ಕೊರೋನಾ ಲಸಿಕೆ ವ್ಯವಸ್ಥೆಯ ಅನಾವರಣ | ಸುಳ್ಯದಲ್ಲಿ ಆಮ್‌ ಆದ್ಮಿ ಪಕ್ಷದಿಂದ ಲೈವ್‌ ವಿಡಿಯೋ……! |

July 25, 2021
12:06 PM
ಕೊರೋನಾ ಲಸಿಕೆ ಪಡೆಯಲು ಜನಸಾಮಾನ್ಯರು ಪರದಾಟ ನಡೆಸುತ್ತಿದ್ದಾರೆಯೇ ? ಎರಡನೇ ಡೋಸ್‌ ಎಲ್ಲಿ ಪಡೆಯಬೇಕು ? ಹೇಗೆ ಪಡೆಯಬೇಕು ? ಲಸಿಕೆ ಪಡೆಯಲು ಟೋಕನ್‌ ಬೇಕು, ಇದಕ್ಕೆ ಪ್ರಭಾವ ಬೇಕಾ ? ಪ್ರಭಾವ ಇದ್ದರೆ ಲಸಿಕೆಯೂ ಶೀಘ್ರದಲ್ಲೇ ಲಭ್ಯವೇ ?  ಜನಸಾಮಾನ್ಯನೊಬ್ಬ ಎಷ್ಟು ಬಾರಿ ಆಸ್ಪತ್ರೆಗೆ ಅಲೆಯಬಹುದು ? ಜನಸಾಮಾನ್ಯರ ಪರವಾಗಿ ಮಾತನಾಡುವವರು  ಯಾರು ? ಆಸ್ಪತ್ರೆಯಲ್ಲಿ ಲಭ್ಯವಿರುವ ಲಸಿಕೆಗಳ ಮಾಹಿತಿ ನೀಡುವವರು ಯಾರು ? ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಸುಳ್ಯದಲ್ಲಿ  ಆಮ್‌ ಆದ್ಮಿ ಪಕ್ಷದ ಅಶೋಕ್‌ ಎಡಮಲೆ ಅವರು ನಡೆಸಿದ ಲೈವ್‌ ವಿಡಿಯೋದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅದರ ವರದಿ ಇಲ್ಲಿದೆ..

Advertisement
Advertisement
Advertisement

ದೇಶದಾದ್ಯಂತ ಕೊರೋನಾ ಮುಂಜಾಗ್ರತಾ ಕ್ರಮಗಳ ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಅದರೆ ಈಚೆಗೆ ಕೊರೋನಾ ಲಸಿಕೆಯಲ್ಲೂ ಸಾಕಷ್ಟು ಸಮಸ್ಯೆಗಳು, ಗೊಂದಲಗಳು ಕಂಡುಬರುತ್ತಿವೆ. ಆದರೆ ಯಾರೊಬ್ಬರೂ ಈ ಬಗ್ಗೆ ದ್ವನಿ ಎತ್ತುತ್ತಿಲ್ಲ. ಒಂದು ಲಸಿಕೆಗೆ ಹಲವು ಬಾರಿ ಆರೋಗ್ಯ ಕೇಂದ್ರಗಳಿಗೆ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಟೋಕನ್‌ ವ್ಯವಸ್ಥೆಯಲ್ಲೂ ಗೊಂದಲಗಳು ಕಂಡುಬರುತ್ತಿರುವ ಬಗ್ಗೆ ಆರೋಪಗಳು ಇದೆ. ಈ ಬಗ್ಗೆ ಸುಳ್ಯದ ಆಮ್‌ ಆದ್ಮಿ ಪಕ್ಷವು ನಡೆಸಿದ ಲೈವ್‌ ವಿಡಿಯೋದಲ್ಲಿ ಬಹಿರಂಗಗೊಂಡಿದೆ.

Advertisement

ಕೊರೋನಾ ಅಲೆ ಇನ್ನೂ ಕಡಿಮೆಯಾಗಿಲ್ಲ. ಎರಡನೇ ಅಲೆಯ ಬಳಿಕ ಇದೀಗ ಮೂರನೇ ಕೊರೋನಾ ಅಲೆ ಹರಡುವ ಬಗ್ಗೆ ಆರೋಗ್ಯ ಇಲಾಖೆ ಹೇಳುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಸಿಕಾ ಕಾರ್ಯಕ್ರಮಕ್ಕೆ ವೇಗವಾಗಿ ನಡೆಯುತ್ತಿದೆ. ಎಷ್ಟು ಲಸಿಕೆ ಲಭ್ಯವಿದೆ ಎನ್ನುವುದರ ಮಾಹಿತಿಯಿಂದ ಪಡೆದು ಎಲ್ಲವೂ ಪಾರದರ್ಶಕವಾಗಿರಬೇಕು ಮಾತ್ರವಲ್ಲ ಯಾರಿಗೆ ಎಲ್ಲಿ ಲಸಿಕೆ ಎನ್ನುವುದೂ ಸ್ಪಷ್ಟವಾಗಿ ತಿಳಿಯಬೇಕು. ಇಲ್ಲದೇ ಇದ್ದರೆ ಕೊರೋನಾ ಭಯದ ನಡುವೆ ಆಗಾಗ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಾಗಿ ವೃದ್ದರು, ಹಿರಿಯರು ತೆರಳಬೇಕಾದ ಸ್ಥಿತಿ ಬರುತ್ತಿದೆ. ಹೀಗಾಗಿ ಇಲಾಖೆಗಳ ಜೊತೆ ಸ್ವಯಂ ಸೇವಾ ಸಂಘಟನೆಗಳು, ರಾಜಕೀಯ ಪಕ್ಷಗಳು ಕೈಜೋಡಿಸುತ್ತಿದೆ. ಈಗ ಇಲ್ಲಿ ಗೊಂದಲಗಳು ಹೆಚ್ಚಾಗುತ್ತಿದೆ. ಅನೇಕ ಸಮಯಗಳಿಂದ ಈ ಗೊಂದಲಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಿತ್ತು, ಇದೀಗ ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಅಶೋಕ್‌ ಎಡಮಲೆ ಅವರು ಸುಳ್ಯದ ವಿವಿದೆಡೆ ನಡೆಸಿದ ಲೈವ್‌ ವಿಡಿಯೋ ಮೂಲಕ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಸುಳ್ಯದಲ್ಲಿ  ಕೆಲವು ಸಮಯಗಳ ಹಿಂದೆ ಕೊರೋನಾ ಲಸಿಕೆ ವಿಚಾರದಲ್ಲಿ  ಚರ್ಚೆಯಾಗಿತ್ತು. ಎರಡು ಬಾರಿ ಇಂತಹ ಚರ್ಚೆ ನಡೆದಿತ್ತು. ಲಸಿಕೆ ವಿತರಣೆಗೆ ಟೋಕನ್‌ ನೀಡುವ ವ್ಯವಸ್ಥೆಯಲ್ಲಿ  ಲೋಪವಿದೆ ಎಂದು ಆರೋಪ ಇತ್ತು. ಒಂದು ಪಕ್ಷದ ಕಾರ್ಯಕರ್ತರ ಮೂಲಕ ಈ ಟೋಕನ್‌ ವಿತರಣೆಯಾಗುತ್ತಿದೆ, ಹೀಗಾಗಿ ತಮಗೆ ಬೇಕಾದವರಿಗೆ ಟೋಕನ್‌ ನೀಡಲಾಗುತ್ತಿದೆ ಎನ್ನುವುದು  ಆರೋಪದ ಹುರುಳಾಗಿತ್ತು. ಚರ್ಚೆಯಾಗಿ ಎಲ್ಲರೂ ಮೌನ ವಹಿಸಿದ್ದರು.ಹಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಜನರೂ ಮೌನ ವಹಿಸಿದ್ದರು.

Advertisement

ಇದೀಗ ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಅಶೋಕ್‌ ಎಡಮಲೆ ಅವರು ನಡೆಸಿರುವ ವಿಡಿಯೋ ಲೈವ್‌ ನಲ್ಲಿ ಮತ್ತೆ ಗಮನಸೆಳೆದಿದ್ದಾರೆ. ಇದರ ಪ್ರಕಾರ ಲಸಿಕೆ ನೀಡಲು ಟೋಕನ್‌ ವ್ಯವಸ್ಥೆ ಸರಿ ಇಲ್ಲ, ಎಲ್ಲಿ ಯಾರಿಗೆ ಲಸಿಕೆ ಎನ್ನುವುದೂ ಮಾಹಿತಿ ಇಲ್ಲ. ಟೋಕನ್‌ ನೀಡಲು ಒಂದು ಪಕ್ಷದ ಕಾರ್ಯಕರ್ತರು ನಿಂತಿರುವುದು ಕಂಡುಬಂದಿದೆ. ಸುಳ್ಯದ ವ್ಯಕ್ತಿಯೊಬ್ಬರು ತಮ್ಮ ಮನೆಯವರೊಂದಿಗೆ ಲಸಿಕೆಗೆ ಆಗಮಿಸಿದ್ದು ಅವರು ಟೋಕನ್‌ ಗಾಗಿ ಪರದಾಟ ನಡೆಸಿದ್ದು ಹಾಗೂ ಪ್ರಭಾವ ಇದ್ದರೆ ಹಿಂಬದಿಯಿಂದ ಲಸಿಕೆಗೆ ಬಿಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಜನಸಾಮಾನ್ಯರು ಲಸಿಕೆಗಾಗಿ ಆಸ್ಪತ್ರೆಗೆ ಎಷ್ಟು ಬಾರಿ ಅಲೆಯಬೇಕು ಎಂಬುದು  ಸದ್ಯದ ಪ್ರಶ್ನೆಯಾಗಿದೆ. ಅನೇಕರು ಲಸಿಕಾ ಕೇಂದ್ರದ ಹೊರಭಾಗದಲ್ಲಿ ನಿಂತಿರುವುದು  ಕೆಲವರು ಲಸಿಕಾ ಕೇಂದ್ರದ ಒಳಭಾಗದಲ್ಲಿರುವುದು  ಕಂಡುಬಂದಿದೆ. ಇಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ಲಭ್ಯ ಇರುವ ಲಸಿಕೆಗಳ ವಿವರವನ್ನೂ ಪಕ್ಷಗಳ ಕಾರ್ಯಕರ್ತರೇ ಮಾಹಿತಿ ನೀಡುವುದು ಕೂಡಾ ಕಂಡುಬಂದಿದೆ.

