ನಾಯಿ ಸಾಕುವ ಹವ್ಯಾಸ ಹೊಂದಿದವರಿಗೆ, ನಾಯಿ ಪ್ರಿಯರಿಗೆ ನಾಯಿಗಾಗಿ ಖರ್ಚು ಮಾಡುವುದು ಅಚ್ಚರಿಯ ಅಲ್ಲ.ಆದರೆ ನಾಯಿ ಖರೀದಿಗೇ 20 ಕೋಟಿ ರೂಪಾಯಿ ಖರ್ಚು ಮಾಡಿದರೆ….!. ಇಂತಹದ್ದೊಂದು ದುಬಾರಿ ನಾಯಿ ಬೆಂಗಳೂರಿಗೆ ಬಂದಿದೆ. ಖರೀದಿ ಮಾಡಿದವರು ಕಡಬೊಮ್ ಕೆನ್ನೆಲ್ಸ್ ಸಂಸ್ಥೆ ಮಾಲೀಕರಾದ ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಅಧ್ಯಕ್ಷ ಬೆಂಗಳೂರಿನ ಸತೀಶ್.
ಬೆಂಗಳೂರಿನ ಸತೀಶ್ ಅವರಿಗೆ ದುಬಾರಿ ನಾಯಿಗಳನ್ನು ಖರೀದಿಸುವ ಹವ್ಯಾಸ. ಈಗ ಅವರು ಖರೀದಿಸಿರುವ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿ. ಇದು ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿ. ಇವು ಬಹಳ ವಿಶ್ವಾಸ, ಧೈರ್ಯಶಾಲಿ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು ಎಂದೇ ಹೆಸರುವಾಸಿ. ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿದ್ದು, 10-12 ವರ್ಷಗಳ ಕಾಲ ಬದುಕಬಲ್ಲವು.ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಈ ಜಾತಿಯ ನಾಯಿಗಳು ಮಾತ್ರ ಲಭ್ಯವಿವೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಕಾಣುವುದು ವಿರಳ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel