ಪ್ರಾಣಿಗಳಿಗೂ ಕೋವಿಡ್ ಲಸಿಕೆ | ಪ್ರಯೋಗಕ್ಕಾಗಿ ಐದು ಮೃಗಾಲಯಗಳ ಆಯ್ಕೆ..! |

January 23, 2022
12:01 PM

ಕೊರೊನಾ ವೈರಸ್ ಜನರಿಗೆ ಮಾತ್ರವೇ ಹರಡುವ ಸಾಮಾನ್ಯ ಸೋಂಕು ಅಲ್ಲ, ಬದಲಿಗೆ ಪ್ರಾಣಿಗಳಿಗೂ ಈ ಸೋಂಕು ಹರಡುತ್ತದೆ. ಇದೀಗ ಚೆನ್ನೈನಲ್ಲಿ ಈ ವೈರಸ್‌ಗೆ ಎರಡು ಸಿಂಹಗಳು ಬಲಿಯಾಗಿವೆ. ಆದುದರಿಂದ ಸರ್ಕಾರ ಪ್ರಾಣಿಗಳಿಗೂ ಲಸಿಕೆಯನ್ನು ನಿಡಲು ಮುಂದಾಗಿದೆ.

ಹರಿಯಾಣದ ಹಿಸಾರ್‌ನಲ್ಲಿರುವ ಐಸಿಎಆರ್- ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವಿನ್ಸ್ ಅಭಿವೃದ್ಧಿಪಡಿಸಿದ ಲಸಿಕೆ ದೇಶಾದ್ಯಂತ ಆರು ಮೃಗಾಲಯಗಳಲ್ಲಿ ಪ್ರಾಯೋಗಿಕ ಪ್ರಯೋಗಗಳಿಗೆ ಸಿದ್ಧವಾಗಲಿದೆ. ದೆಹಲಿ, ಜೈಪುರ, ನಾಗ್ಪುರ, ಭೋಪಾಲ್ ಮತ್ತು ಜೈಪುರ್ ಇತರ ಐದು ಮೃಗಾಲಯಗಳನ್ನು ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ. ಲಸಿಕೆಯನ್ನು ನಿರ್ದಿಷ್ಟವಾಗಿ ಪ್ರಾಣಿಗಳಿಗೆ ಮಾತ್ರಾ ನೀಡಲಾಗುತ್ತದೆ ಮತ್ತು 28 ದಿನಗಳ ಅಂತರದೊಂದಿಗೆ ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸಿಂಹ ಹುಲಿ ಮತ್ತು ಚಿರತೆಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆಗೆ ಇನ್ನೂ ಅಂತಿಮ ಅನುಮೋದನೆ ಸಿಗಬೇಕಿದೆ.

ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ಲಸಿಕೆ ಅಭಿವೃದ್ಧಿಪಡಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಐಸಿಎಆರ್-ಎನ್‌ಆರ್‌ಸಿಇ ಗೆ ನಿರ್ದೇಶನವನ್ನು ನೀಡಿದೆ.

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಲೆನಾಡು-ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಎಲ್ಲಾಗುತ್ತಿದೆ…? | ಇಳುವರಿ ಕೊರೆತೆಯಾಗುತ್ತಿರುವುದು ಏಕೆ..? | ಏನು ಮಾಡಬಹುದು ಮುಂದೆ..?
March 19, 2025
11:23 AM
by: ಮಹೇಶ್ ಪುಚ್ಚಪ್ಪಾಡಿ
ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ
March 19, 2025
6:41 AM
by: ದ ರೂರಲ್ ಮಿರರ್.ಕಾಂ
ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್
March 19, 2025
6:22 AM
by: The Rural Mirror ಸುದ್ದಿಜಾಲ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror