ಅಂಗವಿಕಲ ಹಸುವಿಗೆ ಕೃತಕ ಕಾಲು ಜೋಡಣೆ | ತ್ರಿಶೂರ್‌ ನಲ್ಲಿ ಮಾನವೀಯತೆಯ ಕಥೆ |

January 22, 2022
9:59 PM

ಹಸುವಿಗೆ ಕೃತಕ ಕಾಲು ಜೋಡಣೆಯ ಮೂಲಕ ಮೂರು ವರ್ಷದ ಹಸುವನ್ನು  ರಕ್ಷಣೆ ಮಾಡಿದ ಘಟನೆ ಕೇರಳದ ತ್ರಿಶೂರ್‌  ಮಣಲೂರು ಕುಂದುಕುಲಂನಲ್ಲಿ ನಡೆದಿದೆ.  ಕೃಷಿಕ ಡೇವಿಸ್ ಮತ್ತು ಅವರ ಕುಟುಂಬದವರು ಈ ಸಂತಸ ಹಾಗೂ  ಮಾನವೀಯ ಕಾರ್ಯವನ್ನು ಹಂಚಿಕೊಂಡಿದ್ದಾರೆ.

ಒಂದು ವರುಷದ ಮಣಿಕುಟ್ಟಿ ಎಂಬ ಹಸುವನ್ನು ಮೇಯಿಸಲು ತೆಂಗಿನ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿ ದಾಳಿಯಿಂದ ಹೆದರಿ ತೆಂಗಿನಮರದ ಸುತ್ತಲೂ ಓಡಿತ್ತು. ಆಗ ಹಸುವಿನ ಕಾಲಿಗೆ ಹಗ್ಗ ಸುತ್ತಿ ಬಿದ್ದು ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಚಿಕಿತ್ಸೆಯಲ್ಲಿ ಗಮನಿಸಿದಾಗ  ಹಸುವಿನ ಕಾಲು ತುಂಡಾಗಿರುವುದು  ತಿಳಿಯಿತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರು ಕಾಲು ಕತ್ತರಿಸಲು ಸಲಹೆ ನೀಡಿದರು.  ನಂತರ, ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿ  ಬ್ಯಾಂಡೆಜ್‌ ಹಾಕಿದ್ದರು.

ಬಳಿಕ ಡೇವಿಡ್ ಕುಟುಂಬವು ಹಸುವಿಗೆ ಕೃತಕ ಕಾಲುವನ್ನು ಅಳವಡಿಸುವ ಬಗ್ಗೆ ಯೋಚಿಸಿದರು. ತ್ರಿಶೂರ್ ನಲ್ಲಿರುವ ಕಿಟ್‌ಕ್ಯಾಟ್ ಅರ್ಥೋಟಿಕ್ಸ್  ಸೆಂಟರ್‌ನಲ್ಲಿ ಈ ಬಗ್ಗೆ ಮಾತನಾಡಿದರು. ಪ್ರಾಯೋಗಿಕ ಆಧಾರದ ಮೇಲೆ  ಕಳೆದ ತಿಂಗಳು ಮಣಿಕುಟ್ಟಿಗೆ ಕೃತಕ ಕಾಲು ಅಳವಡಿಸಲಾಗಿತ್ತು.

ಈಗ ಮಣಿಕುಟ್ಟಿಯು ಅಳವಡಿಸಿಕ ಕೃತಕ ಕಾಲಿನಿಂದ 5೦ ಮೀಟರು ನಡೆಯಲು ಪ್ರಾರಂಭಿಸಿದಳು. ನಿಧಾನವಾಗಿ ಆರಾಮವಾಗಿ ನಡೆಯಲು ಸಹ ಪ್ರಾರಂಭಿಸಿದ್ದಾಳೆ ಎಂದು ಡೇವಿಡ್‌ ಕುಟುಂಬ ಹೇಳಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
March 30, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror