ಕೊರೋನಾ ಭಯಾನಕ ಸಂಗತಿಗಳ ನಡುವೆ ಇದೀಗ ಪಾಸಿಟಿವ್ ಸುದ್ದಿಯೊಂದು ಕೇಳಿಬಂದಿದೆ. ನವ ಮಂಗಳೂರು ಬಂದರಿಗೆ ಕುವೈಟ್ ನಿಂದ 40 ಮೆಟ್ರಿಕ್ ಟವ್ ಆಮ್ಲಜನಕ ಬಂದಿದೆ. ‘ಐ.ಎನ್.ಎಸ್. ಕೊಲ್ಕತ್ತಾ’ ಯುದ್ದ ನೌಕೆ ಮೂಲಕ ಆಗಮಿಸಿದ ISO ಟ್ಯಾಂಕ್ ಗಳಲ್ಲಿ 5 ಟನ್ ಆಕ್ಸಿಜನ್ ಸಿಲಿಂಡರ್ ಮತ್ತು 4 ಹೈ ಫ್ಲೋ ಆಕ್ಸಿಜನ್ ಕಂಟೈನರ್ ಲಭ್ಯವಾಗಿದೆ. ನವಮಂಗಳೂರು ಬಂದರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆಕ್ಸಿಜನ್ ಬರ ಮಾಡಿಕೊಂಡರು.
ಕಳೆದ ಕೆಲ ದಿನಗಳಿಂದ ದ ಕ ಜಿಲ್ಲೆಯಲ್ಲಿ ಸೇರಿದಂತೆ ಉಡುಪಿ ಮೊದಲಾದ ಕಡೆಗಳಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹಾಗೂ ಆಸ್ಪತ್ರೆಗೆ ದಾಖಲಾಗಿ ಆಮ್ಲಜನಕ ಅವಶ್ಯವಾಗಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕಾಗಿ ವಿವಿಧ ಸಂಘಸಂಸ್ಥೆಗಳು, ರಾಜ್ಯ ಸರಕಾರ ವಿಶೇಷ ಪ್ರಯತ್ನ ಮಾಡಿತ್ತು.
ಎರಡನೇ ಸಮುದ್ರ ಸೇತು ಕಾರ್ಯಾಚರಣೆಯಲ್ಲಿ 40 ಮೆ.ಟನ್ ಆಕ್ಸಿಜೆನ್ ಸೇರಿದಂತೆ ಮತ್ತಿತರ ಪರಿಕರಗಳನ್ನು ಭಾರತೀಯ ನೌಕಾಪಡೆ ಒತ್ತು ತಂದಿತ್ತು.
40 ಮೆ.ಟನ್ ಲಿಕ್ವಿಡ್‍ಆಕ್ಸಿಜೆನ್‍ನಲ್ಲಿ 20 ಮೆ. ಟನ್ ದಕ್ಷಿಣ ಕನ್ನಡ ಜಿಲ್ಲೆಗೆ, 10 ಮೆ. ಟನ್‍ಉಡುಪಿ ಜಿಲ್ಲೆಗೆ ಹಾಗೂ ಉಳಿದ 10 ಮೆ. ಟನ್ ಅನ್ನು ಕಾರವಾರ ಜಿಲ್ಲೆಗಳ ತುರ್ತುಸೇವೆಗೆ ಬಳಸಲಾಗುತ್ತಿದೆ.
40 ಮೆ.ಟನ್ ಲಿಕ್ವಿಡ್‍ಆಕ್ಸಿಜೆನ್‍ನಲ್ಲಿ 20 ಮೆ. ಟನ್ ದಕ್ಷಿಣ ಕನ್ನಡ ಜಿಲ್ಲೆಗೆ, 10 ಮೆ. ಟನ್‍ಉಡುಪಿ ಜಿಲ್ಲೆಗೆ ಹಾಗೂ ಉಳಿದ 10 ಮೆ. ಟನ್ ಅನ್ನು ಕಾರವಾರ ಜಿಲ್ಲೆಗಳ ತುರ್ತುಸೇವೆಗೆ ಬಳಸಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel