ಪಕ್ಕದ ರಾಜ್ಯ ಕೇರಳದಲ್ಲಿ ಮತ್ತೆ ಕೊರೊನಾ ಭೀತಿ | ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ |

December 16, 2023
3:43 PM
ಮತ್ತೆ ಕೊರೋನಾ ಭೀತಿ ಎದುರಾಗಿದೆ. ಕೋವಿಡ್ ಉಪತಳಿ ಜೆಎನ್.1 ಪತ್ತೆಯಾಗಿದೆ. ಹೀಗಾಗಿ ಎಚ್ಚರಿಕೆ ಅಧಿಕವಾಗಿದೆ.

ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದ ಕೊರೋನಾ(Corona) ಹೆಸರು ಕೇಳಿದ್ರೆ ಕರಾಳ ದಿನಗಳು ನೆನಪಿಗೆ ಬರುತ್ತವೆ. ಕೊರೋನಾ ಕಡಿಮೆ ಆದ್ರೂ ಆಗಾಗ ಅಲ್ಲಿ ಬಂತು, ಇಲ್ಲಿ ಬಂತು, ಹೊಸ ರೂಪದಲ್ಲಿ ಬಂತು ಅನ್ನೋ ಮಾತುಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಭಾರತದಲ್ಲಿ(India) ಕೋವಿಡ್-‌19 ಭೀತಿ ಮತ್ತೆ ಶುರುವಾಗಿದೆ. ಕೇರಳದ (Kerala) ಮಹಿಳೆಯೊಬ್ಬರಲ್ಲಿ(Woman) ಕೋವಿಡ್-‌19 ಉಪತಳಿ (Covid Subvariant) ಜೆಎನ್‌.1 (JN.1) ಪತ್ತೆಯಾಗಿರುವುದು ದೃಢಪಟ್ಟಿದೆ.

Advertisement

ನವೆಂಬರ್ 18 ರಂದು 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ influenza-like illnesses (ILI- ಇನ್ಫ್ಲುಯೆನ್ಝಾ ತರಹದ ಕಾಯಿಲೆ) ಸೌಮ್ಯ ಲಕ್ಷಣ ಕಂಡುಬಂದಿದೆ. ಕೋವಿಡ್-19 ನಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ವೈರಲ್‌ ಉಪತಳಿ ಜೆಎನ್‌.1 ವಿಶ್ವದಲ್ಲೇ ಮೊದಲ ಪ್ರಕರಣ ಅಮೆರಿಕದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳಲ್ಲಿ 90% ಕ್ಕಿಂತ ಹೆಚ್ಚು ಪ್ರಕರಣಗಳನ್ನು ಸೌಮ್ಯ ಎಂದು ವರ್ಗೀಕರಿಸಲಾಗಿದೆ. ವ್ಯಕ್ತಿಗಳು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಮೂಲಗಳು ಸೂಚಿಸಿವೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರೊಬ್ಬರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪತಳಿ ಪತ್ತೆಯಾಗಿತ್ತು. ಅವರು ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ತಿರುಚಿರಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಈ ರೂಪಾಂತರಕ್ಕೆ ಸಂಬಂಧಿಸಿರುವ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ.  JN.1 ಉಪತಳಿಯು ಹಿಂದಿನ ಉಪತಳಿಗಳ ಲಕ್ಷಣವನ್ನೇ ಹೊಂದಿದೆ. JN.1 ಸಬ್‌ವೇರಿಯಂಟ್‌ನ ಬಹುಪಾಲು ರೂಪಾಂತರಗಳು ಸ್ಪೈಕ್ ಪ್ರೋಟೀನ್‌ನಲ್ಲಿ ಕೇಂದ್ರೀಕೃತವಾಗಿರುತ್ತವೆ. ಇದು ಸೋಂಕನ್ನು ತೀವ್ರಗೊಳಿಸುತ್ತದೆ.

The fear of Covid-19 has started again in India. It has been confirmed that Covid-19 subvariant JN.1 has been detected in a Kerala woman. On November 18, a throat sample of a 79-year-old woman was subjected to RT-PCR testing. He was found to be infected with a new subspecies. Mild symptoms of influenza-like illnesses (ILI) were found among them.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group