ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ ಕುರಿತು ವಿಟ್ಲದ ಸಿ.ಪಿ.ಸಿ.ಆರ್.ಐ. ಸಂಸ್ಥೆಯ ವತಿಯಿಂದ ಫೆ.4 ರಂದು ಪುತ್ತೂರು ತಾಲೂಕು ಕೌಡಿಚ್ಚಾರಿನ ಗುಂಡ್ಯಡ್ಕ ವಾಸು ಪೂಜಾರಿಯವರ ತೋಟದಲ್ಲಿ ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ವಿಟ್ಲ ಸಿ.ಪಿ.ಸಿ.ಆರ್.ಐ ಮುಖ್ಯಸ್ಥ ಡಾ.ಸಿ ಟಿ ಜೋಸ್ ತಿಳಿಸಿದ್ದಾರೆ.
ಅಡಿಕೆಯ ಪೋಷಕಾಂಶ ನಿರ್ವಹಣೆಯ ಸರಿಯಾದ ಕ್ರಮಗಳು ಮತ್ತು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿರುವ ಎಲೆಚುಕ್ಕೆ ಮತ್ತು ಸಿಂಗಾರ ಒಣಗುವ ರೋಗ ಸೇರಿದಂತೆ ಇನ್ನಿತರ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ತಜ್ಞರಿಂದ ಮಾಹಿತಿ ದೊರೆಯಲಿದೆ. ಅಲ್ಲದೆ, ಔಷಧಿ ಸಿಂಪರಣೆ ಮತ್ತು ಅಡಿಕೆ ಗೊನೆ ಕೊಯ್ಲು ಮಾಡಲು ಇತ್ತೀಚೆಗೆ ಪ್ರಚಲಿತಕ್ಕೆ ಬಂದಿರುವ ಕಾರ್ಬನ್ ಫೈಬರ್ ದೋಟಿಯ ಪ್ರಾತ್ಯಕ್ಷಿಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಡಿಕೆಯಲ್ಲಿ ಪೋಷಕಾಂಶ ನಿರ್ವಹಣೆ: ಮರದ ಆರೋಗ್ಯ ವೃದ್ಧಿಸುವ ಸಲುವಾಗಿ ಅನುಸರಿಸಬೇಕಾದ ಕ್ರಮಗಳು, ಎಲೆಚುಕ್ಕೆ, ಹಿಂಗಾರ ಒಣಗುವಿಕೆ, ಬುಡ ಕೊಳೆ, ಕುಬೆ ಕೊಳೆ ಸೇರಿದಂತೆ ಇನ್ನಿತರ ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ, ಮೈಟ್, ಪೆಂತಿ ಕೀಟ, ಬೇರು ಹುಳ ಮತ್ತು ಇನ್ನಿತರ ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ಹಾಗೂ ಅಡಿಕೆಯಲ್ಲಿ ಇತ್ತೀಚೆಗೆ ಹೊಸದಾಗಿ ಕಂಡುಬರುತ್ತಿರುವ ರೋಗ, ಕೆಂಪು ಮೂತಿಯ ಹುಳ, ಬೇರು ಕೊಳೆಗಳ ನಿರ್ವಹಣೆ ಹಾಗೂ ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮೆಣಸು ಮತ್ತು ಜಾಯಿಕಾಯಿಯನ್ನು ಯಶಸ್ವಿಯಾಗಿ ಬೆಳೆದ ಮತ್ತು ಸಿಂಗಾರ ಒಣಗುವ ರೋಗವನ್ನು ಹತೋಟಿ ಮಾಡಿದ ಕೃಷಿಕರ ಅನುಭವದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.
ಇದೇ ವೇಳೆ ಕಾರ್ಬನ್ ಫೈಬರ್ ದೋಟಿ ಬಳಸಿ ಔಷಧ ಸಿಂಪಡಣೆ ಮತ್ತು ಕೊಯ್ಲು, ಗೋಣಿ ಚೀಲ ಬಳಸಿ ಗೊನೆ ಹಿಡಿಯುವಿಕೆ ಹಾಗೂ ಕೀಟ ಮತ್ತು ರೋಗಗಳ ಜೀವಂತ ಮಾದರಿಗಳು ಮತ್ತು ಪರಿಣಿತರಿಂದ ಸಮಗ್ರ ಮಾಹಿತಿ ನಡೆಯಲಿದೆ.
ಕಾರ್ಯಕ್ರಮವು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು ವಿಟ್ಲದ ಸಿ.ಪಿ.ಸಿ ಆರ್.ಐ ಸಂಸ್ಥೆಯ ಮುಖ್ಯಸ್ಥ ಡಾ. ಸಿ. ಟಿ. ಜೋಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಅನುಭವಿ ಕೃಷಿಕ ಸುರೇಶ್ಚಂದ್ರ ತೊಟ್ಟೆತೋಡಿ ಉದ್ಘಾಟಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿ.ಪಿ.ಸಿ.ಆರ್.ಐ ವಿಜ್ಞಾನಿ ಭವಿಷ್ಯ (9538346917)ರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…