ಹಸುವಿಗೆ ಕೃತಕ ಕಾಲು ಜೋಡಣೆಯ ಮೂಲಕ ಮೂರು ವರ್ಷದ ಹಸುವನ್ನು ರಕ್ಷಣೆ ಮಾಡಿದ ಘಟನೆ ಕೇರಳದ ತ್ರಿಶೂರ್ ಮಣಲೂರು ಕುಂದುಕುಲಂನಲ್ಲಿ ನಡೆದಿದೆ. ಕೃಷಿಕ ಡೇವಿಸ್ ಮತ್ತು ಅವರ ಕುಟುಂಬದವರು ಈ ಸಂತಸ ಹಾಗೂ ಮಾನವೀಯ ಕಾರ್ಯವನ್ನು ಹಂಚಿಕೊಂಡಿದ್ದಾರೆ.
ಒಂದು ವರುಷದ ಮಣಿಕುಟ್ಟಿ ಎಂಬ ಹಸುವನ್ನು ಮೇಯಿಸಲು ತೆಂಗಿನ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿ ದಾಳಿಯಿಂದ ಹೆದರಿ ತೆಂಗಿನಮರದ ಸುತ್ತಲೂ ಓಡಿತ್ತು. ಆಗ ಹಸುವಿನ ಕಾಲಿಗೆ ಹಗ್ಗ ಸುತ್ತಿ ಬಿದ್ದು ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಚಿಕಿತ್ಸೆಯಲ್ಲಿ ಗಮನಿಸಿದಾಗ ಹಸುವಿನ ಕಾಲು ತುಂಡಾಗಿರುವುದು ತಿಳಿಯಿತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರು ಕಾಲು ಕತ್ತರಿಸಲು ಸಲಹೆ ನೀಡಿದರು. ನಂತರ, ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿ ಬ್ಯಾಂಡೆಜ್ ಹಾಕಿದ್ದರು.
ಬಳಿಕ ಡೇವಿಡ್ ಕುಟುಂಬವು ಹಸುವಿಗೆ ಕೃತಕ ಕಾಲುವನ್ನು ಅಳವಡಿಸುವ ಬಗ್ಗೆ ಯೋಚಿಸಿದರು. ತ್ರಿಶೂರ್ ನಲ್ಲಿರುವ ಕಿಟ್‌ಕ್ಯಾಟ್ ಅರ್ಥೋಟಿಕ್ಸ್ ಸೆಂಟರ್‌ನಲ್ಲಿ ಈ ಬಗ್ಗೆ ಮಾತನಾಡಿದರು. ಪ್ರಾಯೋಗಿಕ ಆಧಾರದ ಮೇಲೆ ಕಳೆದ ತಿಂಗಳು ಮಣಿಕುಟ್ಟಿಗೆ ಕೃತಕ ಕಾಲು ಅಳವಡಿಸಲಾಗಿತ್ತು.
ಈಗ ಮಣಿಕುಟ್ಟಿಯು ಅಳವಡಿಸಿಕ ಕೃತಕ ಕಾಲಿನಿಂದ 5೦ ಮೀಟರು ನಡೆಯಲು ಪ್ರಾರಂಭಿಸಿದಳು. ನಿಧಾನವಾಗಿ ಆರಾಮವಾಗಿ ನಡೆಯಲು ಸಹ ಪ್ರಾರಂಭಿಸಿದ್ದಾಳೆ ಎಂದು ಡೇವಿಡ್ ಕುಟುಂಬ ಹೇಳಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…