ಪ್ರಾಣಿಗಳಿಗೂ ಬಂದಿದೆ ಭಾರತದ ಸ್ವದೇಶಿ ಕೋವಿಡ್ ಲಸಿಕೆ……!

June 10, 2022
6:28 PM

ಹರಿಯಾಣ ಮೂಲದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್  ಅಭಿವೃದ್ಧಿಪಡಿಸಿದ ಪ್ರಾಣಿಗಳಿಗಾಗಿ ದೇಶದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ಅನೋಕೊವಾಕ್ಸ್ ಅನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್  ಬಿಡುಗಡೆ ಮಾಡಿದ್ದಾರೆ.

Advertisement
Advertisement
Advertisement
Advertisement

ಪ್ರಾಣಿಗಳಿಗೆ ರೋಗನಿರೋಧಕ ಶಕ್ತಿ ಉಂಟು ಮಾಡುವ ಹಾಗೂ ಕೊರೋಲಾ ವೈರಸ್‌, ರೂಪಾಂತರ ವೈರಸ್‌ , ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಹೇಳಿಕೆಯಲ್ಲಿ ತಿಳಿಸಿದೆ. ಇದು ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳು ಮತ್ತು ಮೊಲಗಳಿಗೆ ಸುರಕ್ಷಿತವಾಗಿದೆ ಎಂದು ಇಲಾಖೆ ಹೇಳಿದೆ.

Advertisement

ಈ ರೋಗವು ಭಾರತದ ಎಲ್ಲಾ ಕೃಷಿ-ಹವಾಮಾನ ಭಾಗಗಳಲ್ಲಿ ವ್ಯಾಪಕವಾಗಿದೆ. ಭಾರತದಲ್ಲಿ, ಜಾನುವಾರು ಉತ್ಪಾದಕತೆಗೆ ವಾರ್ಷಿಕವಾಗಿ 44,740 ಮಿಲಿಯನ್ ನಷ್ಟಗಳು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಇಂತಹ ಅನ್ವೇಷಣೆ ಅಗತ್ಯ ಎಂದು ಥೋಮರ್‌ ಅಭಿಪ್ರಾಯಪಟ್ಟರು. ವಿಜ್ಞಾನಿಗಳ ಅವಿರತ ಕೊಡುಗೆಗಳಿಂದಾಗಿ ದೇಶವು ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿ ನಿಂತಿದೆ. ಇದು ನಿಜವಾಗಿಯೂ ದೊಡ್ಡ ಸಾಧನೆಯಾಗಿದೆ ಎಂದು ಸಚಿವ ಥೋಮರ್‌ ಹೇಳಿದರು.

ಐಸಿಎಆರ್ ಮಹಾನಿರ್ದೇಶಕ ತ್ರಿಲೋಚನ್ ಮೊಹಾಪಾತ್ರ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಕಾರ್ಯದರ್ಶಿ ಅತುಲ್ ಚತುರ್ವೇದಿ, ಐಸಿಎಆರ್ ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ಭೂಪೇಂದ್ರ ನಾಥ್ ತ್ರಿಪಾಠಿ ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ
ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror