ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 48,296 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ದ ಕ ಜಿಲ್ಲೆಯಲ್ಲಿ 1,205 ಕೊರೋನಾ ಪ್ರಕರಣ ಪತ್ತೆಯಾಗುವ ಮೂಲಕ ರಾಜ್ಯದ ಅಧಿಕ ಕೊರೋನಾ ಪಾಸಿಟಿವ್ ಜಿಲ್ಲೆಗಳ ಪಟ್ಟಿಯಲ್ಲಿದೆ.
ಇದುವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,23,142ಕ್ಕೆ ಏರಿದ್ದು, 3,82,690 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 217 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ಇಂದಿನವರೆಗೆ ಮೃತರ ಒಟ್ಟು ಸಂಖ್ಯೆ 15,523ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಬೆಂಗಳೂರಿನಲ್ಲಿ 26,756 ಪ್ರಕರಣ, ಮೈಸೂರಿನಲ್ಲಿ 3,500 ಹೊಸ ಪ್ರಕರಣಗಳು, ಬಳ್ಳಾರಿಯಲ್ಲಿ 1,282, ಕಲಬುರ್ಗಿಯಲ್ಲಿ 1,250 ಮತ್ತು ದಕ್ಷಿಣ ಕನ್ನಡದಲ್ಲಿ 1,205 ಹೊಸ ಪ್ರಕರಣಗಳು ಪತ್ತೆಯಾಗಿವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel