ಕಳೆದ 13 ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ಬೇರ್ಪಟ್ಟಿದ್ದ ದಂಪತಿಯನ್ನು ಉಡುಪಿಯಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ಮತ್ತೆ ಒಂದು ಮಾಡಿದೆ. ನ್ಯಾಯಾಧೀಶರು ಮತ್ತು ವಕೀಲರ ಸತತ ಪ್ರಯತ್ನದಿಂದಾಗಿ ದಂಪತಿ ವೈಮನಸ್ಸು ಮರೆತು ಒಂದಾಗಿದ್ದಾರೆ.
Advertisement
ಬ್ರಹ್ಮಾವರದ ಯುವಕ ಮತ್ತು ಮಂಗಳೂರಿನ ಮಹಿಳೆಯ ವಿವಾಹವು 2003ರ ಜೂ.27ರಂದು ಮಂಗಳೂರಿನಲ್ಲಿ ನಡೆದಿತ್ತು. . ಆದರೆ, ಗಂಡ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು ಕಳೆದ 13 ವರ್ಷಗಳಿಂದ ಗೀತಾ ದೂರವಾಗಿದ್ದರು. ಗಂಡನ ಮನೆ ತೊರೆದು ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ಉಡುಪಿಗೆ ಬಂದು ಗೀತಾ ವಾಸಿಸುತ್ತಿದ್ದರು. ಪತಿ ಮತ್ತು ಪತ್ನಿಯನ್ನು ಒಂದು ಮಾಡಲು ಹಲವಾರು ಬಾರಿ ರಾಜೀ ಪಂಚಾಯಿತಿ ನಡೆದರೂ ಫಲಕಾರಿಯಾಗಿರಲಿಲ್ಲ.
Advertisement
ಶನಿವಾರ ನಡೆದ ಲೋಕ್ ಅದಾಲತ್ನಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಸತತ ಪ್ರಯತ್ನದಿಂದಾಗಿ ಈ ಪ್ರಕರಣ ಇತ್ಯರ್ಥಗೊಂಡಿದ್ದು, ದಂಪತಿ ಒಂದಾಗಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement