ದೇಶದಲ್ಲಿ ಕೃಷಿ ಬೆಳವಣಿಗೆಯಾಗುತ್ತಿದೆ. ಯುವಕರೂ ಕೃಷಿಗೆ ಬರುತ್ತಿದ್ದಾರೆ. ಈಗ ಕೃಷಿ ವಿಸ್ತಾರದ ಬದಲಿಗೆ ಕೃಷಿ ಸುದೃಢತೆಯ ಅವಶ್ಯಕತೆ ಇದೆ. ಇದಕ್ಕಾಗಿ ತಾಂತ್ರಿಕ ಮಾಹಿತಿಗಳು ಕೃಷಿಕನಿಗೆ ಲಭ್ಯವಾಗಬೇಕು ಎಂದು ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ತೊಟ್ಟೆತ್ತೋಡಿ ಹೇಳಿದರು.
ಅವರು ಶುಕ್ರವಾರ ಕೌಡಿಚ್ಚಾರಿನ ಗುಂಡ್ಯಡ್ಕ ವಾಸು ಪೂಜಾರಿಯವರ ಮನೆಯಲ್ಲಿ ವಿಟ್ಲ ಸಿಪಿಸಿಆರ್‌ಐ ಹಾಗೂ ಅಡಿಕೆ ಕೃಷಿಕರ ಸಂಯುಕ್ತ ಆಶ್ರಯದಲ್ಲಿ ನಡೆದ “ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ” ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳುವ ದಿನಗಳು ಬರಬೇಕು. ಕೃಷಿ ಸಮಸ್ಯೆಗಳಿಗೆ, ಕೃಷಿ ರೋಗಗಳಿಗೆ ಪರಿಹಾರಗಳು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಲಭ್ಯವಾಗಬೇಕು. ಈಗ ಅಂತಹ ಕಾರ್ಯಗಳನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.
ಸಭಾಧ್ಯಕ್ಷತೆ ವಹಿಸಿದ್ದ ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಸಿ.ಟಿ.ಜೋಸ್ ಮಾತನಾಡಿ, ಅಡಿಕೆಗೆ ಧಾರಣೆ ಇರುವ ಈ ಸಮಯದಲ್ಲಿ ಕೃಷಿಕರಿಗೆ ಕೌಶಲ್ಯಯುಕ್ತ ಕಾರ್ಮಿಕರ ಅಗತ್ಯವೂ ಇದೆ. ಇದಕ್ಕಾಗಿ ಕೃಷಿಕರಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ಅಗತ್ಯವಿದೆ. ಈಗಾಗಲೇ ಅಡಿಕೆಗೆ ಹೊಸ ಹೊಸ ರೋಗಗಳು ಕಂಡುಬರುತ್ತಿದೆ.ಇದನ್ನು ಪತ್ತೆ ಮಾಡಿ ಸೂಕ್ತ ಪರಿಹಾರ ಮಾರ್ಗಗಳನ್ನು ಸಂಸ್ಥೆಯ ಯುವ ವಿಜ್ಞಾನಿಗಳ ತಂಡ ಮಾಡುತ್ತಿದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಅಡಿಕೆಯ ಸುಧಾರಿತ ತಳಿಗಳ ಬಗ್ಗೆ ಹಾಗೂ ಅಡಿಕೆ ತೋಟ ನಿರ್ವಹಣೆ ಬಗ್ಗೆ ಡಾ.ಭವಿಷ್ಯ , ಅಡಿಕೆ-ಕಾಳುಮೆಣಸು-ಜಾಯಿಕಾಯಿ ಮಿಶ್ರ ಕೃಷಿ ಬಗ್ಗೆ ಕೃಷಿಕ ಸುರೇಶ್ಚಂದ್ರ ತೊಟ್ಟೆತೋಡಿ ಮಾಹಿತಿ ನೀಡಿದರು.
ಅಡಿಕೆ ಬೇರು ಹುಳು ಹಾಗೂ ಮೈಟ್ ಮತ್ತು ಇತರ ರೋಗಗಳ ಬಗ್ಗೆ ಡಾ.ರಾಜ್ ಕುಮಾರ್, ಹಿಂಗಾರ ಒಣಗುವ ರೋಗ, ಎಲೆಚುಕ್ಕಿರೋಗದ ಬಗ್ಗೆ ಡಾ.ಥವಾಪ್ರಕಾಶ್ ಪಾಂಡ್ಯನ್, ಡಾ.ಶಿವಾಜಿ ತುಬೆ ಮಾಹಿತಿ ನೀಡಿದರು. ಹಿಂಗಾರ ಒಣಗುವ ರೋಗದ ಸಮಗ್ರ ನಿರ್ವಹಣೆಯ ಬಗ್ಗೆ ಅನುಭವಿ ಕೃಷಿಕ ವಿಷ್ಣು ಭಟ್ ಮಾಹಿತಿ ನೀಡಿದರು. ಬಳಿಕ ಬೋರ್ಡೋ ತಯಾರಿ ಬಗ್ಗೆ ಪುರಂದರ ಚಂದಳಿಕೆ, ಕಾರ್ಬನ್ ಫೈಬರ್ ದೋಟಿ ಬಳಸಿ ಸಿಂಪಡಣೆ ಹಾಗೂ ಕೊಯ್ಲು ಬಗ್ಗೆ ಸುಬ್ರಹ್ಮಣ್ಯ ಭಟ್ ಕೈಲಾರು ಮತ್ತು ಗೋಣಿಗೊನೆಯ ಬಗ್ಗೆ ಕೃಷಿಕ ಸುಭಾಶ್ ಮುಂಡ್ಯ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…