ಈ ಹಿಂದೆ ಎಲ್ಲಾ ಲಸಿಕೆಗಳನ್ನೂ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕೇಂದ್ರ ಸಿಬಂದಿಗಳು ಅತ್ಯುತ್ತಮವಾಗಿ ನಡೆಸಿದ್ದಾರೆ, ಈಗ ಕೊರೋನಾ ಲಸಿಕೆಯ ಸಂದರ್ಭದಲ್ಲಿ  ಇದೇಕೆ ಇಂತಹ ವ್ಯವಸ್ಥೆ ಎನ್ನುವುದು  ಈಗಿರುವ ಪ್ರಶ್ನೆಯಾಗಿದೆ.  ಹೇಗಿದ್ದರೂ ಲಸಿಕೆಗಳು ದಿನಕ್ಕೆ 100  ರಿಂದ 200  ಒಳಗೆ ಮಾತ್ರವೇ ಪ್ರತೀ ಆರೋಗ್ಯ ಕೇಂದ್ರಕ್ಕೆ ಲಭ್ಯವಿರುವ ಹಿನ್ನೆಲೆಯಲ್ಲಿ  ಇದರ ವಿತರಣೆ ಹಾಗೂ ವ್ಯವಸ್ಥೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕೇಂದ್ರ ಸಿಬಂದಿಗಳಿಗೆ ಈಗ ಮಾಡಲು ಸಾಧ್ಯವಿದೆ. ಸಂಘಟನೆಗಳು ಹಾಗೂ ಪಕ್ಷಗಳು ಲಸಿಕೆಯ ಬಗ್ಗೆ ಮಾಹಿತಿ ನೀಡುವುದು ಮತ್ತು ಜಾಗೃತಿ ಕಾರ್ಯಕ್ರಮವನ್ನು ಮಾಡಬಹುದಾಗಿದೆ. ಅದರ ಹೊರತಾಗಿ ತಾವೇ ಟೋಕನ್‌ ನೀಡಲು ನಿಲ್ಲುವುದರ ಹಿಂದಿನ ಉದ್ದೇಶ ಏನೆಂಬುದು ಅರ್ಥವಾಗದ ಸಂಗತಿ ಎಂದು ಅಶೋಕ್‌ ಎಡಮಲೆ ಹೇಳುತ್ತಾರೆ.

Advertisement

ಈ ಹಿಂದೆ ಕೆಲವು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ  ಕೂಡಾ ನಾಗರಿಕರು ಲಸಿಕೆಗಾಗಿ ಬಂದಾಗ ಲಸಿಕೆ ಇಲ್ಲವೆಂದು ಹೇಳಿದ್ದು, ಬಳಿಕ ಬಂದವರಿಗೆ ಲಸಿಕೆ ನೀಡಿದ್ದು ಇತ್ಯಾದಿಗಳು ಚರ್ಚೆಯಾಗಿದೆ. ಮುಂದೆ ಹೀಗೆ ಆಗದಂತೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಅಶೋಕ್‌ ಎಡಮಲೆ ಹೇಳುತ್ತಾರೆ.

 

Advertisement

 

 

Advertisement

 

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಷೀಣವಾಗುತ್ತಿರುವ ದೇಶದ ಮೊದಲ ಹಾಗೂ ಗಟ್ಟಿ ಪಕ್ಷ ಕಾಂಗ್ರೆಸ್‌ : ಈ ಬಾರಿ ಅತಿ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ
April 18, 2024
2:25 PM
by: The Rural Mirror ಸುದ್ದಿಜಾಲ
Karnataka Weather | 18-04-2024 | ಹಲವು ಕಡೆ ಮಳೆಯ ಸೂಚನೆ ಇದೆ….,ಆದರೆ ಮಳೆಯಾಗುತ್ತಾ…? | ಹಾಗಾದರೆ ಮಳೆ ಯಾವಾಗ..?
April 18, 2024
11:03 AM
by: ಸಾಯಿಶೇಖರ್ ಕರಿಕಳ
ಮೇಘಾಲಯದಲ್ಲಿ ಚುನಾವಣೆಗೆ ಅಡಿಕೆ ಇಶ್ಯೂ | ಅಕ್ರಮ ಅಡಿಕೆ ಸಾಗಾಟದ ಮೌನದ ಬಗ್ಗೆ ಪ್ರಶ್ನಿಸಿದ ಅಡಿಕೆ ಬೆಳೆಗಾರರು |
April 18, 2024
10:45 AM
by: ದ ರೂರಲ್ ಮಿರರ್.ಕಾಂ
ದುಬೈ ಭಾರೀ ಮಳೆಗೆ ಕಾರಣ ಏನು…? | ನೀರಿಗಾಗಿ ನಡೆದ “ಮೋಡ ಬಿತ್ತನೆ” ಕಾರಣವೇ..? ತಾಪಮಾನ ಏರಿಕೆ ಕಾರಣವೇ..? | ಚಿಂತಿಸುತ್ತಿದ್ದಾರೆ ಹವಾಮಾನ ತಜ್ಞರು |
April 17, 2024
10:44 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror