ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ ವೈರಸ್‌ ಹಾವಳಿ | ಒಟ್ಟು 35 ಜೆಎನ್.1 ಪಾಸಿಟಿವ್ | ರಾಜಧಾನಿ ಬೆಂಗಳೂರಿನಲ್ಲಿ ಅಧಿಕ

December 26, 2023
12:49 PM

ಕೊರೊನಾ(Corona) ಹೊಸ ರೂಪಾಂತರಿಯಾದ ಜೆಎನ್.1 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಚಳಿ(Winter) ಆರಂಭವಾಗುತ್ತಿದ್ದಂತೆ ಮತ್ತೆ ಕೊರೋನಾ ವೈರಸ್‌ ಹಾವಳಿ.ರಾಜ್ಯದಲ್ಲಿ 35 ಜೆಎನ್.1 (JN.1) ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ (Bengaluru) ಹೆಚ್ಚು ಸಂಖ್ಯೆ ಇದ್ದ ಹಾಗೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ. ಆದರೆ ಹೊಸ ವರ್ಷ ಆಚರಣೆಗೆ ಸದ್ಯದ ಮಟ್ಟಿಗೆ ಯಾವುದೇ ರೂಲ್ಸ್‌ ಮಾಡಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

Advertisement

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ. ಜೆಎನ್.1 ಬಂದ ಬಗ್ಗೆ ಮಾಹಿತಿ ಇತ್ತು. ಅಧಿಕೃತವಾಗಿ ತಿಳಿಯಲು ಮಾತ್ರ ಸ್ಯಾಂಪಲ್ ಕಳುಹಿಸಲಾಗಿತ್ತು. ಸದ್ಯ ಯಾವುದೇ ಮಾರ್ಗಸೂಚಿ ಬರಲ್ಲ. ಇಡೀ ದೇಶದಲ್ಲಿ ಮಾರ್ಗಸೂಚಿ ಜಾರಿ ಇಲ್ಲ. ಜನ ಗುಂಪಾಗಿ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಇರಲ್ಲ. ಪಾಸಿಟಿವ್ ಬಂದವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದರು.

ಜೆಎನ್.1 ಬಂದಿದೆ ಅನ್ನೋ ಮಾಹಿತಿ ಇತ್ತು. ಸಿಎಂ ಹೇಳಿದ್ರು, ನಾನು ಹೇಳಿದ್ದೆ, WHO ಕೂಡ ಹೇಳಿತ್ತು. ಹೊಸದಾಗಿ ಗಾಬರಿ ಆಗುವಂತಹದ್ದು ಏನಿಲ್ಲ. ಎಚ್ಚರಿಕೆಯಿಂದ ಇರಿ ಎಂದು WHO ಕೂಡ ಹೇಳಿದೆ. ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಗೆ ಬೇರೆ ಬೇರೆ ರೋಗದ ಜೊತೆ ಸೋಂಕು ಕೂಡ ಇತ್ತು. ಜೆಎನ್.1 ಸೋಂಕಿನ ಬಗ್ಗೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ಜನರು ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸತ್ತವರಲ್ಲಿ ಜೆಎನ್.1 ಪತ್ತೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 35 ಜೆಎನ್.1 ವೈರಸ್ ಇರುವ ಮಾಹಿತಿ ಇದೆ. ಬಹುತೇಕ ಕೇಸ್‌ಗಳು ಬೆಂಗಳೂರಲ್ಲೇ ಇರುವ ಸಾಧ್ಯತೆಯಿದೆ. ನಾಳೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸಭೆ ಇದೆ. ಸಭೆಯಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ಜಿನೋಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳುಹಿಸಲಾಗಿತ್ತು. ಜೆಎನ್.1 ಕೇಸ್ ಇದೆ ಅನ್ನೋದು ಮೊದಲೇ ಗೊತ್ತಿತ್ತು. ಹೊಸ ವರ್ಷಕ್ಕೆ (New Year) ಎಲ್ಲೂ ಹೊಸ ಮಾರ್ಗಸೂಚಿ ಇಲ್ಲ. ಯಾವುದೇ ರೀತಿ ಗೈಡ್‌ಲೈನ್ಸ್ ಸದ್ಯ ಬಿಟ್ಟಿಲ್ಲ. ನಾಳೆ ಮಧ್ಯಾಹ್ನದ ನಂತರ ಆ ಬಗ್ಗೆ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು. ಸಭೆಯ ಬಳಿಕ ಮುಂದಿನ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಜೆಎನ್.1ರಿಂದಲೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸ ವರ್ಷದ ಆಚರಣೆಗೆ ನಾಳೆಯ ಸಭೆಯ ಬಳಿಕ ತಿಳಿಸುತ್ತೇವೆ. ಸದ್ಯಕ್ಕೆ ಯಾವುದೇ ರೂಲ್ಸ್ ಇಲ್ಲ ಎಂದರು.

Corona (Corona) new mutant JN.1 virus is increasing day by day. As the winter begins, the corona virus is once again plagued. 35 JN.1 (JN.1) have come positive in the state. Health Minister Dinesh Gundu Rao said that there is a high number in Bengaluru.
- ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |
April 7, 2025
2:11 PM
by: ಸಾಯಿಶೇಖರ್ ಕರಿಕಳ
ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |
April 7, 2025
12:27 PM
by: ವಿಶೇಷ ಪ್ರತಿನಿಧಿ
ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ
April 7, 2025
6:44 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್
April 7, 2025
6:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group