ಕೊರೊನಾ ವೈರಸ್ ಜನರಿಗೆ ಮಾತ್ರವೇ ಹರಡುವ ಸಾಮಾನ್ಯ ಸೋಂಕು ಅಲ್ಲ, ಬದಲಿಗೆ ಪ್ರಾಣಿಗಳಿಗೂ ಈ ಸೋಂಕು ಹರಡುತ್ತದೆ. ಇದೀಗ ಚೆನ್ನೈನಲ್ಲಿ ಈ ವೈರಸ್‌ಗೆ ಎರಡು ಸಿಂಹಗಳು ಬಲಿಯಾಗಿವೆ. ಆದುದರಿಂದ ಸರ್ಕಾರ ಪ್ರಾಣಿಗಳಿಗೂ ಲಸಿಕೆಯನ್ನು ನಿಡಲು ಮುಂದಾಗಿದೆ.
ಹರಿಯಾಣದ ಹಿಸಾರ್‌ನಲ್ಲಿರುವ ಐಸಿಎಆರ್- ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವಿನ್ಸ್ ಅಭಿವೃದ್ಧಿಪಡಿಸಿದ ಲಸಿಕೆ ದೇಶಾದ್ಯಂತ ಆರು ಮೃಗಾಲಯಗಳಲ್ಲಿ ಪ್ರಾಯೋಗಿಕ ಪ್ರಯೋಗಗಳಿಗೆ ಸಿದ್ಧವಾಗಲಿದೆ. ದೆಹಲಿ, ಜೈಪುರ, ನಾಗ್ಪುರ, ಭೋಪಾಲ್ ಮತ್ತು ಜೈಪುರ್ ಇತರ ಐದು ಮೃಗಾಲಯಗಳನ್ನು ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ. ಲಸಿಕೆಯನ್ನು ನಿರ್ದಿಷ್ಟವಾಗಿ ಪ್ರಾಣಿಗಳಿಗೆ ಮಾತ್ರಾ ನೀಡಲಾಗುತ್ತದೆ ಮತ್ತು 28 ದಿನಗಳ ಅಂತರದೊಂದಿಗೆ ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸಿಂಹ ಹುಲಿ ಮತ್ತು ಚಿರತೆಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆಗೆ ಇನ್ನೂ ಅಂತಿಮ ಅನುಮೋದನೆ ಸಿಗಬೇಕಿದೆ.
ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ಲಸಿಕೆ ಅಭಿವೃದ್ಧಿಪಡಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಐಸಿಎಆರ್-ಎನ್‌ಆರ್‌ಸಿಇ ಗೆ ನಿರ್ದೇಶನವನ್ನು ನೀಡಿದೆ.
ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 22 ರಿಂದ ಬೇಸಿಗೆ ಮಳೆ ಆರಂಭವಾಗುವ…
ಈಚೆಗೆ ಕರಾವಳಿ-ಮಲೆನಾಡು ಭಾಗದಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಅದರ ಜೊತೆಗೇ ತೇವಾಂಶ ಗಣನೀಯವಾಗಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ…
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…