಸಮಾರಂಭ ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಪಾಸ್‍ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ.

Advertisement

ಜನರು ಕಡ್ಡಾಯವಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ಹಾಲ್‍ಗಳು ಮತ್ತು ಆಚರಣೆಗಾಗಿ ಜನಸೇರುವ ಇತರೆ ಪ್ರದೇಶಗಳ ಉಸ್ತುವಾರಿ ಹೊಂದಿರುವವರು ಕಡ್ಡಾಯವಾಗಿ ಸ್ಯಾನಿಟೈಸೇಷನ್ ಕ್ರಮಗಳನ್ನು ಅನುಸರಿಸಬೇಕು.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವರುಣ ಕೃಪೆ ತೀರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!
May 19, 2024
2:16 PM
by: The Rural Mirror ಸುದ್ದಿಜಾಲ
Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |
May 19, 2024
12:22 PM
by: ಸಾಯಿಶೇಖರ್ ಕರಿಕಳ
ಭಾರತವು 5.3 ಮಿಲಿಯನ್‌ ಮರಗಳನ್ನು ಕಳೆದುಕೊಂಡದ್ದು ಹೇಗೆ..?
May 19, 2024
12:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror