#ViralVideo | ರಸ್ತೆ ಬದಿಯ ಹಸುಗಳು-ಎತ್ತುಗಳ ಬಗ್ಗೆ ಇರಲಿ ಎಚ್ಚರ | ಚೆನ್ನೈಯಲ್ಲಿ ಶಾಲಾ ಬಾಲಕಿಯ ಮೇಲೆ ಭಯಾನಕ ರೀತಿಯಲ್ಲಿ ದಾಳಿ ನಡೆಸಿದ ಗೂಳಿ..! |

August 10, 2023
9:53 PM
ಚೆನ್ನೈನಲ್ಲಿ ಶಾಲಾ ಬಾಲಕಿಯ ಮೇಲೆ ರಸ್ತೆ ಬದಿಯಲ್ಲಿ  ಅಡ್ಡಾಡುತ್ತಿದ್ದ ಗೂಳಿಯೊಂದು ಭಯಾನಕ ರೀತಿಯಲ್ಲಿ ದಾಳಿ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ರಸ್ತೆ ಬದಿಯಲ್ಲಿ ಅಡ್ಡಾಡುವ ಹಸು, ಎತ್ತುಗಳ ಬಗ್ಗೆ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಬುಧವಾರ ಚೆನ್ನೈನಲ್ಲಿ ಶಾಲಾ ಬಾಲಕಿಯ ಮೇಲೆ ರಸ್ತೆ ಬದಿಯಲ್ಲಿ  ಅಡ್ಡಾಡುತ್ತಿದ್ದ ಗೂಳಿಯೊಂದು ಭಯಾನಕ ರೀತಿಯಲ್ಲಿ ದಾಳಿ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಇದೀಗ ಆಡಳಿತವು ಎಚ್ಚೆತ್ತುಕೊಂಡಿದೆ.ಈ ಘಟನೆಯು ಎಲ್ಲಾ ಕಡೆಗೂ ಎಚ್ಚರಿಕೆ ಆಗಬೇಕಿದೆ.

Advertisement

ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೇಲೆ ಗೂಳಿಯೊಂದು ದಾಳಿ ನಡೆಸಿ  ಗಾಯಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಚೆನ್ನೈನ ಎಂಎಂಡಿಎ ಕಾಲೋನಿ ಬಳಿಯ ಎಲಂಗೋ ನಗರದಲ್ಲಿ ಬುಧವಾರ ಮಧ್ಯಾಹ್ನ 3.20 ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಂಧಿನಗರದ ನಿವಾಸಿ ಆಯೇಷಾ ತನ್ನ ತಾಯಿ ಮತ್ತು ತನ್ನ ಕಿರಿಯ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಗೂಳಿಯು ದಾಳಿ ಮಾಡಿದೆ.

ಸಮೀಪದ ಮನೆಯೊಂದರಿಂದ ದೊರೆತ ಸಿಸಿಟಿವಿ ವಿಡಿಯೋದಲ್ಲಿ ಎರಡು ಹಸುಗಳು ಬಾಲಕಿ ಮುಂದೆ ನಡೆಯುತ್ತಿರುವುದು ಕಂಡು ಬಂದಿದೆ. ಇದ್ದಕ್ಕಿದ್ದಂತೆ, ಒಂದು ಹಸುವು ಹುಡುಗಿಯ ಕಡೆಗೆ ತಿರುಗಿ ಅವಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಕೊಂಬುಗಳಿಂದ ತಿವಿದು ಬಾಲಕಿಯನ್ನು ಎತ್ತಿ ಎಸೆದಿದೆ. ಈ ಸಂದರ್ಭ ಸ್ಥಳೀಯರು ಗೂಳಿಯನ್ನು  ಹೆದರಿಸಲು ಪ್ರಯತ್ನಿಸುತ್ತಿರುವುದು ಹಾಗೂ ಬಾಲಕಿಯ ತಾಯಿ ಸಹಾಯಕ್ಕಾಗಿ ಕುರುಚಾಡುತ್ತಿರುವುದು  ವಿಡಿಯೋದಲ್ಲಿ ಕಂಡುಬಂದಿದೆ. ಸತತ ಪ್ರಯತ್ನಗಳ ನಂತರ, ಗೂಳಿಯನ್ನು ಸ್ಥಳದಿಂದ ಸ್ಥಳೀಯರು ಓಡಿಸಿದ್ದಾರೆ. ಬಾಲಕಿ ಗಾಯಗೊಂಡಿದ್ದಳು.

ಈ ವಿಡಿಯೋ ವೈರಲ್‌ ಆಗಿರುವುದು  ಗಮನಿಸಿದ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಜೆ ರಾಧಾಕೃಷ್ಣನ್, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೊ ಬ್ರ್ಯಾಂಡ್ ಅಡಿಕೆ ಅಂತರಾಷ್ಟ್ರೀಯ ಮಟ್ಟಕ್ಕೆ
March 29, 2025
11:04 PM
by: ದ ರೂರಲ್ ಮಿರರ್.ಕಾಂ
ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group