ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ ಉದ್ದೇಶ ಇದೆ ಎಂದು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಹೇಳಿದರು…..ಮುಂದೆ ಓದಿ….
ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ವತಿಯಿಂದ ನಡೆದ ಕೃಷಿಗೋಷ್ಟಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಶವ ಪ್ರಸಾದ್ ಮುಳಿಯ ಅವರು ಕೃಷಿ ಬೆಳವಣಿಗೆಗೆ ವಿವಿಧ ಸಲಹೆ, ಮಾರ್ಗದರ್ಶನ ಬೇಕಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳು ರಜಾ ದಿನ, ಬಿಡುವಿನ ವೇಳೆಯಲ್ಲಿ ಕೃಷಿಯ ವಿಚಾರಗಳ ಕುರಿತು ತಜ್ಞರಿಂದ ಅಕಾಡೆಮಿಯ ಮೂಲಕ ಮಾಹಿತಿ ನೀಡುವ ಬಗ್ಗೆ ಯೋಚನೆ ಇದೆ ಎಂದು ಹೇಳಿದರು. ಕೃಷಿಯಲ್ಲಿರುವ ಪಾರಂಪರಿಕವಾದ ಜ್ಞಾನಗಳು ಮುಂದಿನ ತಲೆಮಾರಿಗೆ ಹಸ್ತಾಂತರವಾಗಬೇಕಿದೆ, ಸಣ್ಣ ಸಣ್ಣ ಕಾರ್ಯಗಳೂ ಕೃಷಿಯಲ್ಲಿ ಮುಖ್ಯವಾಗುತ್ತದೆ. ಹೀಗಾಗಿ ಅಕಾಡೆಮಿಯ ಮೂಲಕ ವ್ಯವಸ್ಥಿತವಾಗಿ ಮಾಹಿತಿ ನೀಡುವ ಬಗ್ಗೆ ಯೋಚನೆ ಇದೆ ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel